ನಾಯಿಗಳು ಮೂಗಿನ ಮೂಲಕ ವಸ್ತುಗಳನ್ನು ಗುರುತಿಸುವ ಮತ್ತು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿವೆ; ಹೊಸ ಅಧ್ಯಯನದ ಮಾಹಿತಿ ಬಹಿರಂಗ
ನಾಯಿಗಳ ಮಿದುಳಿನಲ್ಲಿ ದೃಷ್ಟಿ ಮತ್ತು ವಾಸನೆಯ ಪ್ರಜ್ಞೆಯನ್ನು ಸಂಪರ್ಕಿಸುತ್ತದೆ ಎಂಬುದು ಹೊಸ ಅಧ್ಯಯನವೊಂದರ ಮೂಲಕ ಬಹಿರಂಗಗೊಂಡಿದೆ. ಮೂಗಿನಿಂದ ಆಕ್ಸಿಪಿಟಲ್ ಲೋಬ್ವರೆಗಿನ ಸಂಪರ್ಕಗಳು ದೃಷ್ಟಿಗೋಚರ ಕಾರ್ಟೆಕ್ಸ್ ಅನ್ನು ಹೊಂದಿದೆ ಎಂಬ ಅತ್ಯಂತ ಆಸಕ್ತಿದಾಯಕ ವಿಷಯವನ್ನು ಕಂಡುಕೊಳ್ಳಲಾಗಿದೆ.
ಪೊಲೀಸ್ ಇಲಾಖೆಗಳಲ್ಲಿ ನಾಯಿಗಳನ್ನು ಬಳಸಲಾಗುತ್ತದೆ. ಏಕೆಂದರೆ ನಾಯಿಗಳು ವಾಸನೆ ಮೂಲಕ ಗುರುತಿಸುವ ಮತ್ತು ಪತ್ತೆಹಚ್ಚುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇವುಗಳ ಇಂತಹ ಸಾಮರ್ಥ್ಯವು ವಿಶೇಷ ಮಿದುಳಿನ ರಚನೆಗಳೊಂದಿಗೆ ಹೊಂದಿದೆ ಎಂಬ ಮಾಹಿತಿ ಹೊಸ ಅಧ್ಯಯನದ ಮೂಲಕ ಬಹಿರಂಗಗೊಂಡಿದೆ. ಜರ್ನಲ್ ಆಫ್ ನ್ಯೂರೋಸೈನ್ಸ್‌ನಲ್ಲಿ ಈ ತಿಂಗಳು ಪ್ರಕಟವಾದ ಅಧ್ಯಯನದ ಪ್ರಕಾರ, ನಾಯಿಗಳ ಮಿದುಳಿನಲ್ಲಿ ದೃಷ್ಟಿ ಮತ್ತು ವಾಸನೆಯ ಪ್ರಜ್ಞೆಯನ್ನು ಸಂಪರ್ಕಿಸುತ್ತದೆ. “ಮೂಗಿನಿಂದ ಆಕ್ಸಿಪಿಟಲ್ ಲೋಬ್ವರೆಗಿನ ಸಂಪರ್ಕಗಳು ದೃಷ್ಟಿಗೋಚರ ಕಾರ್ಟೆಕ್ಸ್ ಅನ್ನು ಹೊಂದಿರುವುದು ಅತ್ಯಂತ ಆಸಕ್ತಿದಾಯಕ ವಿಷಯವಾಗಿದೆ” ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮತ್ತು ಅಧ್ಯಯನದ ಹಿರಿಯ ಲೇಖಕ ಪಶುವೈದ್ಯ ನರವಿಜ್ಞಾನಿ ಫಿಲಿಪ್ಪಾ ಜಾನ್ಸನ್ ಹೇಳಿದ್ದಾರೆ.
ಕೆಲವು ನಾಯಿಗಳು ಕುರುಡಾಗಿದ್ದರೂ ಚೆಂಡನ್ನು ಹುಡುಕಿ ತಂದು ಆಟವಾಡುವ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ಫಿಲಿಪ್ಪಾ ಜಾನ್ಸನ್ ಮತ್ತು ಸಹೋದ್ಯೋಗಿಗಳು ಸೇರಿಕೊಂಡು ಒಟ್ಟು 23 ಶ್ವಾನಗಳ ಮಿದುಳಿನ ಎಂಆರ್ಐ ಸ್ಕ್ಯಾನ್ಗಳನ್ನು ನಡೆಸಿ ಅಧ್ಯಯನ ನಡೆಸಿದ್ದಾರೆ. ಹೀಗೆ ನಡೆಸಲಾದ ಅಧ್ಯಯನದಲ್ಲಿ ಅವರು, ಶ್ವಾನಗಳು ವಾಸನೆಯನ್ನು ಗುರುತಿಸುವ ಘ್ರಾಣ ಬಲ್ಬ್ ಮತ್ತು ದೃಷ್ಟಿ ಸಂಸ್ಕರಿಸುವ ಅವುಗಳ ಆಕ್ಸಿಪಿಟಲ್ ಲೋಬ್ ನಡುವಿನ ನರವೈಜ್ಞಾನಿಕ ಸಂಪರ್ಕಗಳನ್ನು ಹೊಂದಿರುವುದನ್ನು ಕಂಡುಕೊಳ್ಳುತ್ತಾರೆ.
ಆವಿಷ್ಕಾರವು ನಾಯಿಗಳಲ್ಲಿ ವಾಸನೆ ಮತ್ತು ದೃಷ್ಟಿ ಕೆಲವು ರೀತಿಯಲ್ಲಿ ಸಂಯೋಜಿಸಲ್ಪಟ್ಟಿದೆ ಎಂದು ಸೂಚಿಸುತ್ತದೆಯಾದರೂ ನಾಯಿಗಳ ಎರಡು ಇಂದ್ರಿಯಗಳು ಹೇಗೆ ಒಟ್ಟಿಗೆ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿದಿಲ್ಲ. “ನಾಯಿಗಳಲ್ಲಿನ ದೃಷ್ಟಿಗೋಚರ ಕಾರ್ಟೆಕ್ಸ್‌ಗೆ ಪರಿಮಳವು ಕೊಡುಗೆ ನೀಡುತ್ತದೆ, ಆದರೆ ನಾಯಿಯ ಅನುಭವವನ್ನು ತಿಳಿದುಕೊಳ್ಳುವುದು ನಮಗೆ ಕಷ್ಟ. ಆದರೆ ಅವುಗಳು ವಸ್ತು ಎಲ್ಲಿದೆ ಎಂದು ಹುಡುಕಲು ಪರಿಮಳವನ್ನು ಬಳಸಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಜಾನ್ಸನ್ ಹೇಳಿದ್ದಾರೆ.
ಜಾನ್ಸನ್ ಮತ್ತು ಅವರ ಸಹೋದ್ಯೋಗಿಗಳು ವಾಸನೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಬೆಕ್ಕುಗಳು ಮತ್ತು ಕುದುರೆಗಳಂತಹ ಇತರ ಪ್ರಾಣಿಗಳ ಮಿದುಳುಗಳನ್ನು ಪರೀಕ್ಷಿಸಲು ಹೆಚ್ಚಿನ ಅಧ್ಯಯನಗಳನ್ನು ಯೋಜಿಸುತ್ತಿದ್ದಾರೆ.
Published On - 10:53 am, Fri, 29 July 22