ಹೊಸ ಅವತಾರದಲ್ಲಿ ಆಧಾರ್: ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ ಆಧಾರ್​ PVC ಕಾರ್ಡ್

ದೆಹಲಿ: UIDAI ಇಲಾಖೆಯು ಇದೀಗ ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳಿರುವ ನೂತನ ಆಧಾರ್​ PVC ಕಾರ್ಡ್​ನ ನೀಡಲು ಮುಂದಾಗಿದೆ. ಕೇವಲ 50 ರೂಪಾಯಿಗೆ ಲಭ್ಯವಿರುವ ಈ ಕಾರ್ಡ್​ನ ನಿಮ್ಮ ಜೇಬಿನಲ್ಲಿ ಆರಾಮಾಗಿ ಇಟ್ಟುಕೊಂಡು ಓಡಾಡಬಹುದು ಎಂದು ಇಲಾಖೆಯು ಇದರ ಅನುಕೂಲತೆಯ ಬಗ್ಗೆ ವಿವರಿಸಿದೆ.

ಅಧಿಕ ಬಾಳಿಕೆಯಿರುವ ಈ ಕಾರ್ಡ್​ನಲ್ಲಿರುವ ಆಧಾರ್​ ಮಾಹಿತಿಯನ್ನು ಆಫ್​​ಲೈನ್​ ಮೂಲಕವೂ ಖಚಿತಪಡಿಸಬಹುದು ಎಂದು UIDAI ಇಲಾಖೆ ಮಾಹಿತಿ ನೀಡಿದೆ. ನೂತನ ಆಧಾರ್​ PVC ಕಾರ್ಡ್​ ಮೇಲಿರುವ QR ಕೋಡ್​ನ ನಿಮ್ಮ mಆಧಾರ್​ ಌಪ್​ ಅಥವಾ ಯಾವುದೇ ವಿಂಡೋಸ್​ ಸ್ಕ್ಯಾನರ್​ ಮೂಲಕ ಸ್ಕ್ಯಾನ್​ ಮಾಡಿ ನಿಮ್ಮ ಗುರುತನ್ನು ಖಚಿತಪಡಿಸಬಹುದು ಎಂದು ಆಧಾರ್​ ಇಲಾಖೆ ಹೇಳಿದೆ.

ಅಂದ ಹಾಗೆ, ಈ ಕಾರ್ಡ್​ನಲ್ಲಿ QR ಕೋಡ್​, ಕಾರ್ಡ್​ ಹೊಂದಿರುವ ವ್ಯಕ್ತಿಯ ಫೋಟೋ​ ಮತ್ತು ವಿಳಾಸ, ಮೈಕ್ರೋ ಮಾಹಿತಿ, ಪೂರ್ಣಲೇಖ ಅಥವಾ ಹಾಲೋಗ್ರಾಂ ಮತ್ತು ಕಾರ್ಡ್​ ಮುದ್ರಿಸಿದ ದಿನಾಂಕ ಸೇರಿದಂತೆ ಹಲವಾರು ಭದ್ರತಾ ವೈಶಿಷ್ಟ್ಯಗಳಿರಲಿದೆ. ಈ ಕಾರ್ಡ್​ ಪಡೆಯುವ ಇಚ್ಛೆ ಹೊಂದಿರುವವರು ಆಧಾರ್​ ವೆಬ್​ಸೈಟ್​ನ (www.uidai.gov.in) ಮೈ ಆಧಾರ್​ ವಿಭಾದಲ್ಲಿ ಆರ್ಡರ್​ PVC ಕಾರ್ಡ್​ ಅನ್ನೋ ಲಿಂಕ್​ಗೆ ಹೋಗಬೇಕು.

Related Tags:

Related Posts :

Category:

error: Content is protected !!