ಚಮಚದಿಂದ ಮಗನ ಕೂದಲು ಕತ್ತರಿಸಿದ ಅಪ್ಪ; ಮಾಂತ್ರಿಕ! ಎನ್ನುತ್ತಿರುವ ನೆಟ್ಟಿಗರು

TV9kannada Web Team

TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad

Updated on: Jan 24, 2023 | 3:23 PM

Hair Cut : ಈ ವಿಡಿಯೋ ಅನ್ನು 6 ಮಿಲಿಯನ್​ ಜನರು ನೋಡಿದ್ದಾರೆ. ಅನೇಕರು ವಾಹ್ ಎಂಥಾ ಪ್ರತಿಭೆ​ ಎಂದಿದ್ದಾರೆ. ಇನ್ನೂ ಕೆಲವರು ಇದರಲ್ಲಿ ಏನೋ ತಂತ್ರವಿದೆ ಎಂದಿದ್ದಾರೆ. ಚಮಚವನ್ನು ಹರಿತಗೊಳಿಸಿದ್ದೀರೋ ಹೇಗೆ ಎಂದು ಕೇಳಿದ್ದಾರೆ ಹಲವರು.

ಚಮಚದಿಂದ ಮಗನ ಕೂದಲು ಕತ್ತರಿಸಿದ ಅಪ್ಪ; ಮಾಂತ್ರಿಕ! ಎನ್ನುತ್ತಿರುವ ನೆಟ್ಟಿಗರು
ಚಮಚದಿಂದ ಹೇರ್​ ಕಟ್​ ಮಾಡುತ್ತಿರುವ ಅಪ್ಪ

Viral Video : ಚಾಕು, ಕತ್ತರಿ, ಟ್ರಿಮ್ಮರ್​ ಇದೆಲ್ಲ ಬೇಡವಂತೆ. ಒಂದು ಚಮಚ ಸಾಕು ನನ್ನ ಮಗನ ಕೂದಲು ಕತ್ತರಿಸಲು, ನೋಡಿ ಹೇಗೆ ಮ್ಯಾಜಿಕ್ ಮಾಡುತ್ತೇನೆ ಎನ್ನುತ್ತಿದ್ದಾನೆ ಈ ಅಪ್ಪ. ನೆಟ್ಟಿಗರು ಕಣ್ಣಕಣ್ಣು ಬಿಟ್ಟುಕೊಂಡು ಒಮ್ಮೆ ಚಮಚವನ್ನು ಇನ್ನೊಮ್ಮೆ ತಮ್ಮ ತಲೆಯನ್ನು ಸವರಿಕೊಳ್ಳುತ್ತ ಕುಳಿತಿದ್ದಾರೆ. ಈ ಅಪ್ಪ ಮಗ ಅಮೆರಿಕದಲ್ಲಿ ವಾಸಿಸುತ್ತಿದ್ದು, ಮನೆಯಲ್ಲಿ ಕುಳಿತುಕೊಂಡೇ ಜಗತ್ತಿನ ಮಂದಿ ತಮ್ಮತ್ತ ಹೊರಳಿ ನೋಡುವ ಹಾಗೆ ಮ್ಯಾಜಿಕ್ ಮಾಡಿದ್ದಾರೆ.

ತಾಜಾ ಸುದ್ದಿ

View this post on Instagram

A post shared by jSK Vibes (@ari_rover)

ಚಮಚದ ಏಣಿನಿಂದ ಈತ ಸರಾಗವಾಗಿ ಮಗನ ಕೂದಲನ್ನು ಕತ್ತರಿಸುವುದನ್ನು ನೋಡುತ್ತಿದ್ದರೆ ಅದು ಚಮಚ ಎಂದು ನಂಬಲು ಆಗುವುದೇ ಇಲ್ಲ. ಐದು ದಿನಗಳ ಹಿಂದೆ ಪೋಸ್ಟ್​​ ಮಾಡಲಾದ ಈ ವಿಡಿಯೋ ಅನ್ನು ಲಕ್ಷಾಂತರ ಜನರು ಇಷ್ಟಪಟ್ಟಿದ್ದಾರೆ. 6 ಮಿಲಿಯನ್​ ಜನರು ನೋಡಿದ್ದಾರೆ. ತಂದೆ ಈ ಅದ್ಭುತ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಅನೇಕರು ಈ ಚಮಚವನ್ನು ಅವನು ಹರಿತಗೊಳಿಸಿರುವ ಸಾಧ್ಯತೆ ಇದೆ ಎಂದಿದ್ದಾರೆ. ಇಲ್ಲಾ ಇದರಲ್ಲಿ ಏನೋ ತಂತ್ರವಿದೆ, ಸುಲಭವಾಗಿ ಕಣ್ಣಿಗೆ ಕಾಣದು ಎಂದಿದ್ದಾರೆ ಕೆಲವರು. ಇಲ್ಲ ಇದೊಂದು ಪ್ರತಿಭೆ ಎಂದಿದ್ದಾರೆ ಇನ್ನೂ ಕೆಲವರು.

ಇದನ್ನೂ ಓದಿ : 1963ರಲ್ಲಿ ಪ್ರಕಟವಾದ ಈ ಲೇಖನದಲ್ಲಿ ಇಂದಿನ ಸ್ಮಾರ್ಟ್​ಫೋನ್​ಗಳ ಬಗ್ಗೆ ಉಲ್ಲೇಖ

ಇದನ್ನು ಹೇಗೆ ಮಾಡಿದಿರಿ ಎನ್ನುವುದನ್ನು ವಿವರಿಸಿ, ಅದ್ಭುತವಾಗಿದೆ ಎಂದು ಒಬ್ಬರು ಕೇಳಿದ್ದಾರೆ. ನೀವು ಟ್ರಿಮ್ಮರ್ ಖರೀದಿಸುವ ಅಗತ್ಯವೂ ಇಲ್ಲ ಹಾಗಿದ್ದರೆ! ಉಳಿತಾಯದ ಉಪಾಯ ಚೆನ್ನಾಗಿದೆ ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಕೈಗಳಲ್ಲಿ ಮಾಂತ್ರಿಕ ಶಕ್ತಿ ಇದೆ ಎಂದು ಮಗದೊಬ್ಬರು ಹೇಳಿದ್ದಾರೆ. ಈ ಚಮಚವನ್ನು ವೈಬ್ರೇನಿಯಂನಿಂದ ಮಾಡಲಾಗಿದೆ ಅನ್ನಿಸುತ್ತದೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋ ನೋಡಲು ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada