ಬಾಲಿವುಡ್ ತಾರೆ ಆಲಿಯಾ ಭಟ್ ಅವರಲ್ಲಿ ದುಬಾರಿ ಮತ್ತು ಸೊಗಸಾದ ಹ್ಯಾಂಡ್ ಬ್ಯಾಗ್​ಗಳ ಸಂಗ್ರಹವಿದೆ

ಆಲಿಯಾ ಅವರಲ್ಲಿ ನೀಲಿ ಬಣ್ಣದ ಹರ್ಮೆಸ್ ಕೆಲ್ಲಿ ಹ್ಯಾಂಡ್ ಬ್ಯಾಗ್ ಸಹ ಇದೆ. ಇದನ್ನೂ ಅವರು ಜಾಸ್ತಿ ಬಳಸುತ್ತಾರೆ.

ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರ ಮುದ್ದಿನ ಕುವರಿ ಆಲಿಯಾ ಭಟ್ ಸದಾ ಸುದ್ದಿಯಲ್ಲಿರುತ್ತಾರೆ. ‘ಸ್ಟೂಡೆಂಟ್ ಆಫ್ ದಿ ಈಯರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಅತ್ಯಂತ ಫ್ಯಾಶನೇಬಲ್ ನಟಿ ಎಂಬ ಟ್ಯಾಗಿಗೂ ಪಾತ್ರರಾಗಿದ್ದಾರೆ. ಹಾಗಂತ ಅವರು, ಕೇವಲ ತಮ್ಮ ಉಡುಗೆ ತೊಡುಗೆಯಿಂದ ಫ್ಯಾಶನ್ ರಾಣಿ ಅನಿಸಿಕೊಂಡಿಲ್ಲ. ಕಪೂರ್ ಖಾಂದಾನಿನ ಸೊಸೆಯಾಗಲಿದ್ದಾರೆ ಎಂದು ಹೇಳಲಾಗುತ್ತಿರುವ ಆಲಿಯಾ ತಮ್ಮಲ್ಲಿರುವ ಹ್ಯಾಂಡ್ ಬ್ಯಾಗ್ ಗಳಿಂದಲೂ ಸುದ್ದಿ ಮಾಡುತ್ತಿರುತ್ತಾರೆ. ಅದರಲ್ಲೂ ವಿಶೇಷವಾಗಿ ಅವರು ವಿದೇಶಗಳಿಗೆ ಹಾರುವಾಗ ಅವರ ಬ್ಯಾಗ್ಗಳನನ್ನು ನೀವು ಗಮನಿಸಬೇಕು. ಒಂದಕ್ಕಿಂತ ಒಂದು ದುಬಾರಿ ಮತ್ತು ಚೆಂದ.

ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಅವರು ಡಿಸೈನರ್ ಬ್ಯಾಗ್ ಗಳ ದೊಡ್ಡ ಸಂಗ್ರಹವನ್ನೇ ತಮ್ಮಲ್ಲಿಟ್ಟುಕೊಂಡಿದ್ದಾರೆ. ಯಾವುದೇ ಪ್ರತಿಷ್ಠಿತ ಕಂಪನಿಯ ಬ್ಯಾಗನ್ನು ನೀವು ಹೆಸರಿಸಿ, ಅದು ಅವರಲ್ಲಿ ಸಿಗುತ್ತದೆ.

ಈ ವಿಡಿಯೋನಲ್ಲಿ ಶ್ವೇತವಸ್ತ್ರಧಾರಿಯಾಗಿ ಕಾರಿನಿಂದ ಇಳಿಯುತ್ತಿರುವ ಆಲಿಯಾರನ್ನು ನೋಡಿ. ಈಗ ಅವರ ಕೈಯಲ್ಲಿರುವ ಕೆಂಪು ಬ್ಯಾಗಿನ ಕಡೆ ಗಮನಹರಿಸಿ. ಅದು ಗುಕ್ಕಿ ರಾಜಾ ಟೊಟೆ ಬ್ಯಾಗ್. ಅಂದಹಾಗೆ, ಈ ಕೆಂಪು ಚೀಲದ ಬೆಲೆಯೆಷ್ಟು ಅಂತ ಊಹಿಸಬಲ್ಲಿರಾ. ರೂ 1,69,000!

ಅನೇಕ ಸಲ ಅವರು ತೊಡುವ ಬಟ್ಟೆಗಿಂತ ಬ್ಯಾಗಿನ ಕಿಮ್ಮತ್ತು ಜಾಸ್ತಿಯಿರುತ್ತದೆ. ಮತ್ತೊಂದು ಸಂಗತಿಯನ್ನು ನಿಮಗಿಲ್ಲಿ ಹೇಳಬೇಕು. ಏನು ಗೊತ್ತಾ? ಈ ರೆಡ್ ಬ್ಯಾಗ್ ಅವರ ಫೇವರಿಟ್ ಇರಬಹುದು, ಇದರೊಂದಿಗೆ ಅವರು ಬಹಳ ಸಲ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ನಿಮಗೆ ಹೇಳೋದು ಮರೆತುಹೋಗಿತ್ತು. ಆಲಿಯಾ ಅವರಲ್ಲಿ ನೀಲಿ ಬಣ್ಣದ ಹರ್ಮೆಸ್ ಕೆಲ್ಲಿ ಹ್ಯಾಂಡ್ ಬ್ಯಾಗ್ ಸಹ ಇದೆ. ಇದನ್ನೂ ಅವರು ಜಾಸ್ತಿ ಬಳಸುತ್ತಾರೆ. ಇದರ ಬೆಲೆಯನ್ನು ನಿಮಗೆ ಹೇಳಿಬಿಡ್ತೀವಿ; ರೂ. 5 ಲಕ್ಷ ಮಾತ್ರ!!

ಇದನ್ನೂ ಓದಿ:  Shocking Video: ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಬಟ್ಟೆ ಅಂಗಡಿ ಒಳಗೆ ನುಗ್ಗಿದ ಬೈಕ್​; ಶಾಕಿಂಗ್​ ವಿಡಿಯೊ ವೈರಲ್​

Click on your DTH Provider to Add TV9 Kannada