ಕೊನೆಗೂ ಈಡೇರಿತು ‘ಭರವಸೆ’ UAE​ ನಿಂದ ಮಂಗಳದತ್ತ ಮಹತ್ವಾಕಾಂಕ್ಷಿ ಉಡ್ಡಯನ

ಕೊರೊನಾ ಮಹಾಮಾರಿಯ ಆರ್ಭಟದ ನಡುವೆ ಮಧ್ಯ ಪ್ರಾಚ್ಯ ರಾಷ್ಟ್ರವಾದ UAE (ಯುನೈಟೆಡ್​ ಅರಬ್​ ಎಮಿರೇಟ್ಸ್​) ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆಯೊಂದನ್ನು ಮಾಡಿದೆ. ಇಂದು ಬಾಹ್ಯಾಕಾಶದಲ್ಲಿ ತನ್ನ ಮೊದಲನೇ ಅಂತರ್​ ಗ್ರಹ ಉಪಗ್ರಹದ ಯಶಸ್ವಿ ಉಡಾವಣೆಗೆ ಸಾಕ್ಷಿಯಾಗಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಲು ಮುಂದಾಗಿದೆ.

ಹೌದು, ಜಪಾನ್​ನ ದಕ್ಷಿಣ ಭಾಗದಿಂದ H-2A ರಾಕೆಟ್​ ಮೂಲಕ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡ್ಡಯನ ಕಂಡ Hope ಎಂಬ ಹೆಸರಿನ UAE ದೇಶದ ಉಪಗ್ರಹ ಇದೀಗ ಮಂಗಳ ಗ್ರಹದತ್ತ ತೆರಳಲಿದೆ. ಕಾರ್​ ಗಾತ್ರದ ಈ ಉಪಗ್ರಹ ಸತತ ಏಳು ತಿಂಗಳ ಕಾಲ ಮಂಗಳದತ್ತ ಕ್ರಮಿಸಲಿದ್ದು ನಂತರ ಮಂಗಳ ಗ್ರಹದ ಹವಾಮಾನ ಮತ್ತು ವಾತಾವರಣದ ಬಗ್ಗೆ ಸಂಶೋಧನೆ ನಡೆಸಲಿದೆ.

ಮಧ್ಯಪ್ರಾಚ್ಯದ UAE ದೇಶಕ್ಕೆ ಈ ಉಪಗ್ರಹದ ಉಡ್ಡಯನ ಬಹಳಷ್ಟು ಮಹತ್ವ ಪಡೆದಿದೆ. ಡಿಸೆಂಬರ್​ 2021 ರಲ್ಲಿ ಈ ಸಂಯುಕ್ತ ಅರಬ್​ ರಾಷ್ಟ್ರ ಸ್ಥಾಪನೆಯಾಗಿ 50 ವರ್ಷಗಳು ಪೂರ್ಣಗೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ನಾಡಿನ ಯುವಕರಿಗೆ ಭವಿಷ್ಯದ ಬಗ್ಗೆ ಭರವಸೆ (Hope) ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನ ಕೈಗೊಂಡಿದೆ. 2014ರಲ್ಲಿ ಪ್ರಾರಂಭವಾದ ಈ ಯೋಜನೆಯ ಕನಸು ಇದೀಗ ನನಸಾಗಿದೆ.

Related Tags:

Related Posts :

Category:

error: Content is protected !!