ಪ್ರತಿನಿತ್ಯ ಕೆಲ ನಿಯಮಗಳನ್ನು ಪಾಲಿಸಿದ್ರೆ ಜೀವನ ಸುಂದರ!

ಮನುಷ್ಯ ತನ್ನ ಜೀವನದಲ್ಲಿ ಪ್ರತಿನಿತ್ಯ ಕೆಲವು ಕರ್ಮಗಳನ್ನು ಮಾಡ್ತಾನೆ. ನಿತ್ಯ ಮಾಡೋ ಕರ್ಮಗಳ ಪೈಕಿ ಕೆಲ ಕರ್ಮಗಳಿಂದ ಮನುಷ್ಯನ ಜೀವನದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತೆ. ನಾವು ಮಾಡುವ ಒಳ್ಳೆಯ ಕರ್ಮಗಳನ್ನು ಹಿಂದೂ ಸಂಪ್ರದಾಯದ ಪ್ರಕಾರ, ಆಚಾರಗಳೆಂದು ಕರೆಯಲಾಗುತ್ತೆ. ಅಂದ್ರೆ ಯಾವ ಆಚಾರಗಳು ನಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೋ ಅವುಗಳನ್ನು ಸದಾಚಾರವೆಂದು ಹೇಳಲಾಗುತ್ತೆ.

ನಕಾರಾತ್ಮಕ ಪರಿಣಾಮ ಬೀರೋ ಆಚಾರಗಳನ್ನು ದುರಾಚಾರ ಅಂತಾ ಕರೆಯಲಾಗುತ್ತೆ. ಯಾವ ಮನುಷ್ಯ ಜೀವನದಲ್ಲಿ ಸದಾಚಾರಗಳನ್ನು ಪಾಲಿಸ್ತಾನೋ ಆತ ಶಾಂತಿ, ಸಂತೋಷ ಹಾಗೂ ನೆಮ್ಮದಿಯಿಂದ ಇರ್ತಾನೆ ಅಂತಾ ಪುರಾಣಗಳು ಹೇಳುತ್ತವೆ. ಅದೇ ಮನುಷ್ಯ ದುರಾಚಾರಗಳನ್ನೇನಾದ್ರೂ ಮಾಡಿದ್ರೆ ಅವುಗಳಿಂದ ದುಃಖ, ಅಶಾಂತಿ, ಅಸಮಾಧಾನ ಸಿಗಲಿದೆ ಅಂತಲೂ ಪುರಾಣಗಳು ಹೇಳುತ್ತವೆ. ಜೀವನದಲ್ಲಿ ಸಂತೋಷದಿಂದಿರಲು ಪ್ರತಿನಿತ್ಯ ಕೆಲ ಸದಾಚಾರಗಳನ್ನು ಪಾಲಿಸಲೇಬೇಕು ಎನ್ನಲಾಗುತ್ತೆ. ಅಷ್ಟಕ್ಕೂ, ಅಂತಹ ಸದಾಚಾರಗಳೇನು? ಇಲ್ಲಿ ದ

ಜೀವನದಲ್ಲಿ ಪಾಲಿಸಬೇಕಾದ ಸದಾಚಾರಗಳು:
1)ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು-ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಮನಸ್ಸು ಪ್ರಪುಲ್ಲವಾಗಿರುತ್ತೆ. ಕೆಲ ಪುರಾಣಗಳ ಪ್ರಕಾರ, ಅಖಿಲಾಂಡ ಕೋಟಿ ಬ್ರಹ್ಮಾಂಡವನ್ನು ಸೃಷ್ಟಿಸಿದ ಆ ಬ್ರಹ್ಮನೇ ಈ ಮುಹೂರ್ತವನ್ನು ಇಟ್ಟಿದ್ದಾನೆ ಎನ್ನಲಾಗುತ್ತೆ. ಅಂದ ಹಾಗೆ ಬ್ರಾಹ್ಮಿ ಮುಹೂರ್ತ ಯಾವುದು ಅಂದ್ರೆ, ಸೂರ್ಯೋದಯಕ್ಕೂ 1 ಗಂಟೆ 36 ನಿಮಿಷಗಳ ಮುನ್ನದ ಸಮಯವನ್ನು ಬ್ರಾಹ್ಮಿ ಮುಹೂರ್ತ ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಸಮಯದಲ್ಲಿ ಎದ್ದು, ಸಂಕಲ್ಪ ಮಾಡಿ ಯಾವುದೇ ಕಾರ್ಯವನ್ನು ಪ್ರಾರಂಭಿಸಿದ್ರೂ ಯಶಸ್ಸು ಖಂಡಿತ ಎನ್ನಲಾಗುತ್ತೆ.

2)ಭೂತಾಯಿಗೆ ನಮಸ್ಕರಿಸಬೇಕು- ನಾವೆಲ್ಲರೂ ಭೂತಾಯಿಯ ಮಕ್ಕಳು. ಭೂತಾಯಿ ನಮ್ಮನ್ನೆಲ್ಲಾ ಹೊತ್ತು ನಿಂತಿದ್ದಾಳೆ. ಇದೇ ಕಾರಣಕ್ಕೆ ಬೆಳಗ್ಗೆ ಎದ್ದ ತಕ್ಷಣ ಭೂಮಾತೆಗೆ ನಮಸ್ಕಾರ ಮಾಡಬೇಕು. ಪ್ರತಿಯೊಂದು ಹೆಜ್ಜೆಯನ್ನು ಹೆಜ್ಜೆಯಾಗಿ ತೆಗೆದುಕೊಳ್ಳದೇ ಒಂದು ಮುತ್ತಾಗಿ ಸ್ವೀಕಾರ ಮಾಡು ತಾಯಿ ಅಂತಾ ಭೂತಾಯಿಯನ್ನು ಭಕ್ತಿಯಿಂದ ಪ್ರಾರ್ಥಿಸಬೇಕು.

3)ಮುಂಜಾನೆ ಅಂಗೈಗಳನ್ನು ಉಜ್ಜಿಕೊಂಡು ನಂತರ ಅದನ್ನು ನೋಡಿಕೊಳ್ಳಬೇಕು- ಮುಂಜಾನೆ ಎದ್ದ ತಕ್ಷಣ ಎರಡು ಅಂಗೈಗಳನ್ನು ಉಜ್ಜಿಕೊಳ್ಳಬೇಕು. ನಂತರ ಆ ಅಂಗೈಗಳನ್ನು ನೋಡಿಕೊಳ್ಳಬೇಕು ಅಂತಾ ಪುರಾಣಗಳಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ದೇಹಕ್ಕೆ ಅನೇಕ ಲಾಭಗಳಿವೆ ಎನ್ನಲಾಗುತ್ತೆ. ಮುಂಗೈಯಲ್ಲಿ ಅನೇಕ ರೀತಿಯ ಸೂಕ್ಷ್ಮ ಸಂವೇದ ನರಗಳು ಇರುತ್ತವೆ. ಅವುಗಳನ್ನು ಉಜ್ಜಿಕೊಳ್ಳುವುದರಿಂದ ದೇಹ ಜಾಗೃತಗೊಳ್ಳುತ್ತೆ. ಇದ್ರಿಂದ ದೇಹಕ್ಕೂ, ಮನಸ್ಸಿಗೂ ಹಿತವೆನ್ನಿಸಿ ಮುಂಜಾನೆಯ ಮಂಪರು ಮಾಯವಾಗುತ್ತೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

4)ತಂದೆ-ತಾಯಿ, ಗುರುಗಳು ಹಾಗೂ ದೇವರಿಗೆ ನಮಸ್ಕರಿಸಬೇಕು-ತಾಯಿಗಿಂತ ದೇವರಿಲ್ಲ, ತಂದೆಗಿಂತ ಬಂಧುವಿಲ್ಲ, ಗುರುವಿಗಿಂತ ಹಿರಿಯನಿಲ್ಲ ಅಂತಾ ನಮ್ಮ ಪೂರ್ವಜರು ಹೇಳಿದ್ದಾರೆ. ಆದ್ದರಿಂದಲೇ ಮುಂಜಾನೆ ಎದ್ದ ತಕ್ಷಣ ತಂದೆ-ತಾಯಿಗೆ, ಗುರುಗಳಿಗೆ ಹಾಗೂ ದೇವರಿಗೆ ನಮಸ್ಕಾರ ಮಾಡುವುದರಿಂದ ಮನಸ್ಸಿನಲ್ಲಿ ಸದ್ಭಾವನೆ ಮೂಡುತ್ತೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

5)ಸೂರ್ಯ ನಮಸ್ಕಾರ ಮಾಡಬೇಕು- ಜಗತ್ತಿನ ಸಮಸ್ತ ಜೀವಿಗಳ ಅಸ್ತಿತ್ವಕ್ಕೆ ಕಾರಣವಾಗಿರುವ ಭಾಸ್ಕರನಿಗೆ ನಮಸ್ಕಾರ ಮಾಡಬೇಕು. ಇದ್ರಿಂದ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತೆ ಅಂತಾ ಆಯುರ್ವೇದ ಶಾಸ್ತ್ರ ಹೇಳುತ್ತೆ. ಇದಿಷ್ಟೇ ಅಲ್ಲದೇ, ಆಧ್ಯಾತ್ಮಿಕ ಚೈತನ್ಯವನ್ನು ಪಡೆಯಬಹುದು ಅಂತಾ ಹೇಳಲಾಗುತ್ತೆ. ಇನ್ನು ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿರುವುದು ಸೂರ್ಯ ನಮಸ್ಕಾರ. ಈ ಸೂರ್ಯ ನಮಸ್ಕಾರಕ್ಕೆ ಅನಾದಿಕಾಲದಿಂದಲೂ ವಿಶೇಷ ಮಹತ್ವವಿದೆ ಎನ್ನಲಾಗುತ್ತೆ.

6)ಸಮಯಕ್ಕೆ ಸರಿಯಾಗಿ ಭೋಜನ ಮಾಡಬೇಕು- ಮಧ್ಯಾಹ್ನ 12 ಗಂಟೆಯ ಒಳಗಾಗಿ ಭೋಜನ ಮಾಡಬೇಕು ಅಂತಾ ಶಾಸ್ತ್ರಗಳು ಹೇಳುತ್ತವೆ. ಆದ್ರೆ ಈಗಿನ ವಾತಾವರಣಕ್ಕೆ 1ಗಂಟೆಗಾದ್ರೂ ಸರಿ ಭೋಜನವನ್ನು ಮಾಡಿ ಮುಗಿಸಬೇಕು. ಇದ್ರಿಂದ ಆರೋಗ್ಯ ಸುಧಾರಿಸಲಿದೆ ಎನ್ನಲಾಗುತ್ತೆ.

7)ಸಾಯಂಕಾಲ ಸಂಧ್ಯಾವಂದನೆ ಅಥವಾ ಧ್ಯಾನ ಮಾಡಬೇಕು- ಸೂರ್ಯಾಸ್ತವಾಗುವ ಸಮಯದಲ್ಲಿ ಸಂಧ್ಯಾವಂದನೆ ಅಥವಾ ಧ್ಯಾನ ಮಾಡಬೇಕು ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಮಾಡಿದ್ರೆ ಇಡೀ ದಿನ ಸಾರ್ಥಕತೆಯಿಂದ ಕಳೆದ ಭಾವ ಮನಸ್ಸಿನಲ್ಲಿ ಮೂಡುತ್ತೆ. ಅಷ್ಟೇ ಅಲ್ಲದೇ, ಧ್ಯಾನ ಮಾಡುವುದರಿಂದ ಇಡೀ ದಿನದ ಜಂಜಾಟದಿಂದ ನಿರಾಳ ಹೊಂದಬಹುದು ಎನ್ನಲಾಗುತ್ತೆ.

8)ರಾತ್ರಿ ಮಲಗುವ ಮುನ್ನ ಜೀರ್ಣವಾಗುವ ಭೋಜನ ಮಾಡಬೇಕು- ರಾತ್ರಿ ಮಲಗಿದ ಮೇಲೆ ದೇಹವು ನಿಶ್ಚಲ ಸ್ಥಿತಿಯಲ್ಲಿ ಇರುತ್ತೆ. ಆ ಸಮಯದಲ್ಲಿ ದೇಹ ವಿಶ್ರಾಂತ ಸ್ಥಿತಿಯಲ್ಲಿರುತ್ತೆ. ಇಂತಹ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ ಭೋಜನವನ್ನು ಮಾಡಿದರೆ ದೇಹಕ್ಕೆ ಒಳ್ಳೆಯದು. ಹೆಚ್ಚು ಶ್ರಮ ಪಟ್ಟು ಜೀರ್ಣಿಸುವಂತಹ ಭೋಜನ ಮಾಡಿ, ಮಲಗಿದ್ರೆ ಇದ್ರಿಂದ ದೇಹಕ್ಕೆ ಸಮಸ್ಯೆಯಾಗುತ್ತೆ. ಇದೇ ಕಾರಣಕ್ಕೆ ರಾತ್ರಿ ಹೊತ್ತು ಸುಲಭವಾಗಿ ಜೀರ್ಣವಾಗುವ ಆಹಾರ ತಿನ್ನಬೇಕು ಅಂತಾ ತಿಳಿದವರು ಹೇಳ್ತಾರೆ.

ಹೀಗೆ ಪ್ರತಿನಿತ್ಯ ಮುಂಜಾನೆ ಬೇಗ ಏಳುವುದರಿಂದಲೇ ಈ ಸದಾಚಾರಗಳನ್ನೆಲ್ಲಾ ಪಾಲಿಸಬಹುದು. ಇದ್ರಿಂದ ಎಲ್ಲಾ ರೀತಿಯಿಂದಲೂ ಶುಭವಾಗುತ್ತೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ.

Related Tags:

Related Posts :

Category: