Viral video: ಅಬ್ಬಬ್ಬಾ ಇದೇನಾಶ್ಚರ್ಯ.. ನೋಡಲು ಥೇಟ್​ ಡೊನಾಲ್ಡ್​ ಟ್ರಂಪ್​! ಧ್ವನಿ ಕೂಡಾ ಡಿಟ್ಟೋ ಹಾಗೆಯೇ! ಯಾರಿವರು?

ಇಲ್ಲೋರ್ವರು ನೋಡಲು ಥೇಟ್​ ಡೊನಾಲ್ಡ್​ ಟ್ರಂಪ್​ ಹಾಗೆಯೇ ಇದ್ದಾರೆ. ಜತೆಗೆ ಸುಮಧುರ ಕಂಠದ ಮೂಲಕ ಹಾಡು ಕೂಡಾ ಹೇಳ್ತಾ ಇದ್ದಾರೆ. ವಿಡಿಯೋ ನೋಡಿ..

Viral video: ಅಬ್ಬಬ್ಬಾ ಇದೇನಾಶ್ಚರ್ಯ.. ನೋಡಲು ಥೇಟ್​ ಡೊನಾಲ್ಡ್​ ಟ್ರಂಪ್​! ಧ್ವನಿ ಕೂಡಾ ಡಿಟ್ಟೋ ಹಾಗೆಯೇ! ಯಾರಿವರು?
ಅಬ್ಬಬ್ಬಾ ಇದೇನಾಶ್ಚರ್ಯ.. ನೋಡಲು ಥೇಟ್​ ಡೊನಾಲ್ಡ್​ ಟ್ರಂಪ್​!
TV9kannada Web Team

| Edited By: shruti hegde

Jun 14, 2021 | 1:20 PM

ನೋಡಲು ಒಂದೇ ತೆರನಾಗಿರುವವರು 7 ಜನ ಇರ್ತಾರಂತೆ ಎಂಬುದನ್ನು ಕೇಳಿದ್ದೇವೆ. ಅದು ಸತ್ಯವೆನೋ ಅನ್ನಿಸ್ತಿದೆ. ಇಲ್ಲೋರ್ವ ಕುಲ್ಫಿ ಮಾರಾಟಗಾರ ನೋಡಲು ಡಿಟ್ಟೋ ಡೊನಾಲ್ಡ್​ ಟ್ರಂಪ್​ ಅವರ ಹಾಗೆಯೇ ಇದ್ದಾರೆ. ಕೇವಲ ನೋಡಲು ಮಾತ್ರವಲ್ಲ ಅವರ ಧ್ವನಿ ಕೂಡಾ ಟ್ರಂಪ್​ ಧ್ವನಿಯಂತೆಯೇ ಇದೆ. ಕುಲ್ಫಿ ಐಸ್​ಕ್ರೀಮ್​ ಮಾರಾಟ ಮಾಡುವ ಈತ ಹಾಡು ಹಾಡುತ್ತಾ ನೆಟ್ಟಿಗರ ಮನಗೆದ್ದಿದ್ದಾರೆ.

ಒಂದು ಕ್ಷಣ ಇವರನ್ನು ನೋಡುತ್ತಿದ್ದಂತೆಯೇ ಡೊನಾಲ್ಡ್​ ಟ್ರಂಪ್​ ಅವರೇ ಎದುರಿಗೆ ಇದ್ದಂತೆ ಅನಿಸುತ್ತದೆ. ಕುರ್ತಾ ಪೈಜಾಮ ಧರಿಸಿ ನಿಂತಿದ್ದಾರೆ. ಸುಮಧುರ ಕಂಠದ ಮೂಲಕ ಹಾಡು ಕೂಡಾ ಹಾಡುತ್ತಿದ್ದಾರೆ. ಸೋಷಿಯಲ್​ ಮಿಡಿಯಾಗಳಲ್ಲಿ ವಿಡಿಯೋ ಹರಿದಾಡುತ್ತಿದ್ದಂತೆಯೇ ಇದೇನಪ್ಪಾ ಆಶ್ಚರ್ಯ! ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಪಾಕಿಸ್ತಾನದ ಗಾಯಕ-ಗೀತರಚನಾಕಾರ ಶೆಹಜಾದ್​​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ‘ವಾಹ್​! ಕುಲ್ಪಿ ಮಾರಟಗಾರನು ನಿಮಗೆ ತಿಳಿದಿದ್ದರೆ ದಯವಿಟ್ಟು ತಿಳಿಸಿ. ಈತನನ್ನು ನಾನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಕುಲ್ಫೀ ಮಾರಾಟಗಾರ ಪಂಜಾಬ್​​ ಮೂಲದವನು ಎಂದು ಅನೇಕ ನೆಟ್ಟಿಗರು ಕಾಮೆಂಟ್​ ವಿಭಾಗದಲ್ಲಿ ತಿಳಿಸಿದ್ದಾರೆ. ಈತನು ಮಾರಾಟ ಮಾಡುತ್ತಿರುವ ಕುಲ್ಫಿ ಐಸ್​ಕ್ರೀಮ್​ಅನ್ನು ಅನೇಕ ವರ್ಷಗಳಿಂದ ನಾವು ತಿಂದಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ವಿಡಿಯೋದಲ್ಲಿರುವ ವ್ಯಕ್ತಿ ನೋಡಲು ಟ್ರಂಪ್​ ಅವರ ಹೋಲಿಕೆಯಲ್ಲಿದ್ದರಿಂದ ಕೆಲವು ಉಲ್ಲಾಸದ ಪ್ರತಿಕ್ರಿಯೆಗಳು ಬಂದಿವೆ. ಇನ್ನು ಕೆಲವರು, ‘ಚುನಾವಣೆಯಲ್ಲಿ ಸೋತ ನಂತರ ಡೊನಾಲ್ಡ್​ ಟ್ರಂಪ್​ ಪಾಕಿಸ್ತಾನದಲ್ಲಿ ಐಸ್​ಕ್ರಿಮ್​ ಮಾರಾಟ ಮಾಡುತ್ತಿದ್ದಾರೆಯೇ? ಎಂದು ಕೆಲವರು ಕಾಮೆಂಟ್​ ವಿಭಾಗದಲ್ಲಿ ಬರೆದಿದ್ದಾರೆ. ಮಾಜಿ ಅಧ್ಯಕ್ಷರು ಹಾಡುತ್ತಾರೆ ಎಂದು ತಿಳಿದಿರಲಿಲ್ಲ ಎಂದು ಇನ್ನೋರ್ವರು ಹೇಳಿದ್ದಾರೆ.

ಅವರ ಹಾಡನ್ನು ಮೆಚ್ಚಿದ ನೆಟ್ಟಿಗರು ಪ್ರಸಿದ್ಧ ಜಾನಪದ ಕಲಾವಿದರಿಗೆ ಹೋಲಿಸಿ ಶ್ಲಾಘನೆ ನೀಡಿದ್ದಾರೆ. ಅವರ ಧ್ವನಿ ಭಾವಪೂರ್ಣವಾಗಿದೆ- ಅವರು ಓರ್ವ ಕಲಾವಿದರಾಗುವ ಎಲ್ಲಾ ಗುಣಲಕ್ಷಣಗಳು ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:

Viral Photo: ಮಮತಾ ಬ್ಯಾನರ್ಜಿಗೆ ಮದುವೆಯಂತೆ! ವರ ಯಾರು ಗೊತ್ತಾ? ಲಗ್ನ ಪತ್ರಿಕೆ ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada