ನಮ್ಮ ಹಪ್ಪಳವನ್ನು ‘ಏಷ್ಯನ್​ ನಾಚೋಸ್​’ ಎಂದು ಮಾರಾಟ ಮಾಡುತ್ತಿರುವ ಮಲೇಷಿಯನ್​ ರೆಸ್ಟೋರೆಂಟ್​

TV9kannada Web Team

TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad

Updated on: Jan 24, 2023 | 1:21 PM

Papad : ಅಲ್ಲಿ ಒಂದು ಪ್ಲೇಟ್​ ಏಷಿಯನ್​ ನಾಚೋಸ್ ಅಂದರೆ ನಮ್ಮ ಹಪ್ಪಳದ​ ಬೆಲೆ ರೂ. 500. ನಮ್ಮ ಪಾಕಶಾಲೆಯ ಮೇಲೆ ಅವರು ಅಪರಾಧ ಗೈಯ್ಯುತ್ತಿದ್ಧಾರೆ ಎಂದು ನೆಟ್ಟಗರು ಒಂದೇ ಸಮ...

ನಮ್ಮ ಹಪ್ಪಳವನ್ನು ‘ಏಷ್ಯನ್​ ನಾಚೋಸ್​’ ಎಂದು ಮಾರಾಟ ಮಾಡುತ್ತಿರುವ ಮಲೇಷಿಯನ್​ ರೆಸ್ಟೋರೆಂಟ್​
ನಮ್ಮ ಹಪ್ಪಳ ಅವರ ಏಷಿಯನ್​ ನಾಚೋಸ್​

Viral News : ನಮ್ಮ ಮಕ್ಕಳಿಗೆ ಈಗಾಗಲೇ ನಾವು ತ್ರಿಕೋನಾಕಾರದಲ್ಲಿ ಚಪಾತಿ, ರೊಟ್ಟಿ ಕತ್ತರಿಸಿ ಅದರ ಮೇಲೆ ಪಲ್ಯ ಹಾಕಿ ಇದು ಪಿಝಾ ಎಂದು ಹೇಳುತ್ತಿದ್ದೇವೆ. ಬನ್​ಗಳ ಹೊಟ್ಟೆಯಲ್ಲಿ ಪಲ್ಯ ಹಾಕಿ ಇದು ಬರ್ಗರ್ ಎನ್ನುತ್ತಿದ್ದೇವೆ. ಎಷ್ಟು ದಿನ ಮಕ್ಕಳು ಇದನ್ನು ನಂಬುತ್ತಾರೆ ಎನ್ನುವುದು ನಮಗೆ ಗೊತ್ತಿರುವ ಸತ್ಯವೇ. ಆದರೆ, ಇದು  ನಾಳೆ ಯಾವುದೋ ಒಂದು ಇಂಟರ್ನ್ಯಾಷನಲ್ ಬ್ರ್ಯಾಂಡಿಂಗ್​ ಕಂಪೆನಿಗೆ ಗೊತ್ತಾದರೆ, ಇದನ್ನೇ ರೀಬ್ರ್ಯಾಂಡಿಂಗ್ ಮಾಡಿ ಲಾಭ ಮಾಡಿಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ. ಏಕೆಂದರೆ ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್ ನೋಡಿ. ಮಲೇಷಿಯಾದ ರೆಸ್ಟೋರೆಂಟ್ ನಮ್ಮ ಹಪ್ಪಳವನ್ನು ‘ಏಷ್ಯನ್​ ನಾಚೋಸ್​’ ಎಂದು ಮಾರುತ್ತಿದೆ. ಒಂದು ಏಷ್ಯನ್​ ನಾಚೋಸ್​ ಬೆಲೆ 25 ಮಲೇಷಿಯನ್​ ರಿಂಗಿಟ್​ಗಳು. ಅಂದರೆ ನಮ್ಮ ಲೆಕ್ಕದಲ್ಲಿ ರೂ. 500!

ಈ ಪೋಸ್ಟ್​ ಅನ್ನು 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ಧಾರೆ. 9,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಈ ರೆಸ್ಟೋರೆಂಟ್​ ಅನ್ನು, ಸ್ನಿಚ್​ ಬೈ ದಿ ಥೀವ್ಸ್ ಎಂದು ಕರೆಯುತ್ತಿದ್ದಾರೆ. ಮೆಣಸು ಹಾಕಿದ ​ಹೆಸರುಬೇಳೆ ಹಪ್ಪಳವನ್ನು ಅವರು ಬ್ಲ್ಯಾಕ್​ ಸ್ಪಾಟೆಡ್ ನಾಚೋಸ್​ ಎಂದು ಕರೆದರೂ ಅಚ್ಚರಿ ಏನಿಲ್ಲ ಎಂದು ತಮಾಷೆ ಮಾಡಿದ್ದಾರೆ ಒಬ್ಬರು.

ಇದನ್ನೂ ಓದಿ : ತೆಂಗಿನ ಚಹಾ? ಪಾತ್ರೆ ಇಲ್ಲವಾದರೆ ಕಳಿಸುತ್ತಿದ್ದೆವಲ್ಲ ಎನ್ನುತ್ತಿರುವ ನೆಟ್ಟಿಗರು

ನಾನಿಲ್ಲಿ ಎರಡು ರೂಪಾಯಿಗೆ ಮಸಾಲಾಪುಡಿ ಹಾಕಿದ ಹಪ್ಪಳ ತಿಂದು ಸಂತೃಪ್ತನಾಗಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಮೆಕ್ಸಿಕನ್ನರು, ಭಾರತೀಯರು ಇದನ್ನು ನೋಡಿ ಸಾಕಷ್ಟು ಬೇಸರ ಮಾಡಿಕೊಂಡರೆ ಅಚ್ಚರಿ ಏನಿಲ್ಲ ಬಿಡಿ ಎಂದಿದ್ದಾರೆ ಮತ್ತೊಬ್ಬರು.​ ಇದನ್ನು ನೋಡಿ ನಾವು ಮನೆಯಲ್ಲಿ ಹಪ್ಪಳವನ್ನು ನಾಚೋಸ್ ಎನ್ನಲು ಶುರು ಮಾಡಿದ್ದೇವೆ. ನನ್ನ ತಾಯಿಯೂ ಹಾಂ ತಗೋ ನಾಚೋಸ್​ ಎನ್ನಲು ಕಲಿತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ‘ಅಮ್ಮನ ತಟ್ಟೆ’ 24 ವರ್ಷಗಳ ನಂತರ ಗೊತ್ತಾದ ತಟ್ಟೆಯ ರಹಸ್ಯ; ಭಾವುಕರಾದ ನೆಟ್ಟಿಗರು

ಕೌಲಾಲಂಪುರದಲ್ಲಿ ಇತ್ತೀಚೆಗೆ ಚಿಕನ್ ಖಾದ್ಯ ತಿಂದೆ. ಆದರೆ ಇಷ್ಟೊಂದು ತುಟ್ಟಿಯಾಗಿರಲಿಲ್ಲ ಎಂದಿದ್ದಾರೆ ಮತ್ತೊಬ್ಬರು. ಬೆಂಗಳೂರಿನ ಬಾಬ್ಸ್​ಗೆ ಹೋಗಿ ಸ್ಪೆಷಲ್​ ಚಿಪ್ಸ್ ಆರ್ಡರ್ ಮಾಡಿದೆ. ಅದಕ್ಕೆ ಅವರು ತಟ್ಟೆ ತುಂಬಾ ಅಕ್ಕಿ ಸಂಡಿಗೆ ಹಾಕಿ ಕೊಟ್ಟರು ಎಂದು ಫೋಟೋ ಹಾಕಿದ್ದಾರೆ ಮಗದೊಬ್ಬರು.

ಏನಂತೀರಿ ನೀವು ಇನ್ನು…

ಇದನ್ನೂ ಓದಿ

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada