ಮೃಗಾಲಯದಲ್ಲಿ ಸ್ಪೈಡರ್ ಕೋತಿಗಳನ್ನಿಟ್ಟಿದ್ದ ಬೋನುಗಳ ಬಳಿ ಪದೇಪದೆ ಹೋದ ಬಾಲಕಿಯೊಬ್ಬಳು ದೊಡ್ಡ ಬೆಲೆ ತೆತ್ತಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 25, 2022 | 2:39 PM

ಅದು ಅಲ್ಲಿಗೆ ಮುಗಿಯುವುದಿಲ್ಲ. ಅವಳು ಪುನ: ಆ ಬೋನಿನ ಬಳಿ ಬಂದಾಗ ಮತ್ತೊಂದು ಕೋತಿ ಅವಳ ಕೂದಲು ಹಿಡಿದೆಳೆಯುತ್ತದೆ. ಅದೃಷ್ಟವಶಾತ್ ಅವಳು ಬೇಗನೆ ಕೋತಿಯಿಂದ ಬಿಡಿಸಿಕೊಳ್ಳುವಲ್ಲಿ ಸಫಲಳಾಗುತ್ತಾಳೆ.

ಮೃಗಾಲಯದಲ್ಲಿ ಸ್ಪೈಡರ್ ಕೋತಿಗಳನ್ನಿಟ್ಟಿದ್ದ ಬೋನುಗಳ ಬಳಿ ಪದೇಪದೆ ಹೋದ ಬಾಲಕಿಯೊಬ್ಬಳು ದೊಡ್ಡ ಬೆಲೆ ತೆತ್ತಳು!
ಬಾಲಕಿಯ ಕೂದಲೆಳೆಯುತ್ತಿರುವ ಸ್ಪೈಡರ್ ಕೋತಿ
Follow us on

ಸಾಮಾನ್ಯವಾಗಿ ಮೃಗಾಲಯಗಳಿಗೆ (zoo) ಭೇಟಿ ನೀಡುವ ಜನರಿಗೆ ಅಲ್ಲಿರುವ ಕೋತಿ ಮತ್ತು ಮಂಗನ ಜಾತಿಯ ಪ್ರಾಣಿಗಳನ್ನು ಕೆಣಕಬೇಡಿ ಎಂಬ ಸಲಹೆ ಮತ್ತು ಎಚ್ಚರಿಕೆಯನ್ನು ಮೃಗಾಲಯದ ಸಿಬ್ಬಂದಿ ನೀಡುತ್ತಾರೆ. ಯಾಕೆಂದರೆ ಈ ಪ್ರಾಣಿಗಳು ಸಂದರ್ಶಕರನ್ನು (visitors) ಗಾಯಗೊಳಿಸಬಲ್ಲವು, ಅವರ ಕೈಯಲ್ಲಿರುವ ವಸ್ತುಗಳನ್ನು ಕಸಿದುಕೊಳ್ಳಬಲ್ಲವು ಮತ್ತು ಗಲಾಟೆ ಸೃಷ್ಟಿಸಬಲ್ಲವು. ಮೆಕ್ಸಿಕೋ ದೇಶದಲ್ಲಿರುವ ಜೂವೊಂದಕ್ಕೆ ಭೇಟಿ ನೀಡಿದ್ದ ಪುಟ್ಟ ಬಾಲಕಿಯೊಬ್ಬಳು (young girl) ಇಂಥ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೆ ಹೋಗಿದ್ದಕ್ಕೆ ದೊಡ್ಡ ಬೆಲೆ ತೆರಬೇಕಾಯಿತು.

ಈ ಹುಡುಗಿ ಕೋತಿಗಳನ್ನು ಇಟ್ಟಿದ್ದ ಬೋನುಗಳ ಬಳಿ ಪದೇಪದೆ ಹೋಗಿದ್ದರಿಂದ ಸಿಟ್ಟಿಗೆದ್ದ ಸ್ಪೈಡರ್ ಜಾತಿಯ ಎರಡು ಕೋತಿಗಳು ಬಾಲಕಿಯ ಕೂದಲು ಹಿಡಿದು ಭೀಕರ ಅನ್ನಿಸುವ ಹಾಗೆ ಎಳೆದಾಡಿವೆ. ಕೆಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯವನ್ನು ಅನ್ಲೈನ್ ನಲ್ಲಿ ಶೇರ್ ಮಾಡಲಾಗಿದೆ.

ಫುಟೇಜ್ ನಲ್ಲಿ ನಿಮಗೆ ಕಾಣುವ ಹಾಗೆ ಒಂದು ಕೈಯಲ್ಲಿ ಫೋನ್ ಹಿಡಿದಿರುವ ಬಾಲಕಿಯು ಕೋತಿಗಳಿರುವ ಎನ್ಕೋಸರ್ ಗಳ ಹತ್ತಿರಕ್ಕೆ ಹೋದಾಗ ಕೋತಿಗಳು ಮೊದಲು ಕೋಪದಿಂದ ಶಬ್ದ ಮಾಡಿ ನಂತರ ಅವುಗಳಲ್ಲೊಂದು ಬೇಲಿಯ ಹತ್ತಿರ ಬಂದು ಅದರೊಳಗಿಂದ ಒಂದು ಕೈ ಹೊರಹಾಕಿ ಅವಳ ಕೂದಲು ಹಿಡಿಯುತ್ತದೆ.
ಅವಳು ಭಯದಿಂದ ಚೀರಲಾರಭಿಸಿದಾಗ ಕೋತಿ ಮತ್ತಷ್ಟು ರಭಸವಾಗಿ ಅವಳ ಕೂದಲೆಳೆಯುತ್ತದೆ. ಒಬ್ಬ ವ್ಯಕ್ತಿ ಅಲ್ಲಿಗೆ ಧಾವಿಸಿ ಟವೆಲ್ ಒಂದರಿಂದ ಕೋತಿಗೆ ಹೆದರಿಸಿದಾಗಲೇ ಅದು ಮಗುವನ್ನು ಬಿಡುತ್ತದೆ.

ಅದು ಅಲ್ಲಿಗೆ ಮುಗಿಯುವುದಿಲ್ಲ. ಅವಳು ಪುನ: ಆ ಬೋನಿನ ಬಳಿ ಬಂದಾಗ ಮತ್ತೊಂದು ಕೋತಿ ಅವಳ ಕೂದಲು ಹಿಡಿದೆಳೆಯುತ್ತದೆ. ಅದೃಷ್ಟವಶಾತ್ ಅವಳು ಬೇಗನೆ ಕೋತಿಯಿಂದ ಬಿಡಿಸಿಕೊಳ್ಳುವಲ್ಲಿ ಸಫಲಳಾಗುತ್ತಾಳೆ.

ಸದರಿ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಪೋಸ್ಟ್ ಮಾಡಿದ ಬಳಿಕ ಒಂದು ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅದನ್ನು ಈಗ ಬೇರೆ ಪ್ಲಾಟ್ ಫಾರ್ಮ್ಗಳಲ್ಲೂ ಶೇರ್ ಮಾಡಲಾಗಿದೆ.

ಕೋತಿಗಳ ಅಷ್ಟು ಹತ್ತಿರಕ್ಕೆ ಹೋಗಲು ಬಾಲಕಿ ಹೇಗೆ ಹೋದಳು, ಅವಳನ್ನು ಯಾರೂ ತಡೆಯಲಿಲ್ಲವೇಕೆ? ಬಾಲಕಿ ಕಿರುಚುತ್ತಿದ್ದರೂ ಮೃಗಾಲಯದ ಸಿಬ್ಬಂದಿ ಯಾಕೆ ಧಾವಿಸಲಿಲ್ಲ? ಮೊದಲಾದ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.

ಅಟಿಲೆಸ್ ಪ್ರಬೇಧಕ್ಕೆ ಸೇರಿದ ಸ್ಪೈಡರ್ ಕೋತಿಗಳನ್ನು ನ್ಯೂ ವರ್ಲ್ಡ್ ಮಂಕಿಗಳೆಂದು ವರ್ಗೀಕರಿಸಲಾಗಿದೆ. ದಕ್ಷಿಣ ಮತ್ತು ಕೇಂದ್ರೀಯ ಅಮೆರಿಕ, ದಕ್ಷಿಣ ಮೆಕ್ಸಿಕೋ ಮತ್ತು ಬ್ರೆಜಿಲ್ ನ ಉಷ್ಣವಲಯದ ಕಾಡುಗಳಲ್ಲಿ ಅವು ಹೆಚ್ಚಾಗಿ ಕಾಣಿಸುತ್ತವೆ.