ಪರಿಸರ ವ್ಯವಸ್ಥೆಗೆ ಹಾನಿ ಮಾಡುತ್ತಿವೆ ಸರೋವರಗಳಿಗೆ ಎಸೆಯುತ್ತಿರುವ ಗೋಲ್ಡ್ ಫಿಶ್
Gold Fish: ಸರೋವರಗಳಲ್ಲಿ ಅಥವಾ ಸ್ಥಳೀಯ ಜಲಮಾರ್ಗಗಳಲ್ಲಿ ಮೀನುಗಾರನು ಹಿಡಿದ ಗೋಲ್ಡ್ ಫಿಶ್ಗಳನ್ನು ಮತ್ತೆ ಸರೋವರಕ್ಕೆ ಬೀಡಕೂಡದು ಎಂದು ವರ್ಜೀನಿಯಾದ ವನ್ಯಜೀವಿ ಅಧಿಕಾರಿಗಳು ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ.
ವಿನ್ನೇಸೋಟದ ಸ್ಥಳೀಯ ಸರೋವರಗಳಲ್ಲಿ ಬೃಹತ್ ಗಾತ್ರದ ಚಿನ್ನ ಮೀನುಗಳು ಬಲೆಗೆ ಸಿಕ್ಕಿಬಿದ್ದಿವೆ. ವಿಷಯ ತಿಳಿದ ಅಧಿಕಾರಿಗಳು ಸಾಕು ಮೀನುಗಳನ್ನು ಸ್ಥಳೀಯ ಜಲಮಾರ್ಗಗಳಿಗೆ ಬಿಡುವುದನ್ನು ನಿಲ್ಲಿಸುವಂತೆ ಎಂದು ಮನವಿ ಮಾಡಿದ್ದಾರೆ. ಗೋಲ್ಡ್ ಫಿಶ್ಗಳು ಸಾಮಾನ್ಯ ಗಾತ್ರಕ್ಕಿಂತ ಹಲವಾರು ಪಟ್ಟು ಬೆಳೆಯುತ್ತವೆ. ಇವು ಸ್ಥಳೀಯ ಜಲಮಾರ್ಗಗಳಲ್ಲಿ ವಾಸುಸುತ್ತಿರುವ ಮೀನುಗಳ ಪ್ರಬೇಧಗಳಿಗೆ ಹಾನಿಯುಂಟು ಮಾಡುತ್ತವೆ. ಆದ್ದರಿಂದ ಸಾಕು ಮೀನುಗಳನ್ನು ಸ್ಥಳೀಯ ಸರೋವರಗಳಲ್ಲಿ ಬಿಡುವುದನ್ನು ತಪ್ಪಿಸಬೇಕು ಎಂದು ಅಧಿಕಾರಿಗಳು ಕೇಳಿಕೊಂಡಿದ್ದಾರೆ.
ಅಕ್ವೇರಿಯಮ್ನಲ್ಲಿ ಸಾಕಿದ ಗೋಲ್ಡ್ ಫಿಶ್ಗಳನ್ನು ದಯವಿಟ್ಟು ಸರೋವರಗಳಲ್ಲಿ ಅಥವಾ ಹತ್ತಿರದ ಕೊಳಗಳಲ್ಲಿ ಬಿಡಬೇಡಿ ಎಂದು ಟ್ವೀಟ್ ಹಂಚಿಕೊಳ್ಳಲಾಗಿದೆ. ನೀವು ಅಂದಾಜಿಸಲೂ ಸಾಧ್ಯವಿಲ್ಲದಷ್ಟು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ. ನೀರಿನ ತಳಭಾಗದಲ್ಲಿರುವ ಕೆಸರುಗಳನ್ನು ಹಾಗೂ ಸಸ್ಯಗಳನ್ನು ಕಿತ್ತುಹಾಕುತ್ತವೆ. ಇದರಿಂದ ನೀರು ಕಲುಷಿತಗೊಳ್ಳುತ್ತದೆ. ಜತೆಗೆ ಮೊದಲಿನಿಂದಲೂ ವಾಸಿಸುತ್ತಿರುವ ಸ್ಥಳೀಯ ಮೀನಿನ ಪ್ರಬೇಧಗಳಿಗೆ ಹಾನಿಯುಂಟಾಗುತ್ತದೆ ಎಂದು ಹೇಳಿದ್ದಾರೆ.
Please don’t release your pet goldfish into ponds and lakes! They grow bigger than you think and contribute to poor water quality by mucking up the bottom sediments and uprooting plants. Groups of these large goldfish were recently found in Keller Lake. pic.twitter.com/Zmya2Ql1E2
— City of Burnsville (@BurnsvilleMN) July 9, 2021
ಕಳೆದ ನವೆಂಬರ್ ತಿಂಗಳಿನಲ್ಲಿ ಅಧಿಕಾರಿಗಳು ಸ್ಥಳೀಯ ನೀರಿನಿಂದ 50,000ಕ್ಕೂ ಹೆಚ್ಚು ಗೋಲ್ಡ್ ಫಿಶ್ಗಳನ್ನು ತೆಗೆದುಹಾಕಿದ್ದಾರೆ. ಇವು ನೀರಿ ಗುಣಮಟ್ಟವನ್ನು ಹಾಳು ಮಾಡುತ್ತವೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಮಿನ್ನೇಸೋಟದ ಚಳಿಗಾಲದ ಸಮಯದಲ್ಲಿ ಕಡಿಮೆ ಮಟ್ಟದ ಆಮ್ಲಜನಕದಲ್ಲಿ ಗೋಲ್ಡ್ ಫಿಶ್ಗಳು ಸುಲಭವಾಗಿ ಸಂತಾನೋತ್ಪತ್ತಿ ನಡೆಸುತ್ತವೆ. ಅಕ್ವೇರಿಯಮ್ ಸಾಕುಪ್ರಾಣಿಗಳಿಂದ ಪರಿಸರ ನಾಶವಾಗುತ್ತದೆ ಎಂಬುದು ಹೊಸ ಮಾಹಿತಿಯೇನಲ್ಲ. 2013ರಲ್ಲಿ ಸೈಂಟಿಫಿಕ್ ಅಮೆರಿಕನ್ ವರದಿ ಮಾಡಿದ್ದು, ತಾಹೋ ಸರೋವರದಲ್ಲಿ 1.5 ಅಡಿ ಉದ್ದ ಮತ್ತು 4.2 ಪೌಂಡ್ ತೂಕದ ಚಿನ್ನದ ಮೀನೊಂದು ಬಲೆಗೆ ಸಿಕ್ಕಿ ಬಿದ್ದಿತ್ತು ಎಂದು ವರದಿ ಮಾಡಿದೆ.
ಸರೋವರಗಳಲ್ಲಿ ಅಥವಾ ಸ್ಥಳೀಯ ಜಲಮಾರ್ಗಗಳಲ್ಲಿ ಮೀನುಗಾರನು ಹಿಡಿದ ಗೋಲ್ಡ್ ಫಿಶ್ಗಳನ್ನು ಮತ್ತೆ ಸರೋವರಕ್ಕೆ ಬೀಡಕೂಡದು ಎಂದು ವರ್ಜೀನಿಯಾದ ವನ್ಯಜೀವಿ ಅಧಿಕಾರಿಗಳು ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ. ಗೋಲ್ಡ್ ಫಿಶ್ಗಳ ಹಾನಿ ಭಯಾನಕವಾಗಿರುತ್ತದೆ. ಇನ್ನಿತರ ಸ್ಥಳೀಯ ಪ್ರಭೇದಗಳ ನಾಶಕ್ಕೆ ಕಾರಣವಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ಇದನ್ನೂ ಓದಿ:
ಫ್ರೆಶ್ ಫಿಶ್ ತಿಂತಾ ಇದ್ದ ಜನರಿಗೆ ಆತಂಕ.. ಮೀನುಗಳ ಸಂರಕ್ಷಣೆಗೆ ಫಾರ್ಮಾಲಿನ್ ಬಳಕೆ?
Mehul Choksi: ಡೊಮಿನಿಕಾ ಸ್ಥಳೀಯ ಕೋರ್ಟ್ನಿಂದ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಜಾಮೀನು ಮಂಜೂರು
Published On - 12:43 pm, Tue, 13 July 21