ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರು ನಾಮಾಂಕನ

ವಾಷಿಂಗ್‌ಟನ್‌: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನ 2021ನೇ ಸಾಲಿನ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನಾಮ ನಿರ್ದೇಶನ ಮಾಡಲಾಗಿದೆ.

ಹೌದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಇಸ್ಪೇಲ್‌ ಮತ್ತುತ ಯುನೈಟೆಡ್‌ ಅರಬ್‌ ಎಮಿರೈಟ್ಸ್‌ ನಡುವಿನ ದಶಕಗಳ ಸಂಘರ್ಷಕ್ಕೆ ತೆರೆ ಹಾಡಲು ನಡೆಸಿದ ಶಾಂತಿ ಸಂಧಾನ ಯಶಸ್ವಿಯಾಗಿದ್ದಕ್ಕೆ ಈ ನಾಮ ನಿರ್ದೇಶನ ಮಾಡಲಾಗಿದೆ.

ಇಸ್ರೇಲ್‌ ಮತ್ತು ಅರಬ್‌ ದೇಶಗಳ ನಡುವೆ ಹಲವಾರು ದಶಕಗಳಿಂದ ರಾಜಕೀಯ ಸಂಘರ್ಷವಿದೆ. ಪ್ಯಾಲೆಸ್ತಿನ್‌ ಮತ್ತು ಜೆರುಸಲೇಮ್‌ಗೆ ಸಂಬಂಧಿಸಿದಂತೆ ಈ ರಾಷ್ಟ್ರಗಳ ನಡುವಿನ ಸಂಘರ್ಷ ಕೊನೆಗಾಣಿಸಿ ಇತ್ತೀಚೆಗೆ ಐತಿಹಾಸಿಕ ಒಪ್ಪಂದಕ್ಕೆ ಇಸ್ರೇಲ್‌ ಮತ್ತು ಯುನೈಟೆಡ್‌ ಅರಬ್‌ ಎಮಿರೈಟ್ಸ್‌ ದೇಶಗಳು ಸಹಿ ಹಾಕಿದ್ದವು.

Related Tags:

Related Posts :

Category: