10 ಕೋಟಿ ಕೊರೊನಾ ಲಸಿಕೆಗೆ 14,625 ಕೋಟಿ ನೀಡಲಿರುವ ಅಮೇರಿಕಾ

ವಾಷಿಂಗ್ಟನ್: ನೂರು ಮಿಲಿಯನ್ ಲಸಿಕೆ ಖರೀದಿಸಲು ಅಮೆರಿಕ ಒಪ್ಪಂದ ಮಾಡಿಕೊಂಡಿದೆ. ಫೈಝರ್, ಬಯಾನ್​ ಟೆಕ್​ ಕಂಪನಿಗಳ ಜೊತೆ ಭಾರಿ ವೆಚ್ಚದ ಕೊರೊನಾ ಲಸಿಕೆ ಖರೀದಿಗೆ ಸಹಿ ಮಾಡಿದೆ. 10 ಕೋಟಿ ಲಸಿಕೆಗೆ 14,625 ಕೋಟಿ ಹಣ ನೀಡಲಿದೆ.

ಫೈಝರ್, ಬಯಾನ್ ಟೆಕ್​ ಕಂಪನಿಗಳ ಕೊರೊನಾ ಲಸಿಕೆಗಳು ಅಕ್ಟೋಬರ್​ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ. ಈ ಕಂಪನಿಗಳು ವರ್ಷಾಂತ್ಯಕ್ಕೆ 10 ಕೋಟಿ ಡೋಸ್​ ತಯಾರಿಸಲಿದ್ದಾರೆ. ಹಾಗೂ 2021ರ ಅಂತ್ಯಕ್ಕೆ 130 ಕೋಟಿ ಡೋಸ್​ ಉತ್ಪಾದನೆಯ ಗುರಿ ಹೊಂದಿದ್ದಾರೆ. ಅಮೆರಿಕ ಜತೆ ಒಪ್ಪಂದ ಬಳಿಕ ಫೈಝರ್​ ಷೇರು ಶೇ.4, ಮತ್ತು ಬಯಾನ್​ ಟೆಕ್​ ಬೆಲೆ ಶೇ.6 ರಷ್ಟು ಷೇರುಗಳ ಮೌಲ್ಯ ಏರಿಕೆಯಾಗಿದೆ.

Related Tags:

Related Posts :

Category:

error: Content is protected !!