ನೀರವ್​ ಮೋದಿಗೆ ಸತತ 6ನೇ ಬಾರಿ ಹಿನ್ನಡೆ: ಲಂಡನ್​ ನ್ಯಾಯಾಲಯದಿಂದ ಜಾಮೀನು ಅರ್ಜಿ ತಿರಸ್ಕಾರ

  • KUSHAL V
  • Published On - 19:18 PM, 26 Oct 2020

ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ವಂಚನೆ ಮಾಡಿದ ಇಂಗ್ಲೆಂಡ್​ಗೆ ಪರಾರಿಯಾಗಿದ್ದ ವಂಚಕ ನೀರವ್​ ಮೋದಿ ಜಾಮೀನು ಅರ್ಜಿ ತಿರಸ್ಕಾರವಾಗಿದೆ.

ನೀರವ್​ ಮೋದಿ ಜಾಮೀನು ಅರ್ಜಿಯನ್ನು ಲಂಡನ್​ ನ್ಯಾಯಾಲಯವು ತಿರಸ್ಕರಿಸಿದೆ. ನ್ಯಾಯಾಲಯವು ಸತತ 6ನೇ ಬಾರಿ ನೀರವ್​ ಮೋದಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಜಾಮೀನು ತಿರಸ್ಕಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಿಬಿಐ ಇದು ವಿದೇಶಾಂಗ ಇಲಾಖೆ, ಇಂಗ್ಲೆಂಡ್​ನ ಕ್ರೌನ್​ ಪ್ರಾಸಿಕ್ಯೂಷನ್​ ಸರ್ವಿಸ್​ ಹಾಗೂ ನಮ್ಮ ನಡುವಿನ ಉತ್ತಮ ಸಮನ್ವಯದ ಪ್ರತಿಫಲ ಎಂದು ತಿಳಿಸಿದೆ.