ಕೆರೆಗೆ ಬಿದ್ದ ಕುರಿಯ ರಕ್ಷಿಸಲು ಹೋಗಿ.. ಇಬ್ಬರು ಜಲ ಸಮಾಧಿ

  • sadhu srinath
  • Published On - 17:53 PM, 29 Oct 2020

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೀಲು ಹೋಳಲಿ ಗ್ರಾಮದ ಕೆರೆಯ ನೀರಿನಲ್ಲಿ ಮುಳುಗಿ‌ ಇಬ್ಬರು ಕುರಿಗಾಹಿಗಳ ಸಾವಿಗಿಡಾಗಿದ್ದಾರೆ. ತಿಮ್ಮಪ್ಪ(46) ಮತ್ತು ಗಣೇಶ್‌(45) ನೀರುಪಾಲಾದವರು.

ನೀರಿಗೆ ಬಿದ್ದ ಕುರಿಯನ್ನು ರಕ್ಷಿಸಲು ಹೋಗಿದ್ದಾಗ ಇವರಿಬ್ಬರೂ ಸಾವು ಕಂಡಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಶವಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.