ಪ್ರಿಯಾ ವಾರಿಯರ್ ಆಯ ತಪ್ಪಿ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು!

ಶೂಟಿಂಗ್​ ವೇಳೆ ನಟಿ ಪ್ರಿಯಾ ವಾರಿಯರ್​ ಹಿಡಿತ ತಪ್ಪಿ ನೆಲಕ್ಕೆ ಬಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  • TV9 Web Team
  • Published On - 17:17 PM, 26 Feb 2021
ಪ್ರಿಯಾ ವಾರಿಯರ್ ಆಯ ತಪ್ಪಿ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು!
ಶೂಟಿಂಗ್ ವೇಳೆ ಹಿಡಿತ ತಪ್ಪಿ ಬಿದ್ದ ಪ್ರಿಯಾ ವಾಯಿಯರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಪ್ರಿಯಾ ಪ್ರಕಾಶ್ ವಾರಿಯರ್ ತನ್ನ ಇನ್​ಸ್ಟಾಗ್ರಾಂ ಪುಟದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದೀಗ ಆ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ. ನಟಿ ಪ್ರಿಯಾ, ಮಲಯಾಳಂ ಚಿತ್ರವಾದ ಒರು ಅಡಾರ್ ಲವ್ ಸಿನಿಮಾ ಸಾಂಗ್ ಶೂಟಿಂಗ್​ನಲ್ಲಿದ್ದರು. ಶೂಟಿಂಗ್ ವೇಳೆ ನಟ ನಿತಿನ್ ಜೊತೆ ನಟಿಸುತ್ತಿರುವಾಗ ಬ್ಯಾಲೆನ್ಸ್​ ತಪ್ಪಿ ಬಿದ್ದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಟಾಲಿವುಡ್ ಹುಡುಗನ ಜೊತೆ ಕಣ್ಣು ಹೊಡೆಯುವ ಹುಡುಗಿಯ ವಿಡಿಯೋ ಎಲ್ಲೆಡೆ ಫೇಮಸ್​ ಆಗಿತ್ತು. ಇದೀಗ, ಆ ನಟಿ ಹೊಸದೊಂದು ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿ ಹಿಡಿತ ತಪ್ಪಿ ನೆಲಕ್ಕೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸುತ್ತಿದೆ. ವಿಡಿಯೋ ಶೇರ್ ಮಾಡಿಕೊಂಡ ನಟಿ ಪ್ರಿಯಾ, ಪ್ರತಿ ಬಾರಿ ಬಿದ್ದಾಗ ನಾನು ಆತ್ಮವಿಶ್ವಾಸದಿಂದ ಎದ್ದು ನಿಲ್ಲುತ್ತೇನೆ! ಎಂದು ಬರೆದುಕೊಂಡಿದ್ದಾರೆ.

priya varior

ಪ್ರಿಯಾ ವಾರಿಯರ್

ವಿಡಿಯೋದಲ್ಲಿ, ಅವರು ಒಂದು ಪ್ರಣಯ ಹಾಡಿನ ಚಿತ್ರೀಕರಣದ ಸಮಯದಲ್ಲಿ ಓಡುತ್ತ ಬಂದು ನಟ ನಿತಿನ್​ನ ಬೆನ್ನೇರುವುದನ್ನು ಕಾಣಬಹುದು. ಈ ವೇಳೆ ಹಿಡಿತ ತಪ್ಪಿ ಬೀಳುತ್ತಾಳೆ. ಚಿತ್ರೀಕರಣದ ವೇಳೆ ಸ್ಥಳದಲ್ಲಿದ್ದ ಸಹಾಯಕರು ನಟಿಯನ್ನು ಮೇಲೆತ್ತುವ ದೃಶ್ಯವನ್ನು ನಟಿ ಪ್ರಿಯಾ ವಾರಿಯರ್​ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಪ್ರಿಯಾ ಮತ್ತು ನಿತಿನ್ ನಟನೆಯ ಒರು ಅಡಾರ್ ಲವ್  ಸಿನಿಮಾವನ್ನು ಚಂದ್ರಶೇಖರ್ ಯೆಲೇಟಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ನಟ, ಗಾಯಕ ದಿಲ್ಜಿತ್​ ದೋಸಾಂಜ್​ ಹಾಸ್ಯಪ್ರಜ್ಞೆ ಅಭಿಮಾನಿಗಳು ಫಿದಾ: ಇಲ್ಲಿವೆ ಅವರ ಫನ್ನಿ ಪೋಸ್ಟ್​ಗಳು