ಸೇತುವೆಯಿಂದ ಕಾವೇರಿಗೆ ಹಾರಿ ವೃದ್ಧ ಆತ್ಮಹತ್ಯೆ, ಎಲ್ಲಿ?

ಕೊಡಗು: ಸೇತುವೆಯಿಂದ ಕಾವೇರಿ ನದಿಗೆ ಹಾರಿ ಅಪರಿಚಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದ ಬಳಿ ಸಂಭವಿಸಿದೆ. ಗ್ರಾಮದಿಂದ ಸುಮಾರು 5 ಕಿ.ಮಿ ದೂರವಿರುವ ಬೇತ್ರಿ ಸೇತುವೆಯಿಂದ ಹಾರಿ ಅಪರಿಚಿತ ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೆಪ್ಪದ ಸಹಾಯದಿಂದ ವೃದ್ಧನ ಶವವನ್ನು ಸ್ಥಳೀಯ ಯುವಕರು ಹೊರತೆಗೆದಿದ್ದಾರೆ. ಸುಮಾರು 65 ವಯಸ್ಸು ಆಸುಪಾಸಿರುವ ಮೃತ ವೃದ್ಧನ ಗುರುತು ಇನ್ನೂ ಪತ್ತೆಯಾಗಿಲ್ಲ. ಮಡಿಕೇರಿ ಗ್ರಾಮಾಂತರ ಪೊಲೀಸರು ವೃದ್ಧನ ಪರಿಚಯ ತಿಳಿಯಲು ಶೋಧ ಪ್ರಾರಂಭಿಸಿದ್ದಾರೆ.

Related Tags:

Related Posts :

Category:

error: Content is protected !!