‘ಡ್ರಗ್ಸ್ ಬೇಡ ಕರ್ನಾಟಕ’ ಅಭಿಯಾನ.. ಇಂದು ಬೆಳಗ್ಗೆ 11ಕ್ಕೆ ತಪ್ಪದೇ ಟಿವಿ9 ವೀಕ್ಷಿಸಿ

ಕರ್ನಾಟಕವೂ ಸೇರಿ ಇಡೀ ದೇಶವನ್ನೇ ತನ್ನ ಕಬಂಧ ಬಾಹುವಿಗೆ ತೆಗೆದುಕೊಳ್ಳುತ್ತಿರುವ ಡ್ರಗ್ಸ್ ಚಟ ಮತ್ತು ಮಾದಕ ವಸ್ತು ಜಾಲದ ವಿರುದ್ಧ ಸರಕಾರ ಸಮರ ಸಾರಿದೆ. ಕಳೆದ 13 ವರ್ಷಗಳಿಂದ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹೋರಾಡುತ್ತಾ ರಾಜ್ಯದ ಪ್ರತಿ ಸಂಕಷ್ಟಕ್ಕೂ ಸ್ಪಂದಿಸುತ್ತಾ ಬಂದಿರೋ ಟಿವಿ9 ಡ್ರಗ್ಸ್‌ ಜಾಲವನ್ನ ನಿರ್ಮೂಲನೆ ಮಾಡುವ ಹೋರಾಟದಲ್ಲಿ ಸಹ ತನ್ನ ಕೈ ಜೋಡಿಸಿದೆ. ಇದೇ ಕಾರಣಕ್ಕಾಗಿ ಡ್ರಗ್ಸ್ ಬೇಡ ಕರ್ನಾಟಕ ಅನ್ನೋ ಕಾನ್‌ಕ್ಲೇವ್‌ ಹಮ್ಮಿಕೊಂಡಿದೆ.

ಯುವಜನತೆ ರೋಲ್​ ಮಾಡಲ್​ಗಳಾಗಿರುವ ಸಿನಿ ಲೋಕದ ನಟ ನಟಿಯರೂ ಸಹ ಈ ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಬ್ರೇಕ್ ಹಾಕಲೇಬೇಕು ಎಂದು ಸರ್ಕಾರದ ಕಡೆಯಿಂದ ಖಡಕ್ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಯುವ ಜನಾಂಗದ ರಕ್ಷಣೆ ಸರ್ಕಾರ ಸೇರಿದಂತೆ ಪ್ರತಿಯೊಬ್ಬರ ಹೊಣೆಯೂ ಆಗಿದೆ. ಈ ಈ ನಿಟ್ಟಿನಲ್ಲಿ ಟಿವಿ9 ತನ್ನ ಸಾಮಾಜಿಕ ಜವಾಬ್ದಾರಿ ಮೆರೆದು ಡ್ರಗ್ಸ್ ಬೇಡ ಕರ್ನಾಟಕ ಅನ್ನೋ ಕಾನ್‌ಕ್ಲೇವ್‌ ಹಮ್ಮಿಕೊಂಡಿದೆ.

ಈ ವಿಶೇಷ ಕಾರ್ಯಕ್ರಮವನ್ನು ಅಶೋಕ ಹೋಟೆಲ್​ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದರಾದ ಸುಮಲತಾ ಅಂಬರೀಶ್ ಮತ್ತು ತೇಜಸ್ವಿ ಸೂರ್ಯ, ನಿವೃತ್ತ ಉಪ ಲೋಕಾಯುಕ್ತರಾದ ನ್ಯಾ. ಸುಭಾಷ್ ಬಿ. ಆಡಿ, ನಟ ಅಜಯ್ ರಾವ್​, ವಿವೇಕ್ ಪಾಯ್ಸ್, ಪ್ರಾದೇಶಿಕ ನಿರ್ದೇಶಕ-ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ ಭಾಗಿಯಾಗಿದ್ದರು.

ಡ್ರಗ್ಸ್ ಬೇಡ ಕರ್ನಾಟಕ ಕಾರ್ಯಕ್ರಮ ಭಾನುವಾರ ಬೆಳಗ್ಗೆ 11 ಗಂಟೆಗೆ ನಿಮ್ಮ ಟಿವಿ9 ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ..

Related Tags:

Related Posts :

Category:

error: Content is protected !!