ಟರ್ಕಿಯಲ್ಲಿ ಸಿಕತ ಮಾರುತದ ಅಬ್ಬರ.. ಆರು ಜನರಿಗೆ ಗಾಯ, ಜನಜೀವನ ಅಸ್ತವ್ಯಸ್ತ

ಟರ್ಕಿ ದೇಶದ ರಾಜಧಾನಿ ಅಂಕಾರಾಗೆ ಕಳೆದ ಶನಿವಾರದಂದು ಸಿಕತ ಮಾರುತ (Sandstorm) ಅಪ್ಪಳಿಸಿದ್ದು ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರಿದೆ. ನಗರದಲ್ಲಿ ಬೀಸಿದ ಮರಳಿನ ಬಿರುಗಾಳಿಯ ಪರಿಣಾಮವಾಗಿ ಆರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸದ್ಯ, ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟದ ಬಗ್ಗೆ ಯಾವುದೇ ವರದಿಯಾಗಿಲ್ಲ. ಕಳೆದ ತಿಂಗಳ ಅಂತ್ಯದಿಂದ ರಾಜಧಾನಿಯಲ್ಲಿ 1,600 ಜಿಎಂಟಿ ವರೆಗೆ ಮರಳಿನ ಬಿರುಗಾಳಿ ಹಾಗೂ ಧಾರಾಕಾರ ಮಳೆ ಮುಂದುವರೆದಿದೆ. ಮರಳಿನ ಬಿರುಗಾಳಿ ಮೊದಲು ಅಂಕಾರಾದ ಪೋಲಾಟ್ಲಿ ಜಿಲ್ಲೆಯನ್ನು ಅಪ್ಪಳಿಸಿದ್ದು ನಂತರ ಇಡೀ ರಾಜಧಾನಿಯನ್ನು ಆವರಿಸಿಕೊಂಡುಬಿಟ್ಟಿತು ಎಂದು ಹೇಳಲಾಗಿದೆ.

ಇಡೀ, ಜಿಲ್ಲೆ ಧೂಳಿನ ಮೋಡದಿಂದ ಆವೃತವಾಗಿದ್ದು ಸಿಡಿಲಿನ ಬಡಿತದಿಂದಾಗಿ ಸಣ್ಣ ಪ್ರಮಾಣದ ಬೆಂಕಿ ಸಹ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

Related Tags:

Related Posts :

Category: