‘ಕಬ್ಜ’ ಮಾಡಲು ಲಾಂಗ್ ಹಿಡಿದ ಸ್ಯಾಂಡಲ್​ವುಡ್​ನ ಸೂಪರ್​ ಸ್ಟಾರ್​ ಉಪೇಂದ್ರ

ಸ್ಯಾಂಡಲ್​ವುಡ್​ಗೆ ಮಚ್ಚು, ಲಾಂಗ್ ಪರಿಚಯಿಸಿದ್ದೇ ಸೂಪರ್​ಸ್ಟಾರ್ ಉಪೇಂದ್ರ ಎಂಬ ಮಾತಿದೆ. 1995ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲಾಂಗ್ ಹಿಡಿದು ರೌಡಿ ಪಾತ್ರದಲ್ಲಿ ನಟಿಸಿದ್ರು.

 ಇದೀಗ ಸ್ವಂತ ಉಪೇಂದ್ರ ಅವರೇ ‘ಕಬ್ಜ’ ಮಾಡಲು ಲಾಂಗ್ ಹಿಡಿದು ನಿಂತಿದ್ದಾರೆ. ಹೌದು ಆರ್​.ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರದ ಫಸ್ಟ್​ ಲುಕ್ ಇದೀಗ ರಿಲೀಸ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಆರ್​.ಚಂದ್ರು ನಿರ್ದೇಶನದ ‘ಐ ಲವ್​ ಯು’ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಉಪೇಂದ್ರ ನಾಯಕನಾಗಿ ನಟಿಸಿದ್ರು. ಈಗ ಇದೇ ಜೋಡಿ ‘ಕಬ್ಜ’ ಮಾಡಲು ಮುಂದಾಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’​ ಚಿತ್ರ ಒಟ್ಟು 5 ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಬಳಿಕ ದರ್ಶನ್​ ನಟಿಸಿರುವ ‘ಕುರುಕ್ಷೇತ್ರ’ ಸಹ ಪಂಚ ಭಾಷೆಗಳಲ್ಲಿ ರಿಲೀಸ್ ಮಾಡಲಾಗಿತ್ತು. ಇತ್ತೀಚೆಗಷ್ಟೇ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾವೂ 5 ಭಾಷೆಗಳಲ್ಲಿ ತೆರೆಕಂಡಿತ್ತು. ಇದೀಗ ಉಪೇಂದ್ರ ಸಹ ಒಂದು ಹೆಜ್ಜೆ ಮುಂದೆ ಹೋಗಿ 7 ಭಾಷೆಗಳಲ್ಲಿ ‘ಕಬ್ಜ’ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

Related Posts :

Category:

error: Content is protected !!