ಆಸ್ತಿಗಾಗಿ ಗಂಡನ ಭೀಕರ ಕೊಲೆ ಕೇಸ್​ಗೆ ಸಿಕ್ಕಿದೆ ಟ್ವಿಸ್ಟ್! ಕ್ರಿಕೆಟ್ ಬೆಟ್ಟಿಂಗ್ ಚಟ್ಟ?

ಚಾಮರಾಜನಗರ: ಹಣಕ್ಕಾಗಿ ಅಣ್ಣನ ಜೊತೆ ಸೇರಿ ಪತ್ನಿ ತನ್ನ 2ನೇಪತಿಯನ್ನು ಕೊಂದ ಕೇಸ್​ಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಸುಬ್ರಮಣ್ಯನ ಸಾವಿಗೆ ಕ್ರಿಕೆಟ್ ಬೆಟ್ಟಿಂಗ್ ಚಟವೇ ಕಾರಣವಾಯ್ತಾ ಎಂಬ ಅನುಮಾನ ಮೂಡಿದೆ. ಸುಬ್ರಮಣ್ಯನಿಗೆ ಕ್ರಿಕೆಟ್ ಬೆಟ್ಟಿಂಗ್ ಚಟವಿತ್ತು. ಹೀಗಾಗಿ ಪತ್ನಿ ರಶ್ಮಿಯಿಂದ 50 ಲಕ್ಷ ಹಣ ಪಡೆದಿದ್ದು, ಬೆಟ್ಟಿಂಗ್​ನಲ್ಲಿ ಹಣ ಸೋತು ವಾಪಾಸ್ ಕೊಡಲು ಹಿಂದೇಟು ಹಾಕಿದ್ದಾನೆ ಎಂಬ ಮಾತುಗಳು ಕೇಳಿಬಂದಿವೆ.

ರಶ್ಮಿ ಹಾಗೂ ಸಹೋದರ ಹಣ ಹಿಂತಿರುಗಿಸುವಂತೆ ಸುಬ್ರಮಣ್ಯನ ಬೆನ್ನುಬಿದ್ದಿದ್ದಾರೆ. ಹಣ ಕೊಡದ ಹಿನ್ನೆಲೆ ಸುಬ್ರಹ್ಮಣ್ಯಗೆ ರಶ್ಮಿ ಹಾಗೂ ಸಹೋದರ ಸೇರಿ ಥಳಿಸಿದ್ದಾರೆ. ತೀವ್ರ ಗಾಯಗೊಂಡ ಸುಬ್ರಹ್ಮಣ್ಯ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಬೆಟ್ಟಿಂಗ್ ಎಂಬ ಚಟಕ್ಕೆಯೇ ಚಟ್ಟ ಏರುವಂತಾಯ್ತೇ ಎಂಬ ಮತ್ತೊಂದು ಭಿನ್ನವಾದ ಮಾಹಿತಿ ಹೊರಬಿದ್ದಿದೆ. ಏನೇ ಆಗಲಿ, ಪೊಲೀಸರ ತನಿಖೆಯ ನಂತರವಷ್ಟೆ ನಿಖರವಾದ ಮಾಹಿತಿ ತಿಳಿದು ಬರಬೇಕಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!