ಜಗಳೂರು ಬಳಿ ಎರಡು ಬೈಕ್ ಮುಖಾಮುಖಿ‌, ಇಬ್ಬರು ಸವಾರರ ಸಾವು

ದಾವಣಗೆರೆ: ಎರಡು ಬೈಕ್‌ ಮಧ್ಯೆ ಡಿಕ್ಕಿಯಾಗಿ ಸವಾರರಿಬ್ಬರು ಮೃತಪಟ್ಟಿರುವ ಘಟನೆ ಜಗಳೂರು ಪಟ್ಟಣದ ಚಿಕ್ಕಮ್ಮನಹಟ್ಟಿ ಕ್ರಾಸ್ ಬಳಿ ನಡೆದಿದೆ. ಕರಿಬಸಪ್ಪ(35), ಹನುಮಂತಪ್ಪ(40) ಮೃತ ದುರ್ದೈವಿಗಳು.

ಎರಡು ಬೈಕ್​ಗಳು ಮುಖಾಮುಖಿ‌ ಡಿಕ್ಕಿಯಾಗಿ ಎರಡೂ ಬೈಕ್​ಗಳ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಮಲೆಮಾಚಿಕೆರೆ ಗ್ರಾಮದ ನಿವಾಸಿ ಕರಿಬಸಪ್ಪ(35) ಮತ್ತು ಕ್ಯಾಸನಹಳ್ಳಿಯ ನಿವಾಸಿ ಹನುಮಂತಪ್ಪ(40) ಘಟನೆಗೆ ಬಲಿಯಾಗಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Related Tags:

Related Posts :

Category: