ಡೆಡ್ಲಿ ಕೊರೊನಾ ವೈರಸ್​ಗೆ ಅಮೆರಿಕದಲ್ಲಿ ಮೊದಲ ಬಲಿ!

ವಾಷಿಂಗ್ಟನ್: ಮಹಾಮಾರಿ ಕೊರೊನಾ ಅಮೆರಿಕದಲ್ಲಿ ಮೊದಲ ಬಲಿ ಪಡೆದಿದೆ. ಈಗಾಗಲೇ ಚೀನಾದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಕೋವಿಡ್-19, 2977 ಜನರನ್ನು ಬಲಿಪಡೆದಿದೆ. ಇದೀಗ ಅಮೆರಿಕಾಗೆ ಲಗ್ಗೆ ಇಟ್ಟಿರುವ ಕೊರೊನಾ ತನ್ನ ಮೊದಲ ಬಲಿ ಪಡೆದಿದೆ ಎಂದು ವೈಟ್‌ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಈವರೆಗೆ ಅಮೆರಿಕದಲ್ಲಿ ಒಟ್ಟು 62 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಹೊರಗಿನಿಂದ ಬಂದವರಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತ 62 ಜನರ ಪೈಕಿ 15 ಜನ ಚೇತರಿಕೆ ಕಾಣುತ್ತಿದ್ದಾರೆ. ಇನ್ನು ಹೊರಗಿನಿಂದ ಬಂದವರಲ್ಲೇ ಹೆಚ್ಚಾಗಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಇರಾನ್, ಇರಾಕ್ ಮತ್ತು ದಕ್ಷಿಣ ಕೊರಿಯಾಗೆ ತೆರಳಿರುವ ಜನರಿಗೆ ನಿರ್ಬಂಧ ವಿಧಿಸಲಾಗಿದೆ.

ಚೀನಾಗೆ ತೆರಳಿರುವವರಿಗೆ ಈಗಾಗ್ಲೇ ನಿರ್ಬಂಧ ವಿಧಿಸಿದ್ದು, 14 ದಿನಗಳಿಂದ ಇರಾನ್, ಇರಾಕ್ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿದವರಿಗೂ ಅಮೆರಿಕ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ. ಯುಎಸ್-ಮೆಕ್ಸಿಕೊ ಗಡಿ ಮುಚ್ಚುವ ಬಗ್ಗೆಯೂ ಚಿಂತನೆ ನಡೆದಿದ್ದು, ಕೊರೊನಾ ಸೋಂಕಿತ ರಾಷ್ಟ್ರಗಳಿಗೆ ವೈದ್ಯಕೀಯ ನೆರವು ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!