ಅಶ್ಲೀಲ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರ ಫೋಟೋ ಅಪ್‌ಲೋಡ್‌ ಮಾಡುತ್ತಿದ್ದವರು ಅರೆಸ್ಟ್

ಬೆಂಗಳೂರು: ಅಶ್ಲೀಲ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರ, ಉಪನ್ಯಾಸಕಿಯರ ಫೋಟೋ ಅಪ್‌ಲೋಡ್‌ ಮಾಡುತ್ತಿದ್ದವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಅಜಯ್ ತನಿಕಾಚಲಂ ಮತ್ತು ವಿಶ್ವಕ್‌ಸೇನ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಫೇಸ್‌ಬುಕ್, ಇನ್‌ಸ್ಟಾ ಗ್ರಾಂನಿಂದ ನಗರದ ಪ್ರಸಿದ್ದ ಕಾಲೇಜುಗಳ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರ ಫೋಟೋ ಕದ್ದು ಅಶ್ಲೀಲ ಜಾಲತಾಣಗಳಲ್ಲಿ ಫೋಟೋ ಅಪ್‌ಲೋಡ್ ಮಾಡುತ್ತಿದ್ದರು. ಸೈಬರ್‌ ಕ್ರೈಂ, CEN ಠಾಣೆಗಳಲ್ಲಿ 7 ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Cyber Crime ಕಾಲೇಜು ಯುವತಿಯರೇ ಹುಷಾರ್! ಫೋಟೋಗಳಾಗುತ್ತಿವೆ ದುರ್ಬಳಕೆ..

Related Tags:

Related Posts :

Category:

error: Content is protected !!