ಕೊರೊನಾ ಕಾಟ, ಭಾರತದ ವಿದ್ಯಾರ್ಥಿಗಳನ್ನ ಹೊರದಬ್ಬಲು ಸಜ್ಜಾದ ಅಮೆರಿಕ!

ವಾಷಿಂಗ್ಟನ್‌‌: ಕೊರೊನಾ ವೈರಸ್‌ ರುದ್ರನರ್ತನಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ಕಂಗಾಲಾಗಿ ಕುಳಿತಿದೆ. ವಿಶ್ವದಲ್ಲಿಯೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿರುವ ಅಮೆರಿಕ, ಕೊರೊನಾ ಕಾಟ ತಾಳಲಾರದೇ ಈಗ ತನ್ನಲ್ಲಿರುವ ವಿದೇಶಿಗರನ್ನ ದೇಶದಿಂದ ಹೊರಹಾಕಲು ಮುಂದಾಗಿದೆ.

ಹೌದು ಅಮೆರಿಕ ತನ್ನ ನೆಲದಲ್ಲಿ ವಾಸಿಸುತ್ತಿರುವ ವಿದೇಶಿಗರನ್ನ ದೇಶದಿಂದ ಹೊರಗಟ್ಟಲು ಪ್ಲಾನ್‌ ಮಾಡಿದೆ. ಮೊದಲ ಹೆಜ್ಜೆಯಾಗಿ ವಲಸಿಗರಲ್ಲದವರನ್ನ ಹೊರಗಟ್ಟಲು ಸಜ್ಜಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ಸುಮಾರು ನಾಲ್ಕು ಲಕ್ಷ ವಿದೇಶಿಯರು ಅಮೆರಿಕದಿಂದ ಹೊರನಡೆಯಬೇಕಾಗಲಿದೆ. ಆದ್ರೆ ಇವರಲ್ಲಿ ಬಹುತೇಕರು ಏಷ್ಯಾದಿಂದ ಬಂದಿರುವ ವಿದೇಶಿ ವಿದ್ಯಾರ್ಥಿಗಳು ಅನ್ನೋದು ಗಮನಾರ್ಹ.

ಅಮೆರಿಕದಲ್ಲಿ ಸುಮಾರು 4 ಲಕ್ಷ ವಿದೇಶಿ ವಿದ್ಯಾರ್ಥಿಗಳು
ಅಮೆರಿಕದಲ್ಲಿ ಸಧ್ಯ ಭಾರತ ಸೇರಿದಂತೆ ವಿಶ್ವದ ನಾನಾ ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ ಎಫ್‌-1 ವಿಸಾ ಅಡಿಯಲ್ಲಿ ಅಂದ್ರೆ ನೇರ ಅಕಾಡೆಮಿಕ್‌ ಕೋರ್ಸ್‌ಗಳಲ್ಲಿ 3,888,839 ವಿದ್ಯಾರ್ಥಿಗಳು ಮತ್ತು ಎಮ್‌-1 ವಿಸಾ ಅಂದ್ರೆ ವೋಕೆಶನಲ್‌ ಪ್ರೊಫೆಶನಲ್‌ ಕೋರ್ಸ್‌ ಅಡಿಯಲ್ಲಿ 9,518 ವಿದ್ಯಾರ್ಥಿಗಳು ವಾಸಂಗ ಮಾಡುತ್ತಿದ್ದಾರೆ.

ಆನ್‌ಲೈನ್‌ ಕೋರ್ಸ್‌ ವಿದ್ಯಾರ್ಥಿಗಳು ವಾಪಸ್‌
ಆದರೆ ಕೊರೊನಾದಿಂದಾಗಿ ಕೆಲ ವಿಶ್ವವಿದ್ಯಾಲಯಗಳು ಕ್ಲೋಸ್‌ ಆಗಿವೆ. ಇನ್ನು ಹಾರ್ವವರ್ಡ್‌ ವಿಶ್ವವಿದ್ಯಾಲಯ ಸೇರಿದಂತೆ ಕೆಲ ವಿಶ್ವವಿದ್ಯಾಲಯಗಳು ಡಿಜಿಟಲ್‌ ಮೋಡ್‌ ಅಥವಾ ಆನ್‌ಲೈನ್‌ನಲ್ಲಿ ತರಗತಿಗಳನ್ನ ಆರಂಭಿಸಿವೆ. ಹೀಗಾಗಿ ಯಾವ ವಿಶ್ವ ವಿದ್ಯಾಲಯಗಳು ಆನ್‌ಲೈನ್‌ ಕ್ಲಾಸ್‌ ಆರಂಭಿಸಿವೆಯೋ ಅಂಥ ವಿದ್ಯಾರ್ಥಿಗಳನ್ನು ಅವರ ದೇಶಕ್ಕೆ ವಾಪಸ್‌ ಕಳಿಸಲು ಅಮೆರಿಕ ಮುಂದಾಗಿದೆ. ಈ ಸಂಬಂಧ ಅದು ನೂತನ ನಿಯಮಗಳನ್ನ ಜಾರಿಗೆ ತಂದಿದೆ.

ಅಮೆರಿಕ ಹೊರ ಹಾಕುತ್ತಿರುವವರಲ್ಲಿ ಭಾರತ-ಚೀನಾದವರೇ ಹೆಚ್ಚು
ಇದರಡಿ ಈಗ ನೇರವಾಗಿ ತರಗತಿಗಳಿಗೆ ಹಾಜರಾಗದ ಅಂದ್ರೆ ಆನ್‌ಲೈನ್‌ನಲ್ಲಿ ಕೋರ್ಸ್‌ ಮಾಡುತ್ತಿರುವ ವಿದ್ಯಾರ್ಥಿಗಳು ಅಮೆರಿಕದಿಂದ ಹೊರಹೋಗಬೇಕಾಗಿದೆ. ಈ ನಿಯಮದಿಂದ ಅಮೆರಿಕ ಬಿಡಬೇಕಾಗಿರುವವರಲ್ಲಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ಚೀನಾದವರು. ಎರಡನೇ ಸ್ಥಾನದಲ್ಲಿರೋದು ಭಾರತದ ವಿದ್ಯಾರ್ಥಿಗಳು.

ಮೂರನೇ ಸ್ಥಾನದಲ್ಲಿರೋದು ದಕ್ಷಿಣ ಕೋರಿಯಾ ಮತ್ತು ನಂತರದ ಸ್ಥಾನ ಸೌದಿ ಅರೆಬಿಯಾದ ವಿದ್ಯಾರ್ಥಿಗಳದ್ದು. ಅಂದ ಹಾಗೆ ಕೇವಲ ಉನ್ನತ ವ್ಯಾಸಂಗಕ್ಕಾಗಿ ಬರುವ ವಿದ್ಯಾರ್ಥಿಗಳಿಂದಲೇ ಅಮೆರಿಕಕ್ಕೆ ವಾರ್ಷಿಕವಾಗಿ 45 ಬಿಲಿಯನ್‌ ಡಾಲರ್‌ ಆದಾಯವಿದೆ.

Related Tags:

Related Posts :

Category:

error: Content is protected !!