ಅಯ್ಯೋಧ್ಯೆಯ ಶಿಲಾನ್ಯಾಸಕ್ಕೆ ಬಂತು 150 ನದಿಗಳಿಂದ ಸಂಗ್ರಹಿಸಿದ ನೀರು

ಬೆಂಗಳೂರು: ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಭೂಮಿ ಪೂಜೆಗೆ ಸಕಲ ರೀತಿಯಿಂದ ತಯಾರಿ ನಡೆಯುತ್ತಿದ್ದು, ಶ್ರೀರಾಮನ ಭಕ್ತರಿಬ್ಬರು ಈ ಶುಭ ಮುಹೋರ್ತಕ್ಕಾಗಿಯೇ ದೇಶದ 150 ನದಿಗಳಿಂದ ಸಂಗ್ರಹಿಸಿದ ನೀರನ್ನು ಹೊತ್ತು ತಂದಿದ್ದಾರೆ.

ಹೌದು ಶ್ರೀರಾಮನ ಭಕ್ತರಿಬ್ಬರು ರಾಮ ಮಂದಿರದ ಶಿಲಾನ್ಯಾಸಕ್ಕಾಗಿಯೇ ದೇಶದ 150ನದಿಗಳಿಂದ ನೀರನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಎಂಟು ಅತಿ ದೊಡ್ಡ ನದಿಗಳು ಮತ್ತು ಮೂರು ಸಮುದ್ರಗಳ ನೀರು ಸೇರಿವೆ. ಇಷ್ಟೇ ಅಲ್ಲ ಶ್ರೀಲಂಕಾದ 16 ವಿವಿಧ ಪ್ರಮುಖ ಸ್ಥಳಗಳಿಂದ ಮಣ್ಣನ್ನು ಕೂಡಾ ಸಂಗ್ರಹಿಸಿದ್ದು, ಈಗ ಆಗಸ್ಟ್‌ 5ರಂದು ಅಯ್ಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಯಲ್ಲಿ ಈ ನೀರು ಮತ್ತು ವಿಶೇಷ ಮಣ್ಣನ್ನು ಉಪಯೋಗಿಸಲಾಗುವುದು.

ಈ ಬಗ್ಗೆ ತಮ್ಮ ಸಂತಸ ಹಂಚಿಕೊಂಡಿರುವ ಸಹೋದರರಲ್ಲಿ ಒಬ್ಬರಾದ ರಾಧೇಶ್ಯಾಮ್‌ ಪಾಂಡೆ, ತಾವು 1968ರಿಂದಲೇ ಈ ಕಾರ್ಯ ಆರಂಭಿಸಿದ್ದಾಗಿ ತಿಳಿಸಿದ್ದಾರೆ. ಈ ಮಾತನ್ನು ಹೇಳುವಾಗ ಸಹೋದರರಲ್ಲಿ ಧನ್ಯತಾ ಭಾವ ಮೂಡಿದ್ದು ಎದ್ದುಕಾಣುತಿತ್ತು. ಭಕ್ತಿಗೆ ಬೆಲೆ ಕಟ್ಟಲಾದಿತೇ! ಅಲ್ಲವೇ.

Related Tags:

Related Posts :

Category:

error: Content is protected !!