ಟೆಸ್ಟ್‌.. ಒನ್‌ಡೇ ಸಾಮ್ರಾಟರು.. ಟಿಟ್ವೆಂಟಿ ಗೆಲ್ಲಲು ಪರದಾಟ, 2019ರ T20 ಹಿನ್ನೋಟ

ಈ ವರ್ಷ ಟೆಸ್ಟ್ ಕ್ರಿಕೆಟ್​ನಲ್ಲಿ ಮತ್ತು ಏಕದಿನ ಕ್ರಿಕೆಟ್​ನಲ್ಲಿ ಭಾರತ ಅದ್ವಿತೀಯ ಸಾಧನೆ ಮಾಡಿದೆ ನಿಜ. ಆದ್ರೆ ಟಿಟ್ವೆಂಟಿ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ. ದುರ್ಬಲ ತಂಡಗಳ ವಿರುದ್ಧ ಜಯಗಳಿಸಿದ್ರೂ, ಬಲಿಷ್ಟ ತಂಡಗಳ ವಿರುದ್ಧ ಮುಗ್ಗರಿಸಿ ನಿರಾಸೆ ಅನುಭವಿಸಿದೆ.

ಈ ವರ್ಷದ ಆರಂಭದಲ್ಲೇ ನ್ಯೂಜಿಲೆಂಡ್ ವಿರುದ್ಧದ ಟಿಟ್ವೆಂಟಿ ಸರಣಿಯಲ್ಲಿ ಭಾರತ ಮುಗ್ಗರಿಸ್ತು. ನ್ಯೂಜಿಲೆಂಡ್ ಬಳಿಕ ತವರಿನಲ್ಲೇ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳ ಟಿಟ್ವೆಂಟಿ ಸರಣಿಯಲ್ಲೂ ಮುಗ್ಗರಿಸಿದ್ರು. ನಂತರ ಫ್ಲೋರಿಡಾದಲ್ಲಿ ನಡೆದ ವಿಂಡೀಸ್ ವಿರುದ್ಧದ ಎರಡು ಪಂದ್ಯಗಳ ಟಿಟ್ವೆಂಟಿ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದ್ರು.

ವಿಂಡೀಸ್ ಉಡೀಸ್ ಮಾಡಿದ್ದ ಕೊಹ್ಲಿ ಬಾಯ್ಸ್, ದಕ್ಷಿಣ ಆಫ್ರಿಕಾ ವಿರುದ್ಧದ ಟಿಟ್ವೆಂಟಿ ಸರಣಿಯನ್ನ ಗೆಲ್ಲೋಕಾಗದೇ ಸಮಬಲ ಮಾಡಿಕೊಂಡು ನಿಟ್ಟುಸಿರು ಬಿಟ್ರು. ತವರಿನಲ್ಲೇ ನಡೆದ ಬಾಂಗ್ಲಾದೇಶ ವಿರುದ್ಧದ ಟಿಟ್ವೆಂಟಿ ಸರಣಿಯನ್ನ 2-1ರ ಅಂತರದಿಂದ ಗೆದ್ದು ಬೀಗಿದ್ರು. ಇನ್ನು ವರ್ಷದ ಕೊನೆಯಲ್ಲಿ ವಿಂಡೀಸ್ ವಿರುದ್ಧ ನಡೆದ ಟಿಟ್ವೆಂಟಿ ಸರಣಿಯನ್ನ 2-1ರ ಅಂತರದಿಂದ ಗೆದ್ದು ಬೀಗಿದ್ರು.

2019ರಲ್ಲಿ ಭಾರತ ತಂಡದ ಸಾಧನೆ:
2019ರಲ್ಲಿ 16ಟಿ-ಟ್ವೆಂಟಿ ಪಂದ್ಯಗಳನ್ನಾಡಿದ್ದ ಭಾರತ 9ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನೂಳಿದ 7ಪಂದ್ಯಗಳಲ್ಲಿ ಟೀಂ ಇಂಡಿಯಾ ಹೀನಾಯ ಸೋಲುಕಂಡಿದೆ.

ಹ್ಯಾಟ್ರಿಕ್ ವೀರನಾಗಿ ಹೊರ ಹೊಮ್ಮಿದ ದೀಪಕ್ ಚಹರ್!
ಇನ್ನು ನವೆಂಬರ್ 10ರಂದು ನಾಗ್ಪುರದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಮೂರನೇ ಟಿ-ಟ್ವೆಂಟಿ ಪಂದ್ಯದಲ್ಲಿ ದೀಪಕ್ ಚಹರ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ. ಅಷ್ಟೇ ಅಲ್ಲ. ಈ ಪಂದ್ಯದಲ್ಲಿ ಚಹರ್ ಕೇವಲ 7ರನ್​ಗೆ 6ವಿಕೆಟ್ ಪಡೆದು ಟಿಟ್ವೆಂಟಿ ಕ್ರಿಕೆಟ್​ನಲ್ಲಿ ವಿಶ್ವ ದಾಖಲೆಯನ್ನೇ ಬರೆದಿದ್ದಾನೆ.

ಟಿಟ್ವೆಂಟಿಯಲ್ಲಿ ಬಲಿಷ್ಟಗೊಳ್ಳಬೇಕು ಭಾರತ!
ಟಿಟ್ವೆಂಟಿಯಲ್ಲಿ ಟೀಮ್ ಇಂಡಿಯಾ ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ. ತವರಿನಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿದೆ. ಹೀಗಾಗಿ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯೋ ಟಿಟ್ವೆಂಟಿ ಸರಣಿಗೆ ಕೆಲವೇ ತಿಂಗಳುಗಳು ಮಾತ್ರ ಬಾಕಿಯಿದೆ. ಹೀಗಾಗಿ ಚುಟುಕು ಸಮರದಲ್ಲಿ ಚಾಂಪಿಯನ್ ಆಗ್ಬೇಕು ಅಂದ್ರೆ, ಬ್ಲೂ ಬಾಯ್ಸ್ ಎಲ್ಲಾ ವಿಭಾಗದಲ್ಲೂ ಇಂಪ್ರೂವ್ ಆಗಲೇಬೇಕು.

ಒಟ್ನಲ್ಲಿ 2019ಭಾರತೀಯ ಕ್ರಿಕೆಟ್​ಗೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ಗೆ ಅದೃಷ್ಟದ ವರ್ಷ. ಆದ್ರೆ ಟಿಟ್ವೆಂಟಿ ಕ್ರಿಕೆಟ್​ನಲ್ಲಿ ಭಾರತ ಡಲ್ ಆಗಿದೆ ಅನ್ನೋದನ್ನ ಅಂಕಿ ಅಂಶಗಳೇ ಸಾರಿ ಹೇಳುತ್ತಿವೆ.

Related Posts :

Category:

error: Content is protected !!

This website uses cookies to ensure you get the best experience on our website. Learn more