World Oceans Day 2022: ಇತಿಹಾಸ, ಮಹತ್ವ ಮತ್ತು ಪ್ರಾಮುಖ್ಯತೆ ಇಲ್ಲಿದೆ

| Updated By: ವಿವೇಕ ಬಿರಾದಾರ

Updated on: Jun 08, 2022 | 7:00 AM

ಇತಿಹಾಸ, ಮಹತ್ವ ಮತ್ತು ಪ್ರಾಮುಖ್ಯತೆ ಮತ್ತು ಅಳಿವಿನಂಚಿನಲ್ಲಿರುವ ಜಲಚರ ಪ್ರಾಣಿಗಳ ಮಾಹಿತಿ ಇಲ್ಲಿದೆ

World Oceans Day 2022: ಇತಿಹಾಸ, ಮಹತ್ವ ಮತ್ತು ಪ್ರಾಮುಖ್ಯತೆ ಇಲ್ಲಿದೆ
ವಿಶ್ವ ಸಾಗರ ದಿನ
Image Credit source: JARAN ENGLISH
Follow us on

ನವದೆಹಲಿ: ಯುಎನ್‌ನ ವರದಿಯ ಪ್ರಕಾರ ಸಾಗರವು ಶೇ 50ರಷ್ಟು ಆಮ್ಲಜನಕವನ್ನು ಉತ್ಪಾದಿಸುದಲ್ಲದೆ  ನಮ್ಮ ಆರ್ಥಿಕತೆಗು ಪ್ರಮುಖವಾಗಿದೆ. ಇದು 2030 ರ ವೇಳೆಗೆ ಸಾಗರ ಆಧಾರಿತ ಕೈಗಾರಿಕೆಗಳಿಂದ ಅಂದಾಜು 40 ಮಿಲಿಯನ್ ಜನರು ಉದ್ಯೋಗಿಗಳಾಗುತ್ತಾರೆ ಎಂದು ಹೇಳಿದೆ. ಮಾನವರಿಂದ ಶೇ 90ರಷ್ಟು  ದೊಡ್ಡ ಮೀನುಗಳ ಸಂಖ್ಯೆ ಕ್ಷೀಣಿಸಿವೆ ಎಂದು ಯುಎನ್​​ ವರದಿ ಮಾಡಿದೆ.

ವಿಶ್ವ ಸಾಗರ ದಿನ 2022: ಇತಿಹಾಸ

ವಿಶ್ವ ಸಾಗರ ದಿನವನ್ನು ಪ್ರತಿ ವರ್ಷ ಜೂನ್ 8 ರಂದು ಆಚರಿಸಲಾಗುತ್ತದೆ. UNESCO ಪ್ರಕಾರ, 2008 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ನಮ್ಮ ಪ್ರಪಂಚದ ಹಂಚಿಕೆಯ ಸಾಗರ ಮತ್ತು ಸಮುದ್ರದೊಂದಿಗಿನ ನಮ್ಮ ವೈಯಕ್ತಿಕ ಸಂಪರ್ಕವನ್ನು ಆಚರಿಸಲು ಜೂನ್ 8 ಅನ್ನು ‘ವಿಶ್ವ ಸಾಗರಗಳ ದಿನ’ ಎಂದು ಆಚರಿಸಲಾಗುತ್ತದೆ.  ಸಾಗರವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಿಗಾಗಿ ನಾವು ಅದನ್ನು ರಕ್ಷಿಸಲು ಪ್ರಮುಖ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಸಾಗರ ದಿನ ಆಚರಿಸಲಾಗುತ್ತದೆ .

ವಿಶ್ವ ಸಾಗರ ದಿನ ಉದ್ದೇಶ

ವಿಶ್ವ ಸಾಗರ ದಿನದ 2022 ರ ಉದ್ದೇಶ ಪುನರುಜ್ಜೀವನ:   ಸಾಗರವನ್ನು ರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಒಟ್ಟಾಗಿ ಕೆಲಸ ಮಾಡುವ ಉದ್ದೇಶ ಹೊಂದಿದೆ. ವಿಶ್ವ ಸಾಗರ ದಿನ ಕಾರ್ಯಕ್ರಮವನ್ನು ನ್ಯೂಯಾರ್ಕ್‌ನಲ್ಲಿರುವ UN ಪ್ರಧಾನ ಕಛೇರಿಯಲ್ಲಿ ಇದನ್ನು ಆಯೋಜಿಸಲಾಗುತ್ತದೆ.

ಅಳಿವಿನಂಚಿನಲ್ಲಿರುವ ಸಾಗರ ಪ್ರಾಣಿಗಳು

ಪ್ರಕೃತಿಯಲ್ಲಿ ಮಾನವರ ಅನುಚಿತ ವರ್ತನೆಯಿಂದ ಹಲವಾರು ಜಾತಿಗಳ ಸಾಗರ ಪ್ರಾಣಿಗಳು ಅಳಿವಿನ ಅಂಚಿನಲ್ಲಿವೆ.

ನೀಲಿ ತಿಮಿಂಗಿಲ: ಸಮುದ್ರವನ್ನು ಕಾಪಾಡುವಲ್ಲಿ ತಿಮಿಂಗಿಲಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ದುರದೃಷ್ಟವಶಾತ್, ಅತಿಯಾದ ವಾಣಿಜ್ಯ ಮಾಲಿನ್ಯ ಸಮುದ್ರಕ್ಕೆ ಸೇರುತ್ತಿರುವುದರಿಂದ ಅವು ಅಳಿವಿನ ಅಂಚಿನಲ್ಲಿವೆ.

ಕೆಂಪ್ಸ್ ರಿಡ್ಲಿ ಸಮುದ್ರ ಆಮೆ: ರಿಡ್ಲಿ ಸಮುದ್ರ ಆಮೆ ಸಾಮಾನ್ಯವಾಗಿ ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಆಶ್ರಯ ಪಡೆಯುತ್ತದೆ. ಇದು ಸಾಮಾನ್ಯವಾಗಿ ಅಟ್ಲಾಂಟಿಕ್ ಮಹಾಸಾಗರಕ್ಕೆ ವಲಸೆ ಹೋಗುತ್ತದೆ. ಮೊಟ್ಟೆಗಳನ್ನು ಇಡಲು ಹಿಂತಿರುಗುತ್ತದೆ. ಆವಾಸಸ್ಥಾನದ ನಷ್ಟ, ಸಮುದ್ರ ಮಾಲಿನ್ಯ ಮತ್ತು ಮೀನುಗಾರಿಕೆ ಬಲೆಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು ಇತ್ಯಾದಿಗಳು ಈ ಆಮೆಗಳ ಜನಸಂಖ್ಯೆಯನ್ನು ಕಡಿಮೆ ಮಾಡಲು ಕಾರಣವಾಗಿವೆ.

ಹ್ಯಾಮರ್‌ಹೆಡ್ ಶಾರ್ಕ್: ಮೆರೈನ್ ಇನ್‌ಸೈಟ್‌ನ ಪ್ರಕಾರ, ಈ ವಲಸೆ ಶಾರ್ಕ್‌ಗಳು ತಮ್ಮ ರೆಕ್ಕೆಗೆ ಬಲಿಯಾಗುತ್ತವೆ. ಶಾರ್ಕ್‌ಗಳನ್ನು ಮೀನುಗಾರರು ಹಿಡಿಯುತ್ತಾರೆ, ಹಡಗಿನಲ್ಲಿ ಎಳೆದುಕೊಂಡು ಹೋಗುತ್ತಾರೆ ಮತ್ತು ಉಸಿರಾಡುತ್ತಿರುವಾಗಲೇ ಅವುಗಳ ರೆಕ್ಕೆಗಳನ್ನು ಕತ್ತರಿಸುವುದರಿಂದ ಇವು ಸಾಯುತ್ತವೆ.

ವಕ್ವಿಟಾ: ವರದಿಗಳ ಪ್ರಕಾರ, ಪ್ರಪಂಚದಲ್ಲಿ ಕೇವಲ ಒಂದು ಡಜನ್ ಸಮುದ್ರ ಸಸ್ತನಿಗಳು ಉಳಿದಿವೆ ಏಕೆಂದರೆ ಅವುಗಳ ಜನಸಂಖ್ಯೆಯಲ್ಲಿನ ಕುಸಿತದ ಶೇಕಡಾವಾರು ಪ್ರಮಾಣವು 2011 ರಿಂದ 90% ರಷ್ಟಿದೆ.