ಸಂಕ್ರಾಂತಿಗೆ ವಕೀಲ್ ಸಾಬ್ ಟೀಸರ್ ಬಿಡುಗಡೆ: ಕಾತರದಿಂದ ಕಾಯುತ್ತಿದ್ದಾರೆ ಪವನ್ ಕಲ್ಯಾಣ್ ಅಭಿಮಾನಿಗಳು

ಸಂಕ್ರಾಂತಿಗೆ ವಕೀಲ್ ಸಾಬ್ ಟೀಸರ್ ಬಿಡುಗಡೆ: ಕಾತರದಿಂದ ಕಾಯುತ್ತಿದ್ದಾರೆ ಪವನ್ ಕಲ್ಯಾಣ್ ಅಭಿಮಾನಿಗಳು
ವಕೀಲ್ ಸಾಬ್ ಚಿತ್ರದಲ್ಲಿ ಪವನ್ ಕಲ್ಯಾಣ್

ಪಿಂಕ್ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಿರ್ವಹಿಸಿದ ವಕೀಲರ ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಳ್ಳಲಿದ್ದಾರೆ. ಅಂಜಲಿ, ನಿವೇತಾ ಥಾಮಸ್ ಮತ್ತು ಅನನ್ಯಾ ನಾಗಲ್ಲ ತಾರಾಗಣದಲ್ಲಿದ್ದು ಶ್ರುತಿ ಹಾಸನ್ ಅತಿಥಿ ಪಾತ್ರದಲ್ಲಿದ್ದಾರೆ.

Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 12, 2021 | 7:28 PM

ಹಿಂದಿ ಸಿನಿಮಾ ಪಿಂಕ್​ನ ತೆಲುಗು ರಿಮೇಕ್ ವಕೀಲ್ ಸಾಬ್ ತೆರೆ ಮೇಲೆ ಬರಲು ಸಿದ್ಧವಾಗಿದೆ. ಪವನ್ ಕಲ್ಯಾಣ್ ಹೀರೊ ಆಗಿರುವ ಈ ಚಿತ್ರದ ಟೀಸರ್ ಸಂಕ್ರಾಂತಿಯಂದು ಸಂಜೆ 6.03ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ಚಿತ್ರೀಕರಣ ಪೂರ್ತಿಗೊಂಡಿದ್ದು, ಜನವರಿ 14ರಂದು ಟೀಸರ್ ಬಿಡುಗಡೆಯಾಲಿದೆ ಎಂದು ಚಿತ್ರದ ನಿರ್ಮಾಪಕರು ಜನವರಿ7 ರಂದು ಟ್ವೀಟ್ ಮಾಡಿದ್ದರು.

ಪಿಂಕ್ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಿರ್ವಹಿಸಿದ ವಕೀಲರ ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಳ್ಳಲಿದ್ದಾರೆ. ಅಂಜಲಿ, ನಿವೇತಾ ಥಾಮಸ್ ಮತ್ತು ಅನನ್ಯಾ ನಾಗಲ್ಲ ತಾರಾಗಣದಲ್ಲಿದ್ದು ಶ್ರುತಿ ಹಾಸನ್ ಅತಿಥಿ ಪಾತ್ರದಲ್ಲಿದ್ದಾರೆ. ತೆಲುಗು ರಿಮೇಕ್ ಚಿತ್ರದಲ್ಲಿ ನಿರ್ದೇಶಕ ವೇಣು ತೆಲುಗು ನೆಲದ ವಾತಾವರಣಕ್ಕೆ ತಕ್ಕಂತೆ ಸಣ್ಣ ಪುಟ್ಟ ಬದಲಾವಣೆ ಮಾಡಿದ್ದಾರೆ. ಚಿತ್ರಕ್ಕೆ ಥಮನ್ ಎಸ್ ಅವರು ಸಂಗೀತ ನೀಡಿದ್ದು ಪಿ.ಎಸ್ ವಿನೋದ್ ಅವರ ಛಾಯಾಗ್ರಹಣವಿದೆ.

ಟ್ವಿಟರ್ ನಲ್ಲಿ ವಕೀಲ್ ಸಾಬ್ ಟೀಸರ್ ಟ್ರೆಂಡಿಂಗ್ ವಕೀಲ್ ಸಾಬ್ ಬಹುನಿರೀಕ್ಷಿತ ಚಿತ್ರವಾಗಿದ್ದು ಈಗಾಗಲೇ #VakeelSaabTEASER ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ. ಟೀಸರ್ ಬಿಡುಗಡೆಗಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

‘ವಕೀಲ್ ಸಾಬ್’ ಆಗ್ತಿದ್ದಾರೆ ಪವನ್ ಕಲ್ಯಾಣ್

Follow us on

Related Stories

Most Read Stories

Click on your DTH Provider to Add TV9 Kannada