ಪ್ರತಿಷ್ಠಿತ ಕಂಪನಿಗಳ 5ಜಿ ಸ್ಪಾರ್ಟ್​ಫೋನ್​ಗಳು ರೂ. 18,000 ಮತ್ತು ಅದಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿವೆ

ಪ್ರತಿಷ್ಠಿತ ಕಂಪನಿಗಳ 5ಜಿ ಸ್ಪಾರ್ಟ್ ಫೋನ್​ಗಳು ಪೈಪೋಟಿಗೆ ಬಿದ್ದು ಉತ್ಪಾದಿಸುತ್ತಿರುವುದರಿಂದ ಅವು ಕೈಗೆಟಕುವ ಬೆಲೆಗೆ ಸಿಗುತ್ತಿವೆ.

ಮಧ್ಯಮ ವರ್ಗದ ಕುಟುಂಬಗಳಿಗೆ ಫೋನ್ ತೆಗೆದುಕೊಳ್ಳುವಾಗ ತಮ್ಮದೇ ಅದ್ಯತೆಗಳಿರುತ್ತವೆ. ಅದು ಅವರ ಬಜೆಟ್ನಲ್ಲಿ ಬರಬೇಕು ಮತ್ತು ಕೈಯಲ್ಲಿ ಹಿಡಿದಾಗ ನೋಡುವವರಿಗೆ ದುಬಾರಿ ಅನಿಸಬೇಕು. ಯಾಕೆಂದರೆ ಪೋನ್ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮದುವೆಗಾಗಿ ಹುಡುಗ ಹುಡುಗಿಯನ್ನು ನೋಡಲು ಬಂದಾಗ ಅವನ ಜೊತೆ ಬಂದವರು ಕನ್ಯೆಯ ಕುಟುಂಬದ ಸದಸ್ಯರಲ್ಲಿರುವ ಫೋನ್ಗಳನ್ನು ಗಮನಿಸಿ ಮಾತುಕತೆಗೆ ಇಳಿಯುವ ಕಾಲ ಬಂದುಬಿಟ್ಟಿದೆ ಮಾರಾಯ್ರೇ. ಅದು ಬಿಡಿ ಈಗ 5 ಜಿ ಪೋನ್​ಗಳ ಭರಾಟೆ ಶುರುವಾಗಿದೆ. ಎಲ್ಲ ಕಂಪನಿಗಳು ಅವುಗಳನ್ನು ಉತ್ಪಾದಿಸಿ ಮಾರುತ್ತಿವೆ. ಗಮನಿಸಬೇಕಾದ ಸಂತಿಯೇನೆಂದರೆ. ಪ್ರತಿಷ್ಠಿತ ಕಂಪನಿಗಳ 5ಜಿ ಸ್ಪಾರ್ಟ್ ಫೋನ್​ಗಳು ಪೈಪೋಟಿಗೆ ಬಿದ್ದು ಉತ್ಪಾದಿಸುತ್ತಿರುವುದರಿಂದ ಅವು ಕೈಗೆಟಕುವ ಬೆಲೆಗೆ ಸಿಗುತ್ತಿವೆ.

ಓಕೆ, 6ಜಿಬಿ ಱಮ್ ಮತ್ತು 48 ಮೆಗಾ ಪಿಕ್ಸೆಲ್ ಕೆಮೆರಾ ಉಳ್ಳ ರೆಡ್ಮೀ ನೋಟ್ 10ಟಿ ಸ್ಪಾರ್ಟ್ ಫೋನ್ ನಿಮಗೆ ರೂ. 18,000 ಕ್ಕೆ ಸಿಗುತ್ತಿದೆ. 8 ಜಿಬಿ ಱಮ್ 48 ಮೆಗಾ ಪಿಕ್ಸೆಲ್ ಕೆಮೆರಾ ಹೊಂದಿರುವ ಸ್ಯಾಮ್ಸಂಗ್ ಎಮ್ 32 ಸ್ಪಾರ್ಟ್ ಫೋನ್ ಸಹ ರೂ. 18,000 ಗಳಿಗೆ ಸಿಗುತ್ತಿದೆ.

ಹಾಗೆಯೇ, 8ಜಿಬಿ ಱಮ್ 48 ಮೆಗಾ ಪಿಕ್ಸೆಲ್ ಕೆಮೆರಾ ಹೊಂದಿರುವ ರೀಯಲ್ಮೀ 8 ಸ್ಪಾರ್ಟ್ ಫೋನ್ ರೂ. 18,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. 700 ಡೈಮಿನ್ಸಿಟಿ ಪ್ರೊಸೆಸ್ಸರ್ ಹೊಂದಿರುವ ಪೊಕೊ ಸ್ಪಾರ್ಟ್ ಫೋನ್ ಬೆಲೆಯೂ 18,000 ರೂ. ಗಳಿಗಿಂತ ಕಡಿಮೆ.

ಇದನ್ನೂ ಓದಿ:   ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​

Click on your DTH Provider to Add TV9 Kannada