ಶಾಲೆ ಇಲ್ಲ ಅಂತಾ.. ಈಜಲು ಹೋದ ಬಾಲಕರಿಬ್ಬರು ನೀರುಪಾಲು

ಮೈಸೂರು: ಕೊರೊನಾ ಮಹಾಮಾರಿಯಿಂದ ರಾಜ್ಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. ಮನೆಯಲ್ಲೇ ಇದ್ದೂ ಇದ್ದು ಮಕ್ಕಳಿಗೂ ಬೇಜಾರಿಗಿಬಿಟ್ಟಿದೆ. ಅಂತೆಯೇ, ಬೇಸರ ಕಳೆಯಲು ಕೆರೆಗೆ ಈಜಲು ಹೋದ ಬಾಲಕರಿಬ್ಬರು ಮುಳುಗಿರುವ ಅನಾಹುತ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ.

ಮೃತ ಬಾಲಕರನ್ನು ಆಲನಹಳ್ಳಿ ಗ್ರಾಮದ ಪ್ರೀತಂ(11) ಹಾಗೂ ಅರ್ಜುನ್(12) ಎಂದು ಗುರುತಿಸಲಾಗಿದೆ. ಇನ್ನು ಸ್ಥಳೀಯರು ಮೃತದೇಹಗಳನ್ನು ಕೆರೆಯಿಂದ ಹೊರತೆಗೆದರು. ಮಕ್ಕಳ ಮೃತದೇಹವನ್ನು ಕಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತು. ಸ್ಥಳಕ್ಕೆ ಭೇಟಿ ಕೊಟ್ಟ ಹೆಚ್.ಡಿ.ಕೋಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.

Related Tags:

Related Posts :

Category:

error: Content is protected !!