ದೀಪಾವಳಿ ಸಿಹಿ ಆರೋಗ್ಯಕ್ಕೆ ಹಾನಿಕರ, ಕ್ರಿಸ್ಮಸ್​ ಕೇಕ್ ಮಾತ್ರ ಒಳ್ಳೇದು! -ಮಾಧ್ಯಮದ ದ್ವಂದ್ವ ನೀತಿಗೆ ಕಾರ್ಣಿಕ್ ಕಿಡಿ

ಮಾಧ್ಯಮಗಳು ಇಂಥ ದ್ವಂದ್ವನೀತಿಗಳಿಂದ ಹೊರಗೆ ಬರಬೇಕು. ಸಾಂಪ್ರದಾಯಿಕ ಸಿಹಿತಿಸಿಸುಗಳೊಂದಿಗೆ ಶೀಘ್ರವೇ ಭಾರತದ ಪರಿಕಲ್ಪನೆಯನ್ನೂ ಸಂಭ್ರಮಿಸಲಿದ್ದೀರಿ ಎಂದು ಹೇಳಿರುವ ಕಾರ್ಣಿಕ್, ಭಾರತೀಯ ಹಬ್ಬಗಳು, ಪಟಾಕಿಗಳು ಪರಿಸರಕ್ಕೆ ಮಾರಕ. ಹಬ್ಬಗಳು ಆಚರಣೆಯಿಂದ ಹಣ ವ್ಯರ್ಥ ಎನ್ನುವ ಕೆಲ ಮಾಧ್ಯಮಗಳ ಲೇಖನಗಳನ್ನು ನಿಲುವನ್ನು ಪರೋಕ್ಷವಾಗಿ ಖಂಡಿಸಿದ್ದಾರೆ.

  • TV9 Web Team
  • Published On - 14:08 PM, 24 Dec 2020
ದೀಪಾವಳಿ ಸಿಹಿ ಆರೋಗ್ಯಕ್ಕೆ ಹಾನಿಕರ, ಕ್ರಿಸ್ಮಸ್​ ಕೇಕ್ ಮಾತ್ರ ಒಳ್ಳೇದು! -ಮಾಧ್ಯಮದ ದ್ವಂದ್ವ ನೀತಿಗೆ ಕಾರ್ಣಿಕ್ ಕಿಡಿ
ಗಣೇಶ ಕಾರ್ಣಿಕ್

ಬೆಂಗಳೂರು: ದೀಪಾವಳಿ ವೇಳೆ ಬಳಸುವ ಸಿಹಿತಿಂಡಿಗಳು ಆರೋಗ್ಯಕ್ಕೆ ಹಾನಿಕರ. ಪಟಾಕಿಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ವಾದ ಇತರ ಧರ್ಮೀಯರ ಹಬ್ಬಗಳಿಗೂ ಏಕೆ ಅನ್ವಯಿಸುವುದಿಲ್ಲ ಎಂದು ಬಿಜೆಪಿ ನಾಯಕ ಕ್ಯಾಪ್ಟನ್ ಗಣೇಶ್​ ಕಾರ್ಣಿಕ್ ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ.

ಮಾಧ್ಯಮಗಳು ಇಂಥ ದ್ವಂದ್ವ ನೀತಿಗಳಿಂದ ಹೊರ ಬರಬೇಕು. ಸಾಂಪ್ರದಾಯಿಕ ಸಿಹಿ ತಿಸಿಸುಗಳೊಂದಿಗೆ ಶೀಘ್ರವೇ ಭಾರತದ ಪರಿಕಲ್ಪನೆಯನ್ನೂ ಸಂಭ್ರಮಿಸಲಿದ್ದೀರಿ ಎಂದು ಹೇಳಿರುವ ಕಾರ್ಣಿಕ್, ಭಾರತೀಯ ಹಬ್ಬಗಳು, ಪಟಾಕಿಗಳು ಪರಿಸರಕ್ಕೆ ಮಾರಕ. ಹಬ್ಬಗಳು ಆಚರಣೆಯಿಂದ ಹಣ ವ್ಯರ್ಥ ಎನ್ನುವ ಕೆಲ ಮಾಧ್ಯಮಗಳ ಲೇಖನಗಳನ್ನು ನಿಲುವನ್ನು ಪರೋಕ್ಷವಾಗಿ ಖಂಡಿಸಿದ್ದಾರೆ.

‘ದೀಪಾವಳಿ ಸಿಹಿ ತಿನಿಸುಗಳು ಆರೋಗ್ಯ ಹಾಳು ಮಾಡುತ್ತವೆ, ಕ್ರಿಸ್​ಮಸ್​ ಕೇಕ್ ಮಾತ್ರ ಪೋಷಕಾಂಶಭರಿತ’ ಎಂದು ವ್ಯಂಗ್ಯದ ಒಕ್ಕಣೆಯೊಂದಿಗೆ ಮಾಧ್ಯಮ ಸಂಸ್ಥೆಯೊಂದರ ಪೋಸ್ಟ್ ಹಂಚಿಕೊಂಡಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ಉಣ್ಣಲು ತಿನ್ನಲು ಗತಿಯಿಲ್ಲದೆ ಕೋಟ್ಯಂತರ ಜನರು ದಿಕ್ಕೆಟ್ಟಿರುವಾಗ ಮಾಧ್ಯಮ ಮತ್ತು ಸರ್ಕಾರದ ಪ್ರತಿನಿಧಿಗಳು ಇಂಥ ವಿಷಯವನ್ನು ಹೀಗೆಲ್ಲಾ ಎಳೆದಾಡುತ್ತಿರುವುದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಯಾವ ರೀತಿ ಇರುತ್ತದೆ ಎನ್ನುವುದು ಸದ್ಯದ ಕುತೂಹಲವಾಗಿದೆ.

‘ಕ್ಯಾಪ್ಟನ್, ಸಿಹಿ ತಿನಿಸುಗಳು ಸೌಹಾರ್ದದ ಪ್ರತೀಕವೆಂದು ಅವರಿಗೆ ಗೊತ್ತಿಲ್ಲ. ನಾವು 2014ರಲ್ಲಿ ಸಿಹಿ ತಿಂದೆವು, ಮತ್ತೆ 2019ರಲ್ಲಿಯೂ ಸಿಹಿ ತಿಂದೆವು, ಇನ್ನು 2024ರಲ್ಲಿಯೂ ನಾವು ಸಿಹಿ ತಿನ್ನಲಿದ್ದೇವೆ. ಭಾರತವು ಬದಲಾಗುತ್ತಿದೆ!’ ಹೀಗೆಂದು ರೀಟ್ವೀಟ್ ಮಾಡಿದ ಟ್ವೀಟಿಗರೊಬ್ಬರು ಕಾರ್ಣಿಕ್ ಅವರನ್ನು ಬೆಂಬಲಿಸಿದ್ದಾರೆ.