ಪರೀಕ್ಷೆ ಬರೆಯಲು ಹೋಗುವಾಗ ಆತ್ಮವಿಶ್ವಾಸಕ್ಕಿಂತ ದೊಡ್ಡ ಸಂಗತಿ ಮತ್ತೊಂದಿಲ್ಲ: ಡಾ ಸೌಜನ್ಯ ವಶಿಷ್ಠ

ಪರೀಕ್ಷೆ ಬರೆಯಲು ಹೋಗುವಾಗ ಆತ್ಮವಿಶ್ವಾಸಕ್ಕಿಂತ ದೊಡ್ಡ ಸಂಗತಿ ಮತ್ತೊಂದಿಲ್ಲ: ಡಾ ಸೌಜನ್ಯ ವಶಿಷ್ಠ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 12, 2022 | 8:59 PM

ಪರೀಕ್ಷಾ ಕೇಂದ್ರಕ್ಕೆ ಕನಿಷ್ಟ ಒಂದು ಗಂಟೆ ಮೊದಲು ಹೋದರೆ ಅನಾವಶ್ಯಕ ಉದ್ವೇಗವನ್ನು ದೂರ ಮಾಡಬಹುದು ಸೌಜನ್ಯ ಹೇಳುತ್ತಾರೆ. ಪರೀಕ್ಷಾ ಹಾಲ್ ನೊಳಗೆ ಹೋದ ಮೇಲೆ ಸಹ ದೀರ್ಘ ಉಸಿರಾಟ ಮಾಡುವ ಆತಂಕ ಇಲ್ಲವಾಗಿಸಿಕೊಳ್ಳಬೇಕು.

ಮಾರ್ಚ್-ಏಪ್ರಿಲ್ ಪರೀಕ್ಷೆಗಳ ಸಮಯ. ಅದು ಬಂತು ಅಂತಾದರೆ, ಮಕ್ಕಳ ಜೊತೆ ಪಾಲಕರಿಗೂ ಆತಂಕ. ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳೆಲ್ಲ ಆನ್ಲೈನ್ ಕ್ಲಾಸ್ಗಳನ್ನು ಅಟೆಂಡ್ ಮಾಡಿರುವುದರಿಂದ ಆತಂಕ ದುಪ್ಟಟ್ಟಾಗಿದೆ. ಮನೇಲಿದ್ದು ಅವರು ಎಷ್ಟು ಓದಿದ್ದಾರೆ ಅಂತ ತಂದೆತಾಯಿಗಳಿಗೆ (parents) ಚೆನ್ನಾಗಿ ಗೊತ್ತಿದೆ! ಈ ಹಿನ್ನೆಲೆಯಲ್ಲೇ ಪರೀಕ್ಷೆಗಳಿಗೆ ಸಿದ್ದರಾಗುತ್ತಿರುವ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ (Dr Soujanya Vashishta) ಟಿಪ್ಸ್ ನೀಡಿದ್ದಾರೆ. ಅವರು ನೀಡುವ ಮೊದಲ ಸಲಹೆ ಎಂದರೆ, ಪರೀಕ್ಷೆ ಬಗ್ಗೆ ಇರುವ ಭಯ (fear) ಮತ್ತು ಆತಂಕವನ್ನು (panic) ದೂರ ಮಾಡಿಕೊಳ್ಳುವುದು. ಆನ್ಲೈನ್ ಕ್ಲಾಸ್ ಗಳಿಂದಾಗಿ ಏನೂ ಅರ್ಥವಾಗಿಲ್ಲ, ಏನು ಬರೆಯುವುದು ಅಂತ ತಳಮಳಕ್ಕೆ ಆಸ್ಪದೆ ನೀಡದೆ, ಧೈರ್ಯವಾಗಿ ಮತ್ತು ಆತ್ಮವಿಶ್ವಾಸದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು ಅಂತ ಅವರು ಹೇಳುತ್ತಾರೆ. I can do it; I will do it and I am confident ಎಂಬ ಧೋರಣೆ ವಿದ್ಯಾರ್ಥಿಗಳಲ್ಲಿರಬೇಕು, impossible ಶಬ್ದದಲ್ಲೇ I’m possible ಅನ್ನೋ ಅರ್ಥ ಅಡಗಿದೆ ಅಂತ ಡಾ ಸೌಜನ್ಯ ಹೇಳುತ್ತಾರೆ.

ಪರೀಕ್ಷಾ ಕೇಂದ್ರಕ್ಕೆ ಕನಿಷ್ಟ ಒಂದು ಗಂಟೆ ಮೊದಲು ಹೋದರೆ ಅನಾವಶ್ಯಕ ಉದ್ವೇಗವನ್ನು ದೂರ ಮಾಡಬಹುದು ಸೌಜನ್ಯ ಹೇಳುತ್ತಾರೆ. ಪರೀಕ್ಷಾ ಹಾಲ್ ನೊಳಗೆ ಹೋದ ಮೇಲೆ ಸಹ ದೀರ್ಘ ಉಸಿರಾಟ ಮಾಡುವ ಆತಂಕ ಇಲ್ಲವಾಗಿಸಿಕೊಳ್ಳಬೇಕು. ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮೇಲೆ, ಗೊತ್ತಿರದ ಪ್ರಶ್ನೆಗಳು ಕಂಡಾಗ ಗಾಬರಿಯಾಗುವುದು ಸಹಜ. ಅದರೆ ಪ್ಯಾನಿಕ್ ಆಗುವುದು ಬೇಡ, ನಿಮಗೆ ಗೊತ್ತಿರುವ ಪ್ರಶ್ನೆಗಳನ್ನು ಮೊದಲು ಬರೆಯಿರಿ ಎಂದು ಅವರು ಹೇಳುತ್ತಾರೆ.

ಮೂರು ತಾಸಿನಲ್ಲಿ ಪರೀಕ್ಷೆ ಬರೆದು ಮುಗಿಸಲು ಸಾಧ್ಯವಾಗುವ ಹಾಗೆ ಸುಮಾರು 15 ದಿನಗಳಷ್ಟು ಮೊದಲೇ ಆ ನಿಟ್ಟಿನಲ್ಲಿ ಪ್ರ್ಯಾಕ್ಟೀಸ್ ಮಾಡಬೇಕು ಅಂತ ಸೌಜನ್ಯ ಹೇಳುತ್ತಾರೆ. ಹಳೆಯ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಪ್ರತ್ಯೇಕವಾಗಿ ಒಂದು ರೂಮಲ್ಲಿ ಕುಳಿತು ಅದನ್ನು ಬಿಡಿಸುವ ಪ್ರಯತ್ನ ಮಾಡಬೇಕು ಎಂದು ಅವರು ಹೇಳುತ್ತಾರೆ. ಇದನ್ನು ಅಭ್ಯಾಸ ಮಾಡಿಕೊಂಡರೆ ಅಸಲು ಪರೀಕ್ಷೆಯನ್ನು ಆರಾಮವಾಗಿ ಮೂರು ಗಂಟೆಯಲ್ಲಿ ಬರೆಯಬಹುದು.

ಪರೀಕ್ಷೆ ಬರೆದು ಹೊರ ಬಂದ ನಂತರ ಸ್ನೇಹಿತರ ಜೊತೆ ಅದನ್ನು ಡಿಸ್ಕಸ್ ಮಾಡಬೇಡಿ ಎಂದು ಸೌಜನ್ಯ ಹೇಳುತ್ತಾರೆ. ಯಾಕೆಂದರೆ ನಿಮ್ಮ ಉತ್ತರ ತಪ್ಪಾಗಿದ್ದರೂ ಅದನ್ನು ಬದಲಾಯಿಸುವುದು ಸಾಧ್ಯವಿಲ್ಲ. ಅದನ್ನೇ ಯೋಚಿಸುತ್ತಾ ಕುಳಿತರೆ ಅದು ಉಳಿದ ಪರೀಕ್ಷೆಗಳ ತಯಾರಿ ಮೇಲೆ ಪ್ರಭಾಬವ ಬೀರುತ್ತದೆ ಎಂದು ಅವರು ಹೇಳುತ್ತಾರೆ.
ಪರೀಕ್ಷೆಗಳ ಸಮಯದಲ್ಲಿ ಯಾವ ಕಾರಣಕ್ಕೂ ನಿದ್ದೆಗೆಡಬಾರದು, ಕನಿಷ್ಟ 6 ಗಂಟೆ ನಿದ್ರೆ ಮಾಡಲೇಬೇಕು ಅಂತ ಅವರು ಹೇಳುತ್ತಾರೆ. ಪರೀಕ್ಷೆಗೆ ಹೊರಡುವ ಮೊದಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಯೂನಿಫಾರ್ಮ, ಹಾಲ್ ಟಿಕೆಟ್, ಪೆನ್, ಪೆನ್ಸಿಲ್, ಪ್ಯಾಡ್, ಇನ್ ಸ್ಟ್ರುಮೆಂಟ್ ಬಾಕ್ಸ್ ಇನ್ನಿತರ ಅವಶ್ಯಕ ವಸ್ತುಗಳನ್ನು ಜೋಡಿಸಿಕೊಂಡಿರಬೇಕು ಎಂದು ಅವರು ಹೇಳುತ್ತಾರೆ.

ಓದುವಾಗ ಒಂದೇ ಸಮನೆ ಓದದೆ ಪ್ರತಿ ಅರ್ಧಗಂಟೆಗೊಮ್ಮೆ 5 ನಿಮಿಷ ಬ್ರೇಕ್ ತೆಗೆದುಕೊಂಡು ಅರ್ಧಗಂಟೆಯಲ್ಲಿ ಓದಿದನ್ನು ರಿವೈಸ್ ಮಾಡಿಕೊಳ್ಳಬೇಕು ಎನ್ನುತ್ತಾರೆ ಡಾ ಸೌಜನ್ಯ. ಪರೀಕ್ಷೆ ಬರೆಯಲು ಹೋಗುವಾಗ ಏನು ತಿನ್ನಬೇಕು ಅನ್ನುವುದರ ಮೇಲೆಯೂ ಗಮನವಿರಲಿ. ಲಘು ಮತ್ತು ದೇಹಕ್ಕೆ ಶಕ್ತಿ ಒದಗಿಸುವ ಆಹಾರ ತಿನ್ನಿ ಅಂತ ಅವರು ಹೇಳುತ್ತಾರೆ.

ಕೊನೆಯದಾಗಿ ಪರೀಕ್ಷೆಗೆ ಹೋಗುವ ಮೊದಲು I can do it, I will do it, I am confident ಅಂತ ಮತ್ತೊಮ್ಮೆ ಹೇಳಿಕೊಳ್ಳಿ ಅಂತ ಡಾ ಸೌಜನ್ಯ ವಶಿಷ್ಠ ವಿದ್ಯಾರ್ಥಿಗಳಿಗೆ ಹೇಳುತ್ತಾರೆ.

ಇದನ್ನೂ ಓದಿ:   Virat Kohli: ಆರ್​ಸಿಬಿ ಹೊಸ ವಿಡಿಯೋ ರಿಲೀಸ್: ಮಾರ್ಚ್ 12ಕ್ಕೂ ಮೊದಲೇ ಸರ್​ಪ್ರೈಸ್ ಕೊಟ್ಟ ವಿರಾಟ್ ಕೊಹ್ಲಿ