ಇಂಡಿಯನ್ ಪೇರೆಂಟ್ ಅಂದ್ರೆ ಏನು: ಟ್ವೀಟಿಗರು ಕೊಟ್ಟ ಉತ್ತರ ಹೀಗಿತ್ತು

ಪತ್ರಕರ್ತ ಶಶಾಂಕ್ ಬೆಂಗಾಲಿ ಟ್ವೀಟ್ ಮಾಡಿ ಅಲೆಕ್ಸಾ ಇಂಡಿಯನ್ ಪೇರೆಂಟ್ಸ್ ಅಂದ್ರೆ ಏನು ಎಂದು ಕೇಳಿದ್ದರು. ಈ ಟ್ವೀಟ್​​ಗೆ ಹಲವಾರು ಟ್ವೀಟಿಗರು ಪ್ರತಿಕ್ರಿಯಿಸಿದ್ದು ಡಾಕ್ಟರ್ ರೆಫ್ರಿ ಯಾಕಾಗಬಾರದು ? ಉಪಾಧ್ಯಕ್ಷ ಯಾಕಾಗಬಾರದು ಎಂದು ತಮಾಷೆಯಾಗಿ ಕೇಳಿದ್ದಾರೆ.

  • Rashmi Kallakatta
  • Published On - 11:11 AM, 10 Dec 2020
ಇಂಡಿಯನ್ ಪೇರೆಂಟ್ ಅಂದ್ರೆ ಏನು: ಟ್ವೀಟಿಗರು ಕೊಟ್ಟ ಉತ್ತರ ಹೀಗಿತ್ತು
ಶಶಾಂಕ್ ಅವರ ಟ್ವೀಟ್

ಭಾರತೀಯ ಮೂಲದ ಸುಯಾಶ್ ಮೆಹ್ತಾ ಎನ್​​ಬಿಎ (ಅಮೆರಿಕದ ರಾಷ್ಟ್ರೀಯ ಬಾಸ್ಕೆಟ್​​ಬಾಲ್ ಅಸೋಸಿಯೇಷನ್) ರೆಫ್ರಿಯಾಗಿ ನೇಮಕವಾಗಲಿದ್ದಾರೆ. ಈ ಸುದ್ದಿಯನ್ನು ಟ್ವೀಟ್ ಮಾಡಿದ @Hoopistani ಎಂಬ ಟ್ವಿಟರ್ ಹ್ಯಾಂಡಲ್ ಮೆಹ್ತಾ ಅವರನ್ನು ಭಾರತೀಯ ಮೂಲದ ರೆಫ್ರಿ ಎಂದು ಉಲ್ಲೇಖಿಸಿತ್ತು. ಇದಕ್ಕೆ ರಾಹುಲ್ ಎಂಬವರು ಎನ್​​ಬಿಎ ಆಟಗಾರ ಯಾಕೆ ಅಲ್ಲ ಎಂದು ಪ್ರತಿಕ್ರಿಯಿಸಿದ್ದರು.

ಈ ಟ್ವೀಟ್ ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಯ ಸ್ಕ್ರೀನ್ ಶಾಟ್​​ನ್ನು ಪತ್ರಕರ್ತ ಶಶಾಂಕ್ ಬೆಂಗಾಲಿ ಟ್ವೀಟ್ ಮಾಡಿ ಅಲೆಕ್ಸಾ ಇಂಡಿಯನ್ ಪೇರೆಂಟ್ ಅಂದ್ರೆ ಏನು ಎಂದು ಕೇಳಿದ್ದರು. ಈ ಟ್ವೀಟ್​​ಗೆ ಹಲವಾರು ಟ್ವೀಟಿಗರು ಪ್ರತಿಕ್ರಿಯಿಸಿದ್ದು ಡಾಕ್ಟರ್ ರೆಫ್ರಿ ಯಾಕಾಗಬಾರದು ? ಉಪಾಧ್ಯಕ್ಷ ಯಾಕಾಗಬಾರದು ಎಂದು ತಮಾಷೆಯಾಗಿ ಕೇಳಿದ್ದಾರೆ.

ಭಾರತೀಯ ಮೂಲದ ಹೆತ್ತವರು ಮಕ್ಕಳ ಮೇಲೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅವರು ಎಂಬಿಎ ಮಾಡಲು ಹೇಳ್ತಾರೆ ಎನ್​​ಬಿಎ ಅಲ್ಲ ಎಂದು ಟ್ವೀಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬ ಟ್ವೀಟಿಗರು ಚೀನಾ ಮೂಲದ ಹೆತ್ತವರು ಕೂಡಾ ಹೀಗೆಯೇ. ನನ್ನ ಅನುಭವದಿಂದ ಹೇಳುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದಾಗ, ಹೆತ್ತವರಲ್ಲಿ ಒಬ್ಬರು ಭಾರತೀಯ ಮತ್ತು ಇನ್ನೊಬ್ಬರು ಚೀನಾದವರಾಗಿದ್ದರೆ ಮಕ್ಕಳ ಮೇಲೆ ಬೀಳುವ ಒತ್ತಡ ಹೇಗಿರಬಹುದೆಂದು ಊಹಿಸಿ ಎಂಬ ಪ್ರತಿಕ್ರಿಯೆ ಈ ಟ್ವೀಟ್​​ಗೆ ಸಿಕ್ಕಿದೆ.

 

Twitter India ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಅಮ್ಮ ಆಗುತ್ತಿದ್ದಾರೆ: 2020ರ ಅತಿಹೆಚ್ಚು ಲೈಕ್ ಪಡೆದ ಟ್ವೀಟ್