ಅಗಲಿದ ಫುಟ್ಬಾಲ್ ಮಹಾನ್​ ಚೇತನ.. ಭಾರತದಲ್ಲೂ ಹೆಜ್ಜೆ ಗುರುತು ಮೂಡಿಸಿದ್ದ ಡಿಯಾಗೋ ಮರಡೋನಾ.. Photos

ತನ್ನ ಮಿಂಚಿನ ಓಟದೊಂದಿಗೆ ಕಾಲ್ಚಳಕ ತೋರುತ್ತ ಪ್ರಪಂಚದಾದ್ಯಂತ ಸಹಸ್ರಾರು ಅಭಿಮಾನಿಗಳನ್ನು ಸಂಪಾದಿಸಿದ್ದ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಗಲಿದ ಮಹಾನ್​ ಚೇತನಕ್ಕೆ ಅವರ ಅಸಂಖ್ಯಾತ ಅಭಿಮಾನಿಗಳು ಅಶ್ರುತರ್ಪಣದ ಮೂಲಕ ವಿದಾಯ ಸಲ್ಲಿಸಿದರು.

  • pruthvi Shankar
  • Published On - 14:37 PM, 27 Nov 2020
ಫುಟ್ಬಾಲ್ ಲೆಜೆಂಡ್ ಡಿಗೋ ಮರಡೋನಾ
ದಕ್ಷಿಣ ಇಟಲಿಯ ನೇಪಲ್ಸ್​ನಲ್ಲಿ, ಸಾಕರ್ ಕಿಂಗ್​ ಡಿಯಾಗೋ ಮರಡೋನಾ ಅವರ ಚಿತ್ರವನ್ನು ನಗರದ ಎರಡು ಬೃಹತ್​ ಕಟ್ಟಡಗಳ ಗೋಡೆಗಳ ಮೇಲೆ ಚಿತ್ರಿಸಿ ಅಗಲಿದ ನಾಯಕನಿಗೆ ಈ ರೀತಿ ವಿಧಾಯ ಹೇಳಿದರು.
ಡಿಸೆಂಬರ್ 11, 2017 ರಂದು ಭಾರತಕ್ಕೆ ಭೇಟಿ ನೀಡಿದ್ದ ಅರ್ಜೆಂಟೀನಾ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ, ತಮ್ಮದೇ ವರ್ಣಚಿತ್ರವನ್ನು ಎತ್ತಿಹಿಡಿದು ಸಂಭ್ರಮಿಸಿದ್ದರು.
ಕೋಲ್ಕತ್ತಾದ ಮದರ್ಸ್ ವ್ಯಾಕ್ಸ್ ಮ್ಯೂಸಿಯಂನಲ್ಲಿರುವ ಡಿಯಾಗೋ ಮರಡೋನಾ ಅವರ ಪ್ರತಿಮೆಯೊಂದಿಗೆ ಮಹಿಳೆಯೊಬ್ಬರು ಸೆಲ್ಫಿ ಕ್ಲಿಕ್ ಮಾಡಿಕೊಂಡ ಕ್ಷಣಗಳು.
ಮುಂಬೈನ ಪ್ರಸಿದ್ಧ ವರ್ಣಚಿತ್ರಗಾರ ಸಾಗರ್ ಕಾಂಬ್ಲಿ, ಹೃದಯಾಘಾತದಿಂದ ನಿಧನರಾದ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ವರ್ಣಚಿತ್ರವನ್ನು ತಮ್ಮ ಕಲಾ ಶಾಲೆಯ ಹೊರಗೆ ಚಿತ್ರಿಸುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಹೃದಯಾಘಾತದಿಂದ ನಿಧನರಾದ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ ಅವರ ಕೊಲ್ಕತ್ತಾದ ಅಭಿಮಾನಿಗಳು ಮರಡೋನಾ ಅವರ ಬೃಹತ್​ ಪ್ಲೇಕ್ಸ್​ಗಳ ಮುಂದೆ ಕ್ಯಾಂಡಲ್​ ಹಿಡಿದು ಶ್ರದ್ಧಾಂಜಲಿ ಸಲ್ಲಿಸಿದರು.
ಅರ್ಜೆಂಟೀನಾದ ಫುಟ್ಬಾಲ್ ಸವ್ಯಸಾಚಿ ಡಿಯಾಗೋ ಮರಡೋನಾ ಅವರಿಗೆ ಕೇರಳದ ಕೊಚ್ಚಿಯಲ್ಲಿ ಅವರ ಅಭಿಮಾನಿಗಳು ಕ್ಯಾಂಡಲ್​ ಲೈಟ್​ ಮುಖಾಂತರ ಗೌರವ ಸಲ್ಲಿಸಿದರು.
ಅಕ್ಟೋಬರ್ 23, 2012 ರಂದು ಭಾರತಕ್ಕೆ ಭೇಟಿ ನೀಡಿದ್ದ ಫುಟ್ಬಾಲ್ ಹೀರೋ ಡಿಯಾಗೋ ಮರಡೋನಾ ಉದ್ಯಮಿ ಬಾಬಿ ಅವರ ಶೂಟಿಂಗ್​ ಅಕಾಡೆಮಿಯಲ್ಲಿ ರೈಫಲ್​ ಹಿಡಿದು ಗುರಿ ಇಟ್ಟ ಸ್ಮರಣೀಯ ದೃಶ್ಯ.
ಹೃದಯಾಘಾತದಿಂದ ನಿಧನರಾದ ಅರ್ಜೆಂಟೀನಾ ಫುಟ್‌ಬಾಲ್ ಸಾಮ್ರಾಟ ಡಿಯಾಗೋ ಮರಡೋನಾ ಅವರ ಪುತ್ಥಳಿ ಎದುರು ಶ್ರದ್ಧಾಂಜಲಿ ಸಲ್ಲಿಸಿದ ತೃಣಮೂಲ ಕಾಂಗ್ರೆಸ್ ಸಚಿವ ಸುಜಿತ್ ಬೋಸ್, ಮರಡೋನಾ ಅವರ ಸಹಿ ಮಾಡಿದ್ದ ಚೆಂಡನ್ನು ಪ್ರದರ್ಶಿಸಿದರು.
ಅಕ್ಟೋಬರ್ 23, 2012 ರಂದು ಭಾರತಕ್ಕೆ ಭೇಟಿ ನೀಡಿದ್ದ ಫುಟ್ಬಾಲ್ ದೈತ್ಯ ಡಿಯಾಗೋ ಮರಡೋನಾ, ಉದ್ಯಮಿ ಬಾಬಿ ಅವರೊಂದಿಗೆ ಚೆಮ್ಮನೂರ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಪ್ಪಟ ಮಲೆಯಾಳಿಯಂತೆ ಪಂಚೆ ಧರಿಸಿ ಭಾರತೀಯರ ಹೃದಯ ಗೆದ್ದಿದ್ದರು.
ಮೆಕ್ಸಿಕೊ ನಗರದ ಅಟ್ಜೆಕಾ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಸಾಕರ್ ಪಂದ್ಯದಲ್ಲಿ ಪಶ್ಚಿಮ ಜರ್ಮನಿಯ ವಿರುದ್ಧ ಅರ್ಜೆಂಟೀನಾ 3-2 ಗೋಲುಗಳಿಂದ ಜಯಗಳಿಸಿ ಮೊದಲ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿತು. ಆ ಸಮಯದಲ್ಲಿ ಡಿಯಾಗೋ ಮರಡೋನಾ ಟ್ರೋಫಿಯನ್ನು ಎತ್ತಿಹಿಡಿದು ಸಂಭ್ರಮಿಸಿದ ಕ್ಷಣಗಳು.