ಕೊರೊನಾಕ್ಕೀಡಾದ ನಟಿ ಅನುಪ್ರಭಾಕರ್ ಟ್ವೀಟ್ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ. ಕೋವಿಡ್ ವಿಷ್ಯದಲ್ಲಿ ಸರ್ಕಾರ, ಬಿಬಿಎಂಪಿ ತೋರುತ್ತಿರೋ ನಿರ್ಲಕ್ಷ್ಯ ಬಿಚ್ಚಿಟ್ಟಿದ್ದಾರೆ ನಟಿ. ಕೋವಿಡ್ 19 ವಿಷ್ಯದಲ್ಲಿ ಆಗ್ತಿರೋ ಅವ್ಯವಸ್ಥೆಯ ಬಗ್ಗೆ ಟ್ವಿಟರ್ ಮೂಲಕ ಸಚಿವ ಸುಧಾಕರ್ ಗಮನಕ್ಕೆ ತಂದಿದ್ದಾರೆ.ನನಗೆ ಕೊರೊನಾ ಬಂದು ಆರು ದಿನವಾಗಿದೆ,ನಾನು ಮನೆಯಲ್ಲೇ ಐಸೋಲೇಟ್ ಆಗಿದ್ದೇನೆ . ಆದ್ರೂ ಇಲ್ಲಿ ತನಕ ಬಿಬಿಎಂಪಿ ಯಿಂದ ಫೋನ್ ಬಂದಿಲ್ಲ ,ನನ್ನ ರಿಪೋರ್ಟ್ ಇನ್ನೂ ಕೋವಿಡ್ ವಾರ್ ವೆಬ್ ಸೈಟ್ ಗೆ ಅಪ್ಲೋಡ್ ಆಗಿಲ್ಲ,ನನಗೆ ಇನ್ನೂ BU ನಂಬರ್ ಸಿಕ್ಕಿಲ್ಲ, ಇದನ್ನು ನಿಮ್ಮ ಗಮನಕ್ಕೆ ತಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.