ಪತ್ನಿಕೊಂದು ದಂತ ವೈದ್ಯ ಆತ್ಮಹತ್ಯೆ ಕೇಸ್​: ರೇವಂತ್ ಸಾವಿನ ಸುದ್ದಿ ಕೇಳಿ ಪ್ರಾಣಬಿಟ್ಟ ಪ್ರಿಯತಮೆ!

ಚಿಕ್ಕಮಗಳೂರು: ಪತ್ನಿ ಕೊಂದು ದಂತವೈದ್ಯ ಡಾ.ರೇವಂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಮೃತ ಡಾ.ರೇವಂತ್ ಪ್ರಿಯತಮೆ ಹರ್ಷಿತಾ(32) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೇವಂತ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಹರ್ಷಿತಾ ಪ್ಯಾನಿಗೆ ನೇಣಿ ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ತುಮಕೂರು ನಿವಾಸಿಯಾದ ಹರ್ಷಿತಾ ಆತ್ಮಹತ್ಯೆಗೆ ಮುನ್ನ ಡೆತ್‌ ನೋಟ್ ಬರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರಲ್ಲಿ ಫೆಬ್ರವರಿ 17ರಂದು ಪತ್ನಿ ಕವಿತಾಳ ಕತ್ತುಸೀಳಿ ಡಾ.ರೇವಂತ್ ಬರ್ಬರವಾಗಿ ಕೊಲೆ ಮಾಡಿದ್ದ. ನಂತರ ದರೋಡೆಕೋರರ ಕೃತ್ಯವೆಂದು ಬಿಂಬಿಸಲು ಪ್ರಯತ್ನಿಸಿದ್ದ. ಆದರೆ ಪೊಲೀಸರ ತನಿಖೆ ವೇಳೆ ಸಿಕ್ಕಿ ಬೀಳುವ ಆತಂಕದಿಂದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ರೇವಂತ್ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ:
ಬಿಎಂಟಿಸಿ ಬಸ್ ಚಾಲಕ ಸುಧೀಂದ್ರ ಪತ್ನಿ ಹರ್ಷಿತಾ ಮನೆಯಲ್ಲಿ‌  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯ ವಿರುದ್ದ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು ತಡರಾತ್ರಿ ಮನೆಯಲ್ಲಿ‌ರುವ ಫ್ಯಾನಿಗೆ ಹಗ್ಗಕಟ್ಟಿ ನೇಣಿಗೆ ಶರಣಾಗಿದ್ದಾಳೆ. ಪತಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮದ್ಯ ಸೇವಿಸಿ ಬಂದು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆಂದು ಸಾಯುವ ಮುನ್ನ ಹರ್ಷಿತಾ ಡೆತ್​ನೋಟ್ ಬರೆದಿದ್ದಾಳೆ. ಈ ಸಂಬಂಧ ಆರ್​ಆರ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

12PM- TV9 Kannada Facebook LIVE ಟಿವಿ9 ಕನ್ನಡ ಫೇಸ್ ಬುಕ್ ಲೈವ್

ಪತ್ನಿ ಕೊಂದು ದಂತವೈದ್ಯ ಡಾ.ರೇವಂತ್ ಆತ್ಮಹತ್ಯೆ ಪ್ರಕರಣರೇವಂತ್ ಆತ್ಮಹತ್ಯೆ ಸುದ್ದಿ ತಿಳಿದು ಪ್ರಿಯತಮೆ ನೇಣಿಗೆ ಶರಣು#TV9Kannada #KannadaNews #FBLive #FacebookLive

Tv9Kannada यांनी वर पोस्ट केले शनिवार, २२ फेब्रुवारी, २०२०

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!