ಕ್ಷೌರ ಮಾಡಿಸಿಕೊಳ್ಳಲು ಹೋದವನು ಬಿಕ್ಕಿಬಿಕ್ಕಿ ಅತ್ತ ವಿಡಿಯೋ ವೈರಲ್​; ಕಾರಣವಂತೂ ಬಲು ವಿಚಿತ್ರ, ಕ್ಷೌರಿಕನಿಗೆ ನಗುವೋ ನಗು

ವಿಡಿಯೋವನ್ನು confused.aatma ಎಂಬ ಇನ್​ಸ್ಟಾಗ್ರಾಂ ಪೇಜ್​ ಪೋಸ್ಟ್​ ಮಾಡಿಕೊಂಡಿದೆ. ಬಹುಶಃ ಈ ವ್ಯಕ್ತಿಯ ಗರ್ಲ್​ಫ್ರೆಂಡ್​ ಕೈಕೊಟ್ಟಿರಬೇಕು. ಅದೇ ನೆನಪಾಗಿ ಇಷ್ಟು ಅಳುತ್ತಿರಬೇಕು ಎಂಬ ಕಾಮೆಂಟ್​ಗಳನ್ನೂ ಹಾಕಲಾಗಿದೆ.

  • TV9 Web Team
  • Published On - 14:10 PM, 8 Apr 2021
ಕ್ಷೌರ ಮಾಡಿಸಿಕೊಳ್ಳಲು ಹೋದವನು ಬಿಕ್ಕಿಬಿಕ್ಕಿ ಅತ್ತ ವಿಡಿಯೋ ವೈರಲ್​; ಕಾರಣವಂತೂ ಬಲು ವಿಚಿತ್ರ, ಕ್ಷೌರಿಕನಿಗೆ ನಗುವೋ ನಗು
ಕ್ಷೌರ ಮಾಡಿಸಿಕೊಳ್ಳಲು ಹೋದವ ಅಳುತ್ತಿರುವುದು

ಕೂದಲು ಕಟ್​ ಮಾಡಿಸಿಕೊಳ್ಳಲು ಕ್ಷೌರದ ಅಂಗಡಿಗೆ ಹೋಗಿ ಕುಳಿತವರೊಬ್ಬರು, ಬಿಕ್ಕಿಬಿಕ್ಕಿ ಅತ್ತ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನೇನು ಕ್ಷೌರಿಕ ಅವರ ಕೂದಲು ಕಟ್​ ಮಾಡಬೇಕು ಎನ್ನುವಷ್ಟರಲ್ಲಿ ಅವರ ಕಣ್ಣಿಂದ ನೀರು ಹರಿಯಲು ಆರಂಭಿಸಿದೆ. ಬಳಿಕವಂತೂ ಕ್ಷೌರಿಕ ನಗುತ್ತ ಒಳಗೆ ಹೋಗಿಬಿಟ್ಟಿದ್ದಾರೆ. ಇತ್ತ ಕ್ಷೌರ ಮಾಡಿಸಿಕೊಳ್ಳಲು ಹೋದ ವ್ಯಕ್ತಿ ಮುಖವನ್ನು ಮುಚ್ಚಿಕೊಂಡು ದೊಡ್ಡದಾಗಿ ಅತ್ತಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಹಾಗಂತ ಒಮ್ಮೆಲೇ ವಿಡಿಯೋ ನೋಡಿದರೆ ಅವರು ಯಾಕೆ ಅಳುತ್ತಿದ್ದಾರೆ ಎಂಬುದೇ ಅರ್ಥವಾಗುವುದಿಲ್ಲ.

ವ್ಯಕ್ತಿಯೋರ್ವ ಕ್ಷೌರದ ಅಂಗಡಿಯೊಂದಕ್ಕೆ ಹೋಗಿದ್ದ. 2002ರಲ್ಲಿ ಬಿಡುಗಡೆಯಾದ ಬಾಲಿವುಡ್​ ಸಿನಿಮಾ ಹಮ್​ ತುಮಾರೆ ಹೈ ಸನಮ್​ ಸಿನಿಮಾದ ಸಬ್​ ಕುಚ್​ ಬುಲಾ ದಿಯಾ ಹಾಡನ್ನು ದೊಡ್ಡದಾಗಿ ಹಾಕಲಾಗಿತ್ತು. ಅದನ್ನು ಕೇಳುತ್ತಿದ್ದಂತೆ ಇವರು ತುಂಬ ಅತ್ತಿದ್ದಾರೆ. ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡು ಅಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಭಾವನಾತ್ಮಕ ಹಾಡಿಗೆ ಈ ವ್ಯಕ್ತಿ ಕಣ್ಣೀರು ಹಾಕಿದ್ದರೂ, ಅದನ್ನು ನೋಡಿದ ನೆಟ್ಟಿಗರು ಮಾತ್ರ ತುಂಬ ತಮಾಷೆಯುಕ್ತ ಕಾಮೆಂಟ್​ಗಳನ್ನು ಹಾಕುತ್ತಿದ್ದಾರೆ. ವಿಡಿಯೋವನ್ನು confused.aatma ಎಂಬ ಇನ್​ಸ್ಟಾಗ್ರಾಂ ಪೇಜ್​ ಪೋಸ್ಟ್​ ಮಾಡಿಕೊಂಡಿದೆ. ಬಹುಶಃ ಈ ವ್ಯಕ್ತಿಯ ಗರ್ಲ್​ಫ್ರೆಂಡ್​ ಕೈಕೊಟ್ಟಿರಬೇಕು. ಅದೇ ನೆನಪಾಗಿ ಇಷ್ಟು ಅಳುತ್ತಿರಬೇಕು ಎಂಬ ಕಾಮೆಂಟ್​ಗಳನ್ನೂ ಹಾಕಲಾಗಿದೆ. ಅದೇನೇ ಇರಲಿ ವಿಡಿಯೋ ಮಾತ್ರ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

 

View this post on Instagram

 

A post shared by Confused Aatma (@confused.aatma)