ಬೊಲೆರೊ ವಾಹನ ಡಿಕ್ಕಿ, ಬೈಕ್‌ ಸವಾರರಿಬ್ಬರ ಸಾವು

ಮೈಸೂರು: ಬೊಲೆರೊ ವಾಹನ ಮತ್ತು ಬೈಕ್‌ ನಡುವೆ ಡಿಕ್ಕಿಯಾಗಿ ಬೈಕ್​ ಸವಾರರಿಬ್ಬರು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಯಲಚಗೆರೆ ಬೋರೆ ಗ್ರಾಮದ ಬಳಿ ನಡೆದಿದೆ. ಪುಟ್ಟಸ್ವಾಮಿ(23), ನಾಗರಾಜ್(37) ಮೃತ ದುರ್ದೈವಿಗಳು.

ಕೂಡ್ಲಾಪುರ ನಿವಾಸಿ ಪುಟ್ಟಸ್ವಾಮಿ ಮತ್ತು ನಾಗರಾಜ್ ಇಂದು ಬೆಳಗ್ಗೆ ಕೆಲಸಕ್ಕೆ ಎಂದು ಹೊರಟಿದ್ದರು. ಈ ವೇಳೆ ಬೊಲೆರೊ ವಾಹನ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Tags:

Related Posts :

Category:

error: Content is protected !!