ಇಸ್ಕಾನ್​ನಲ್ಲಿ ದೀಕ್ಷೆ ಪಡೆದಿದ್ದ ಇಬ್ಬರು ಕಾವೇರಿ ನದಿಯಲ್ಲಿ ಕೊಚ್ಚಿ ಹೋದರು..

ಮಂಡ್ಯ: ಕಾವೇರಿ ನದಿಯಲ್ಲಿ ಕೃಷ್ಣನ ಇಬ್ಬರು ಭಕ್ತರು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಬಳಿಯಿರುವ ಇಸ್ಕಾನ್‌ನ ಫಾರ್ಮ್ ​​ಹೌಸ್​ನಲ್ಲಿ ನಡೆದಿದೆ. ಬೆಂಗಳೂರಿನ ನಂದಿನಿ ಲೇಔಟ್‌ ನಿವಾಸಿ RS ದಾಸ್(43) ಹಾಗೂ ಚಿತ್ರದುರ್ಗದ ನಿವಾಸಿ ಗುಣಾರನವ ದಾಸ್(35) ನೀರುಪಾಲಾದ ದುರ್ದೈವಿಗಳು.
ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಇಬ್ಬರು ಭಕ್ತರು ಮೈಸೂರಿನ ಇಸ್ಕಾನ್ ದೇವಸ್ಥಾನದಲ್ಲಿ ದೀಕ್ಷೆ ಪಡೆದಿದ್ದರು. ಜೊತೆಗೆ, ಇಸ್ಕಾನ್ ಸಂಸ್ಥೆ ಮೂಲಕ ಧಾರ್ಮಿಕ ಕಾರ್ಯ ಮಾಡುತ್ತಿದ್ದರು.

ಆಹಾರ ಸೇವನೆಗೆ ಮುನ್ನ ಸ್ನಾನ ಮಾಡಲು ತೆರಳಿದ್ದ ವೇಳೆ ಆಯಾ ತಪ್ಪಿ ಕಾವೇರಿ ನದಿಯಲ್ಲಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸಲಾಗುತ್ತಿದ್ದು ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Tags:

Related Posts :

Category:

error: Content is protected !!