Rath Saptami: ರಥಸಪ್ತಮಿ ಆಚರಣೆ ಹಿಂದಿನ ಮಹತ್ವದ ಕುರಿತು ಇಲ್ಲಿದೆ ಮಾಹಿತಿ; ವಿಡಿಯೋ ನೋಡಿ
ಸಪ್ತಮಿ ತಿಥಿಯು ಸೂರ್ಯನಿಗೆ ಸಮರ್ಪಿತವಾಗಿದೆ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯನ್ನು ರಥ ಸಪ್ತಮಿ ಅಥವಾ ಮಾಘ ಸಪ್ತಮಿ ಎಂದು ಕರೆಯಲಾಗುತ್ತದೆ. ರಥ ಸಪ್ತಮಿಯ ದಿನದಂದು ಸೂರ್ಯ ದೇವನು ಇಡೀ ಜಗತ್ತನ್ನು ಬೆಳಗಲು ಪ್ರಾರಂಭಿಸಿದನು ಎಂದು ನಂಬಲಾಗಿದೆ, ಇದನ್ನು ಸೂರ್ಯನ ಜನ್ಮದಿನವೆಂದು ಪರಿಗಣಿಸಲಾಗಿದೆ. ಈ ರಥಸಪ್ತಮಿ ದಿನದಂದು ನಮ್ಮ ದೈನಂದಿನ ಚಟುವಟಿಕೆ ಹೇಗಿರಬೇಕು? ಯಾವೆಲ್ಲ ಆಹಾರ ಸೇವಿಸಬೇಕು? ಆಚರಣೆ ಹೇಗೆ? ರಥಸಪ್ತಮಿ ಆಚರಣೆ ಹಿಂದಿನ ಮಹತ್ವ ಏನು? ಎಂಬ ಪ್ರಶ್ನೆಗಳಿಗೆ ಬಸವರಾಜ ಗುರೂಜಿ ಉತ್ತರ ನಿಡಿದ್ದಾರೆ.
ಸಪ್ತಮಿ ತಿಥಿಯು ಸೂರ್ಯನಿಗೆ ಸಮರ್ಪಿತವಾಗಿದೆ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯನ್ನು ರಥ ಸಪ್ತಮಿ ಅಥವಾ ಮಾಘ ಸಪ್ತಮಿ ಎಂದು ಕರೆಯಲಾಗುತ್ತದೆ. ರಥ ಸಪ್ತಮಿಯ ದಿನದಂದು ಸೂರ್ಯ ದೇವನು ಇಡೀ ಜಗತ್ತನ್ನು ಬೆಳಗಲು ಪ್ರಾರಂಭಿಸಿದನು ಎಂದು ನಂಬಲಾಗಿದೆ, ಇದನ್ನು ಸೂರ್ಯನ ಜನ್ಮದಿನವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ದಿನವನ್ನು ಸೂರ್ಯ ಜಯಂತಿ ಎಂದೂ ಕರೆಯುತ್ತಾರೆ. ರಥ ಸಪ್ತಮಿ ಅತ್ಯಂತ ಮಂಗಳಕರ ದಿನವಾಗಿದೆ ಮತ್ತು ಇದು ದಾನ-ಪುಣ್ಯ ಚಟುವಟಿಕೆಗಳಿಗೆ ಸೂರ್ಯ ಗ್ರಹಣದಂತೆ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಸೂರ್ಯನನ್ನು ಆರಾಧಿಸುವುದರಿಂದ ಮತ್ತು ಉಪವಾಸವನ್ನು ಆಚರಿಸುವುದರಿಂದ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಪಡೆಯಬಹುದು. ಈ ದಿನ ಸೂರ್ಯನನ್ನು ಪೂಜಿಸುವುದರಿಂದ ತಿಳಿದ, ತಿಳಿಯದೆ, ಮಾತಿನ ಮೂಲಕ, ದೇಹದಿಂದ, ಮನಸ್ಸಿನಿಂದ, ಪ್ರಸ್ತುತ ಜನ್ಮದಲ್ಲಿ ಮತ್ತು ಹಿಂದಿನ ಜನ್ಮಗಳಲ್ಲಿ ಮಾಡಿದ ಏಳು ರೀತಿಯ ಪಾಪಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ರಥ ಸಪ್ತಮಿಯಂದು ಅರುಣೋದಯ ಸಮಯದಲ್ಲಿ ಸ್ನಾನ ಮಾಡಬೇಕು. ರಥ ಸಪ್ತಮಿ ಸ್ನಾನವು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ ಮತ್ತು ಅರುಣೋದಯ ಸಮಯದಲ್ಲಿ ಮಾತ್ರ ಸೂಚಿಸಲಾಗುತ್ತದೆ. ಈ ರಥಸಪ್ತಮಿ ದಿನದಂದು ನಮ್ಮ ದೈನಂದಿನ ಚಟುವಟಿಕೆ ಹೇಗಿರಬೇಕು? ಯಾವೆಲ್ಲ ಆಹಾರ ಸೇವಿಸಬೇಕು? ಆಚರಣೆ ಹೇಗೆ ಎಂಬ ಪ್ರಶ್ನೆಗಳಿಗೆ ಬಸವರಾಜ ಗುರೂಜಿ ಉತ್ತರ ನಿಡಿದ್ದಾರೆ.