ಗ್ರಾಮಸ್ಥನಿಂದ ಗ್ರಾ.ಪಂ. ಕಾರ್ಯದರ್ಶಿಗೆ ಛತ್ರಿ ಸೇವೆ: ವಿಡಿಯೋ ಆಯ್ತು ಟ್ರೋಲ್​!

  • KUSHAL V
  • Published On - 18:04 PM, 21 Oct 2020

ಮೈಸೂರು: ಡ್ರೋನ್​ ಸರ್ವೆ ನಡೆಸುವ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಗ್ರಾಮಸ್ಥನೊಬ್ಬ ಛತ್ರಿ ಹಿಡಿದ ವಿಡಿಯೋ ಇದೀಗ ಟ್ರೋಲ್​ಗೆ ಗುರಿಯಾಗಿದೆ. ಮೈಸೂರಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದಿವ್ಯಾಗೆ ಗ್ರಾಮಸ್ಥನೊಬ್ಬ ಕೊಡೆ ಹಿಡಿದಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ಟ್ರೋಲ್​ ಆಗಿದೆ.
ಮೈಸೂರಿನ ಗುಗ್ರಾಲ್‌ ಛತ್ರದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದಿವ್ಯಾರ ನಡೆ ಬಗ್ಗೆ ಆಕ್ಷೇಪ ಸಹ ವ್ಯಕ್ತವಾಗಿದೆ. ಜೊತೆಗೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.

ಏನಿದು ಪ್ರಕರಣ?
ಸ್ವಾಮಿತ್ವ ಯೋಜನೆಯಡಿಯಲ್ಲಿ ಡ್ರೋಣ್‌ ಸರ್ವೆಗೆ ಅಧಿಕಾರಿಗಳ ತಂಡವೊಂದು ಗ್ರಾಮಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದಿವ್ಯಾಗೆ ಗ್ರಾಮಸ್ಥನೊಬ್ಬ ಮಾಸ್ಕ್‌ ಧರಿಸಿ ಛತ್ರಿ ಹಿಡಿದಿದ್ದನು. ಆದ್ರೆ, ದಿವ್ಯಾ ಮಾಸ್ಕ್ ಧರಿಸದೆ ಹಾಗೆ ನಿಂತಿದ್ದರು.

ಇದೀಗ, ಮಾಸ್ಕ್ ಧರಿಸದಿದ್ದಕ್ಕೆ ಹಾಗೂ ಕೊಡೆ ಹಿಡಿಸಿಕೊಂಡಿದ್ದಕ್ಕೆ ದಿವ್ಯಾಗೆ ನೆಟ್ಟಿಗರು ಟೀಕೆಗಳ ಸುರಿಮಳೆಗೈದಿದ್ದಾರೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ನಡೆದಿರುವ ಘಟನೆಯನ್ನ ಮೋದಿ ಹಾಗೂ ಸಚಿವರಿಗೆ ಟ್ಯಾಗ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ.