ಎಸಿ ಅಪೂರ್ವ ಬಿದರಿ ವಿರುದ್ಧ ಎಫ್ಐಆರ್ಗೆ ಆದೇಶ
ಬೆಂಗಳೂರು ದಕ್ಷಿಣ ತಾಲೂಕಿನ ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ ಅವರ ವಿರುದ್ಧ ಅರೆನ್ಯಾಯಿಕ ಪ್ರಕರಣಗಳಲ್ಲಿ ದೋಷಪೂರಿತ ಆದೇಶ ಹೊರಡಿಸಿದ ಆರೋಪದ ಮೇಲೆ FIR ದಾಖಲಿಸಲು ಆದೇಶಿಸಲಾಗಿದೆ. ರೆವಿನ್ಯೂ ಕಮಿಷನರ್ ಪರಿಶೀಲನೆಯಲ್ಲಿ 53 ಏಕಪಕ್ಷೀಯ ಅಕ್ರಮ ಆದೇಶಗಳು ಬೆಳಕಿಗೆ ಬಂದಿದೆ. ಮೇಲ್ಮನವಿ ಪ್ರಕರಣಗಳನ್ನು ವಿಲೇವಾರಿ ಮಾಡುವಲ್ಲಿ ಲೋಪವನ್ನೂ ಕಂಡುಹಿಡಿಯಲಾಗಿದೆ.
ಬೆಂಗಳೂರು, ಜುಲೈ 02: ಅರೆನ್ಯಾಯಿಕ ಪ್ರಕರಣಗಳಲ್ಲಿ ದೋಷಪೂರಿತ ಆದೇಶ ಹೊರಡಿಸಿದ ಆರೋಪ ಹಿನ್ನಲೆ ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ (Apoorva Bidari) ವಿರುದ್ಧ ಎಫ್ಐಆರ್ದಾಖಲಿಸಲು ಬೆಂಗಳೂರು ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಶ್ವಾಸ್ ಆದೇಶಿಸಿದ್ದಾರೆ. ಮೇಲ್ಮನವಿ ಪ್ರಕರಣಗಳನ್ನು ವಿಲೇವಾರಿ ಮಾಡುವಲ್ಲಿ ಲೋಪವೆಸಗಿದ್ದು, ರೆವಿನ್ಯೂ ಕಮಿಷನರ್ ಪರಿಶೀಲನೆಯಲ್ಲಿ 53 ಏಕಪಕ್ಷೀಯ ಅಕ್ರಮ ಆದೇಶ ಬೆಳಕಿಗೆ ಬಂದಿದೆ. ದೂರುಗಳು ಬಂದ ಹಿನ್ನೆಲೆ ಜಿಲ್ಲಾಡಳಿತ ಎಸಿ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಚೇರಿಗೆ ಭೇಟಿ ಕೊಟ್ಟಾಗ ಅಪೂರ್ವ ಬಿದರಿ ಬಂದಿರಲಿಲ್ಲ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 02, 2025 12:49 PM
Latest Videos