IPL​ನಲ್ಲಿ ಆರ್​ಸಿಬಿ ವಿಫಲ, ಹೆಚ್ಚು ರನ್​ಗಳಿಸಿದ್ದು ವಿದೇಶಿ ಆಟಗಾರ

, IPL​ನಲ್ಲಿ ಆರ್​ಸಿಬಿ ವಿಫಲ, ಹೆಚ್ಚು ರನ್​ಗಳಿಸಿದ್ದು ವಿದೇಶಿ ಆಟಗಾರ

ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ತಂಡವನ್ನ ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಆದ್ರೆ ಈ ವರ್ಷದ ಐಪಿಎಲ್ ಟೂರ್ನಿ ಹತ್ತು ಹಲವು ವಿಶೇಷತೆಗಳಿಂದ ಕೂಡಿತ್ತು. ಅದ್ರಲ್ಲೂ ಮುಂಬೈ ಮತ್ತು ಚೆನ್ನೈ ನಡುವಿನ ಫೈನಲ್ ಪಂದ್ಯ ರಣರೋಚಕವಾಗಿತ್ತು. ಇನ್ನೇನು ಚೆನ್ನೈ ಗೆಲ್ಲುತ್ತೆ ಅನ್ನೋವಾಗಲೇ ಧೋನಿ ರನೌಟ್ ಆಗಿದ್ದು, ಮುಂಬೈ ಗೆಲುವಿಗೆ ಸೋಪಾನವಾಯ್ತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್​ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಆದ ಸಾಧನೆಯನ್ನ ಮಾಡಿತು.

, IPL​ನಲ್ಲಿ ಆರ್​ಸಿಬಿ ವಿಫಲ, ಹೆಚ್ಚು ರನ್​ಗಳಿಸಿದ್ದು ವಿದೇಶಿ ಆಟಗಾರಐಪಿಎಲ್‌ ಕಪ್ ಗೆಲ್ಲಲ್ಲೇ ಇಲ್ಲ ಕೊಹ್ಲಿಯ ಆರ್‌ಸಿಬಿ ಹುಡುಗ್ರು!
ಪ್ರತಿ ಸೀಸನ್​ನಂತೆ ಈ ಸೀಸನ್​ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು, ಈ ಸಲ ಕಪ್ ನಮ್ದೇ ಅನ್ನೋ ಕೂಗು ಶುರುವಿಟ್ಕೊಂಡಿದ್ರು. ಕ್ಯಾಪ್ಟನ್ ಕೊಹ್ಲಿಯೂ ಈ ಸಲ ಕಪ್ ನಮ್ದೇ ಅಂತಾ ಕನ್ನಡದಲ್ಲೇ ಹೇಳಿ ಅಭಿಮಾನಿಗಳ ಆಸೆಗೆ ಕಿಚ್ಚು ಹತ್ತಿಸಿದ್ರು.

ಕ್ಯಾಪ್ಟನ್ ಕೊಹ್ಲಿಯೇ ಹೀಗೆ ಹೇಳಿರುವಾಗ ಅಭಿಮಾನಿಗಳು ಸುಮ್ಮನಿರ್ತಾರಾ. ಹೋದಲ್ಲಿ ಬಂದಲ್ಲಿ ಈ ಸಲ ಕಪ್ ನಮ್ದೇ ಅಂತಾ ಕೂಗೋಕೆ ಶುರುಮಾಡಿದ್ರು. ಆದ್ರೆ ಈ ಬಾರಿಯೂ ಆರ್​ಸಿಬಿ ಮತ್ತದೇ ಹಳೆ ಚಾಳಿಯನ್ನ ಮುಂದುವರಿಸಿತು. ಸೋಲಿನ ಸರಮಾಲೆಯನ್ನೇ ಧರಿಸಿ ಅಭಿಮಾನಿಗಳ ನಂಬಿಕೆಯನ್ನ ಹುಸಿ ಮಾಡಿತು.

ಐಪಿಎಲ್​ನಲ್ಲಿ ಕೋಪದ ಮುಖ ತೋರಿಸಿದ ಮಹೇಂದ್ರ:
ಈ ಸೀಸನ್​ನ ಐಪಿಎಲ್​ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಕೋಪದ ಮುಖ ಅನಾವರಣಗೊಂಡಿದ್ದು ಅಭಿಮಾನಿಗಳ ಅಚ್ಚರಿಗೆ ಕಾರಣವಾಯ್ತು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅಂಪೈರ್ ಕೆಟ್ಟ ತೀರ್ಪಿಗೆ ಸಿಟ್ಟಿಗೆದ್ದು ಪೆವಿಲಿಯನ್​ನಿಂದ ಮೈದಾನಕ್ಕೆ ರಭಸವಾಗಿ ಬಂದು ಬಿಡ್ತಾರೆ.

ಭಾರತದ ಅಂಪೈರ್ ಉಲ್ಲಾಸ್ ಮೊದಲು ನೋ ಬಾಲ್ ಹೇಳಿ, ನಂತರ ಉಲ್ಟಾ ಹೊಡೆದಿದ್ದು ಧೋನಿಯನ್ನ ಧಗಧಗ ಉರಿಯುವಂತೆ ಮಾಡಿರುತ್ತೆ. ಮೊದ್ಲು ಕನಿಷ್ಠ ಕ್ರಿಕೆಟ್ ವಿದ್ಯೆಗಳನ್ನ ತಿಳಿದುಕೊಳ್ಳಿ ಎಂದು ಅಂಪೈರ್​ಗೆ ಹೇಳಿ ಧೋನಿ ಕೋಪದಿಂದ್ಲೇ ಮತ್ತೆ ಗ್ಯಾಲರಿಯತ್ತ ಹೆಜ್ಜೆಹಾಕ್ತಾರೆ.

ಆವತ್ತು ಧೋನಿ ಕೋಪ ಕಂಡ ಅಭಿಮಾನಿಗಳು ಬೆಚ್ಚಿ ಬಿದ್ದಿದ್ರು. ಸದಾ ಶಾಂತವಾಗಿರೊ ನಮ್ಮ ಮಹೇಂದ್ರನಿಗೆ ಈ ಪಾಟಿಯೂ ಕೋಪ ಬರುತ್ತಾ ಅಂತಾ ಹೌಹಾರಿದ್ರು. ಅಷ್ಟರ ಮಟ್ಟಿಗೆ ಧೋನಿಯ ಕೋಪಾಗ್ನಿ ಆನ್​ಪೀಲ್ಡ್ ಅಂಪೈರ್​ಗಳನ್ನ ಬೆಚ್ಚಿ ಬೀಳಿಸಿತ್ತು.

ಅಂಪೈರ್ ವಿರುದ್ಧ ಆನ್​ಫೀಲ್ಡ್​ನಲ್ಲಿ ಕಿಡಿಕಿಡಿ ಕೆಂಡಕಾರಿದ ಚೆನ್ನೈ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಬಿಸಿಸಿಐ ದಂಡ ಹೇರಿದೆ. ಜೈಪುರ ಪಂದ್ಯದ ಶೇಕಡಾ 50ರಷ್ಟು ಮೊತ್ತವನ್ನ ಭರಿಸುವಂತೆ ಧೋನಿಗೆ ಸೂಚಿಸಿರುವ ಬಿಸಿಸಿಐ ಮತ್ತೆ ಈ ರೀತಿ ವರ್ತಿಸದಂತೆ ವಾರ್ನಿಂಗ್ ಮಾಡಿತ್ತು.

, IPL​ನಲ್ಲಿ ಆರ್​ಸಿಬಿ ವಿಫಲ, ಹೆಚ್ಚು ರನ್​ಗಳಿಸಿದ್ದು ವಿದೇಶಿ ಆಟಗಾರರಸ್ಸೆಲ್ ಮೇನಿಯಾಕ್ಕೆ ನಿಬ್ಬೆರಗಾಗಿತ್ತು ಕ್ರಿಕ್ರೆಟ್ ಜಗತ್ತು!
ಇನ್ನು ಈ ಸೀಸನ್​ನ ಬ್ಯಾಟಿಂಗ್​ನಲ್ಲಿ ಸುನಾಮಿ ಎಬ್ಬಿಸಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಡೈನಾಮಿಕ್ ಆಲ್​ರೌಂಡರ್ ಌಂಡ್ರ್ಯೂ ರಸ್ಸೆಲ್. ರಸ್ಸೆಲ್ ಮಸಲ್ ಪವರ್​ಗೆ ಎದುರಾಳಿ ತಂಡದ ಬೌಲರ್​ಗಳು ಬಳಲಿ ಬೆಂಡಾಗಿ ಹೋದ್ರು. ಹೀಗಾಗಿ ರಸ್ಸೆಲ್ ಡಿಎನ್​ಎ ಟೆಸ್ಟ್ ಮಾಡ್ಬೇಕು ಅಂತಾ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದ್ರು.

ಅತಿ ಹೆಚ್ಚು ರನ್​ಗಳಿಸಿದ ಆಸ್ಟ್ರೇಲಿಯಾದ ವಾರ್ನರ್!
ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ಒಂದು ವರ್ಷ ನಿಷೇಧದ ಶಿಕ್ಷೆಗೆ ಒಳಗಾಗಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಐಪಿಎಲ್​ನಲ್ಲಿ ಗ್ರೇಟ್ ಕಮ್​ಬ್ಯಾಕ್ ಮಾಡಿದ್ರು. ಸನ್ ರೈಸರ್ಸ್ ಹೈದ್ರಾಬಾದ್ ಪರ ರನ್ ಮಳೆ ಹರಿಸಿದ ವಾರ್ನರ್, ಒಂದು ಶತಕ ಮತ್ತು 8 ಅರ್ಧಶತಕದ ನೆರವಿನಿಂದ 692 ರನ್​ಗಳಿಸಿ ಟೂರ್ನಿಯಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್ ಅನ್ನೋ ಹಿರಿಮೆಯನ್ನ ತಮ್ಮದಾಗಿಸಿಕೊಂಡ್ರು.

ಮಂಕಡ್ ಔಟ್​ನಿಂದ ಆಕ್ರೋಶಕ್ಕೆ ಒಳಗಾದ ಅಶ್ವಿನ್!
ಇನ್ನು ಈ ಸೀಸನ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್, ಮಂಕಡ್ ಔಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ್ರು. ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್​ನನ್ನ ಮಂಕಡ್ ಔಟ್ ಮಾಡಿದ್ರು. ಅಶ್ವಿನ್ ಹೀಗೆ ಮಂಕಡ್ ಔಟ್ ಮಾಡಿದ್ದಕ್ಕೆ ಅಭಿಮಾನಿಗಳು ಇನ್ನಿಲ್ಲದಂತೆ ಆಕ್ರೋಶಗೊಂಡ್ರು. ಅಂತರಾಷ್ಟ್ರೀಯ ಮಟ್ಟದಲ್ಲಿ ಅಶ್ವಿನ್ ಮಂಕಡ್ ಔಟ್ ಮಾಡಿದ್ದಕ್ಕೆ ಅಭಿಮಾನಿಗಳು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ರು. ಒಟ್ನಲ್ಲಿ ಈ ಬಾರಿಯ ಐಪಿಎಲ್​​ನಲ್ಲಿ ಮಹೇಂದ್ರ ಸಿಂಗ್ ಧೋನಿ ಕೋಪಗೊಂಡಿದ್ದೇ ಅಚ್ಚರಿಗಳಲ್ಲಿ ಅಚ್ಚರಿಯಾಗಿತ್ತು ಅಂದ್ರೆ, ತಪ್ಪಾಗೋದಿಲ್ಲ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!