ಕೊರೊನಾ ಎಫೆಕ್ಟ್: ಬಾಡಿಗೆ ಕಟ್ಟೋಕೆ ಆಗದೆ, ನೆರವಿಗೆ ಅಂಗಲಾಚಿದ ಪೋಷಕ ನಟಿ

ಬೆಂಗಳೂರು: ದಿಗಂತ್​ ನಟನೆಯ ‘ಲೈಫು ಇಷ್ಟೇನೆ’ ಸಿನಿಮಾದ ಕಾಂಡೋಮ್​ ಸೀನ್​ನಿಂದ ಖ್ಯಾತಿ ಪಡೆದ ಪೋಷಕ ನಟಿ ಲಲಿತಮ್ಮ ಬದುಕು ದುಸ್ತರವಾಗಿದೆ. ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳು ಹಾಗ 50ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಿರುವ ಲಲಿತಮ್ಮಗೆ ಲಾಕ್​ಡೌನ್​ನಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಜೀವನ ನಡೆಸುವುದು ಕಷ್ಟವಾಗುವುದರ ಜೊತೆಗೆ ಸೂರು ಸಹ ಕಳೆದುಕೊಳ್ಳುವ ಸ್ಥಿತಿಯಲ್ಲಿ ಇದ್ದಾರೆ. ಹಾಗಾಗಿ, ಇದೀಗ ಸಹೃದಯಿಗಳಿಗೆ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಉಳಿಯೋಕೆ‌ ಒಂದೆ ಒಂದು ಜಾಗ ಕೊಡ್ಸಿ ಅಂತಾ ಅಂಗಲಾಚಿ ಬೇಡಿದ್ದಾರೆ.

ಲಲಿತಮ್ಮ ಮೊದಲು ಹನುಮಂತನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ರು. ಆದರೆ, ಬಾಡಿಗೆ ಕಟ್ಟೋಕೆ ಆಗದೆ, ಈಗ ಮಾದನಾಯಕನಹಳ್ಳಿಯಲ್ಲಿ ಸ್ನೇಹಿತರ ಮನೆಯಲ್ಲಿ ಕಾಲ ದೂಡ್ತಿದ್ದಾರೆ. ಪರರ ಮನೆಯಲ್ಲಿ ಎಷ್ಟು ದಿನ ಆಶ್ರಯ ಪಡೆಯೋಕಾಗುತ್ತೆ ಅಂತಾ ಕಣ್ಣೀರಿಡ್ತಿರೋ ನಟಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ.

Related Tags:

Related Posts :

Category:

error: Content is protected !!