ನವದೆಹಲಿ, ನವೆಂಬರ್ 17: ಬೆಂಗಳೂರಿನಲ್ಲಿ ಇದ್ದವರು ಕನ್ನಡ ಕಲಿಯಬೇಕು ಎಂಬುದು ಕನ್ನಡಿಗರು ಹಲವು ವರ್ಷಗಳ ಕೂಗು. ಇದು ಆಗಾಗ್ಗೆ ಮರುಕಳಿಸುತ್ತಲೇ ಇರುತ್ತದೆ. ಹೊರಗಿನವರು ಇದಕ್ಕೆ ಟಾಂಟ್ ಕೊಡುವುದೂ ಇದೆ. ಮೂರು ದಿನಗಳಿಂದ ಈ ಪರ ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ. ಪತ್ರಕರ್ತೆ ಚಂದ್ರ ಆರ್ ಶ್ರೀಕಾಂತ್ ಅವರು ಬೆಂಗಳೂರಿನಲ್ಲಿರುವ ಹೊರಗಿನವರು ಕನ್ನಡ ಕಲಿಯದೆ, ಕನ್ನಡ ಗೊತ್ತಿಲ್ಲ ಎಂದು ಜಂಭದಿಂದ ಹೇಳಿಕೊಳ್ಳುವುದನ್ನು ಟೀಕಿಸಿ ಎಕ್ಸ್ ಅಕೌಂಟ್ನಿಂದ ನವೆಂಬರ್ 14ರಂದು ಒಂದು ಪೋಸ್ಟ್ ಹಾಕಿದ್ದರು. ಝೋಹೋ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಮೊನ್ನೆ ಇದಕ್ಕೆ ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಇದ್ದವರು ಕನ್ನಡ ಕಲಿಯದಿದ್ದರೆ ಅದು ಈ ನಾಡಿಗೆ ಅಗೌರವ ತೋರಿದಂತೆ ಎಂಬರ್ಥದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದರು.
ಈ ಪೋಸ್ಟ್ಗಳು ನಾನಾ ರೀತಿಯ ಪರ ವಿರೋಧ ಚರ್ಚೆಗೆ ಕಾರಣವಾಗಿವೆ. ಕೆಲ ಗಂಭೀರ ವಿಚಾರಗಳು, ಪ್ರಶ್ನೆಗಳೂ ಎದುರಾಗಿವೆ. ಬೆಂಗಳೂರಿನಲ್ಲಿ ಬಹುಸಂಖ್ಯಾತ ಜನರ ಮಾತೃಭಾಷೆ ಕನ್ನಡವೇ ಅಲ್ಲ. ಹೇಗೆ ಇದು ಸ್ಥಳೀಯ ಭಾಷೆಯಾಗುತ್ತೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ತಾನು ಒಂದು ದಿನಕ್ಕೆ ಬೆಂಗಳೂರಿಗೆ ಬಂದರೂ ಕನ್ನಡ ಕಲಿಯಬೇಕಾ ಎಂದು ಮತ್ತೊಬ್ಬರು ಕುಚೋದ್ಯ ಮಾಡಿದ್ದಾರೆ.
ಇದನ್ನೂ ಓದಿ: ಮ್ಯಾನೇಜ್ಮೆಂಟ್ ಸ್ಕೂಲ್ಗಳಲ್ಲಿ ಕಲಿತವರನ್ನು ಐಎಎಸ್, ಐಪಿಎಸ್ ಹುದ್ದೆಗೆ ನೇಮಿಸಲಿ: ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ
ಸ್ಮಿತಾ ದೇಶಮುಖ್ ಅವರು ಮರಾಠಿ ವಿಚಾರದ ಮೂಲಕ ಕೌಂಟರ್ ಕೊಟ್ಟಿದ್ದಾರೆ. ಮುಂಬೈನಲ್ಲಿ ಹಲವಾರು ವರ್ಷಗಳಿಂದ ಇರುವ ಕನ್ನಡಿಗರಿಗೆ ಮರಾಠಿಯೇ ಬರುವುದಿಲ್ಲ. ಮಹಾರಾಷ್ಟ್ರದವರಾಗಿ ನಾವೇನು ಮಾಡಬೇಕು ಹೇಳಿ ಎಂದು ಸ್ಮಿತಾ ಕೇಳಿದ್ದಾರೆ.
I agree with this sentiment. If you make Bengaluru your home, you should learn Kannada and your kids should learn Kannada.
Not doing so after living many years in Bengaluru is disrespectful.
I often request our employees in Chennai coming from other states to make an effort to… https://t.co/1cIQ47FMjn
— Sridhar Vembu (@svembu) November 15, 2024
I have many Kannada friends in Mumbai, living here for decades. No one can speak Marathi. Not one word. Fair?
— Smita Deshmukh🇮🇳 (@smitadeshmukh) November 15, 2024
ಆಫೀಸ್ನಲ್ಲಿ ಸಂವಹನವೆಲ್ಲಾ ಇಂಗ್ಲೀಷ್ನಲ್ಲೇ ಆಗುತ್ತೆ. ಆನ್ಲೈನ್ನಲ್ಲಿ ಕ್ಯಾಬ್ ಬುಕ್ ಮಾಡಿ ಹೋಗುತ್ತೇವೆ. ಯಾರ ಜೊತೆ ಮಾತನಾಡಿ ಕನ್ನಡ ಕಲಿಯಬಹುದು? ಬೆಂಗಳೂರಿನಲ್ಲಿರುವ ಬಹುತೇಕ ಜನರಿಗೆ ಇಂಗ್ಲೀಷ್ ಮತ್ತು ಹಿಂದಿ ಬರುತ್ತೆ. ಸಂವಹನಕ್ಕೆ ಅದಿದ್ದರೆ ಸಾಕಲ್ವಾ? ಕನ್ನಡ ಯಾಕೆ ಎನ್ನುವ ಅನುಮಾನವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.
ಸಿದ್ ಎನ್ನುವ ಅಕೌಂಟ್ ಹೆಸರಿನ ವ್ಯಕ್ತಿಯು ಬಲವಂತಪಡಿಸುವುದನ್ನು ಆಕ್ಷೇಪಿಸಿದ್ದಾರೆ. ಆಯ್ಕೆ ಮತ್ತು ಬಲವಂತ ಮಧ್ಯೆ ವ್ಯತ್ಯಾಸ ಇದೆ. ನೀವು ಜನರನ್ನು ಬಲವಂತಪಡಿಸತೊಡಗಿದರೆ ಪ್ರತಿಭಟನೆಗೆ ಕಾರಣವಾಗುತ್ತದೆ. ವೈವಿಧ್ಯಮಯವಾಗಿರುವ ಈ ದೇಶದಲ್ಲಿ ಹಲವು ಭಾಷೆಗಳನ್ನು ಕಲಿಯವುದು ವಾಸ್ತವವಾಗಿ ಅಸಾಧ್ಯ ಎಂಬುದು ಈ ವ್ಯಕ್ತಿಯ ವಾದ.
ಇದನ್ನೂ ಓದಿ: ಐಟಿಆರ್ ಸಲ್ಲಿಕೆ ವೇಳೆ ಈ ಆದಾಯ ಮರೆಮಾಚಿದರೆ 10 ಲಕ್ಷ ರೂ ದಂಡ: ಆದಾಯ ತೆರಿಗೆ ಇಲಾಖೆ ಸೂಚನೆ
ಝೋಹೋ ಸಿಇಒ ಶ್ರೀಧರ್ ವೆಂಬು, ಚಿಂತಕ ಅಭಿಜಿತ್ ಅಯ್ಯರ್ ಮಿತ್ರಾ ಮೊದಲಾದ ಹಲವರು, ಕನ್ನಡ ಕಲಿಯುವುದರ ಪರವಾಗಿ ಬ್ಯಾಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ