ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಜುಲೈ 2019ರಲ್ಲಿ. ಒಂದಾದ ನಂತರ ಒಂದರಂತೆ ಸಂಕಷ್ಟ ಸರಮಾಲೆಗಳೇ ಸರ್ಕಾರಕ್ಕೆ ಎದುರಾದವು. ಇಂಥ ಸಂಕಷ್ಟಗಳ ಸಂದರ್ಭದಲ್ಲಿಯೇ ಅಲ್ಲವೇ ನಾಯಕತ್ವದ ನಿಜವಾದ ಸಾಮರ್ಥ್ಯ ಬೆಳಕಿಗೆ ಬರುವುದು? ಮಾರ್ಗದರ್ಶನಕ್ಕಾಗಿ ತಮ್ಮತ್ತ ನೋಡುವ ಅಧಿಕಾರಿಗಳು ಮತ್ತು ಆಸರೆಗಾಗಿ ಹಾತೊರೆಯುವ ಜನಸಾಮಾನ್ಯರನ್ನು ಕೆಲ ಸಚಿವರು ಯಶಸ್ವಿಯಾಗಿ ಮುನ್ನಡೆಸಿದರು. ಕೆಲವರು ಮಾತ್ರ ಆಡಳಿತ ನಿರ್ವಹಣೆಯಲ್ಲಿ ವಿಫಲರಾದರು. ಸಚಿವರ ಕಾರ್ಯವೈಖರಿಯನ್ನು ಅಧ್ಯಯನ ಮಾಡಿ ರೂಪಿಸಿದ ಅಂಕಪಟ್ಟಿಯೊಂದನ್ನು ಟಿವಿ9 ಕನ್ನಡ ಪ್ರಸ್ತುತ ಪಡಿಸುತ್ತಿದೆ. ಈ ಸಂಶೋಧನೆಗೆ ಅಧ್ಯಯನ ಮಾದರಿಯನ್ನು ಅನುಸರಿಸಲಾಗಿದೆ. ಕ್ಷೇತ್ರಕಾರ್ಯ, ಸಚಿವರು ಜನರ ಅಹವಾಲುಗಳನ್ನು ಪರಿಹರಿಸುವ ರೀತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಯಾರ ಮಾರ್ಕ್ಸ್ ಎಷ್ಟು? ಇಲ್ಲಿದೆ ಒಟ್ಟು 25 ಸಚಿವರ ಅಂಕಪಟ್ಟಿ.