ಕೊವಿಡ್ ಕೇಂದ್ರದಲ್ಲಿ ಎಲ್ಲಿ ನೋಡಿದ್ರೂ ಗಿಜಿ ಗಿಜಿ ಅಂತಾರೆ -ಸೋಂಕಿತರ ಬಗ್ಗೆ ಸಚಿವರ ಉಡಾಫೆ ಮಾತು

ತುಮಕೂರು: ಕೊರೊನಾ ಸೋಂಕಿಗೆ ಸಿಲುಕಿರುವ ಸಾಕಷ್ಟು ಮಂದಿ ತುಸು ಆತಂಕದಲ್ಲೇ ಬದುಕು ಕಳೆಯುತ್ತಿದ್ದಾರೆ. ಆದರೆ, ಇತ್ತ ಸಚಿವರೊಬ್ಬರು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ಸೋಂಕಿತರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.

ಹೌದು, ಸಿದ್ದಗಂಗಾ ಮಠಕ್ಕೆ ಇಂದು ಭೇಟಿಕೊಟ್ಟ ಸಚಿವ ಸೋಮಣ್ಣ ಸ್ವಾಮೀಜಿ ಅವರ ಜೊತೆಗೆ ಮಾತನಾಡುವಾಗ ಬೆಂಗಳೂರಿನ ಕೊವಿಡ್ ಕೇಂದ್ರಗಳಲ್ಲಿ ಎಲ್ಲಾ ಅವರೇ ಇದ್ದಾರೆ ಸ್ವಾಮಿ. ಏನ್ ಮಾಡೋದು ಎಲ್ಲಿ ನೋಡಿದ್ರೂ ಗಿಜಿ ಗಿಜಿ ಅಂತಾರೆ ಎಂದು ಸೋಂಕಿತರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.

ವಿಪರ್ಯಾಸವೆಂದರೆ, ಸಚಿವರ ಜೊತೆ ಮಠಕ್ಕೆ ಬಂದಿದ್ದ ಬಿಜೆಪಿ ನಾಯಕ ಸೊಗಡು ಶಿವಣ್ಣ ಸಹ ಸೋಂಕಿತರ ಬಗ್ಗೆ ಉಡಾಫೆಯ ಮಾತುಗಳ ಆಡಿದ್ದಾರೆ. ಕುರಿ ಮಂದೆ ಇದ್ದಂಗೆ ಇದ್ದಾರೆ ಅಂತಾ ಸಚಿವ ಸೋಮಣ್ಣ ಮಾತಿಗೆ ಧ್ವನಿ ಗೂಡಿಸಿದ್ದಾರೆ.

Related Tags:

Related Posts :

Category:

error: Content is protected !!