ಕೊರೋನಾ ಪಿಡುಗಿನ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಡೆಂಘೀಯ ಉಪಟಳ ಹೆಚ್ಚುತ್ತಿದೆ, ಉತ್ತರ ಭಾರತದಲ್ಲಿ ಹೆಚ್ಚು ಪ್ರಕರಣಗಳು
ಲಭ್ಯವಾಗಿರುವ ಮಾಹಿತಿಯ ಪ್ರಕಾರ ದೆಹಲಿಯಲ್ಲಿ ಇದುವರೆಗೆ 1,700 ಕ್ಕಿಂ ಹೆಚ್ಚು ಡೆಂಘೀ ಪ್ರಕರಣಗಳು ವರದಿಯಾಗಿವೆ. ಅಲ್ಲಿನ ಆಸ್ಪತ್ರೆಗಳಲ್ಲಿ ಕೇವಲ ಈ ರೋಗದಿಂದ ಬಳಲುತ್ತಿರುವ ರೋಗಿಗಳು ಮಾತ್ರ ಕಾಣಿಸುತ್ತಾರೆ.
ಕೊರೋನಾ ಸೋಂಕು ಬಹಳಷ್ಟು ಇಳಿಮುಖಗೊಂಡಿದೆ ಅಂತ ನಾವು ನಿರಾಳ ಭಾವ ತಲೆಯುವಂತಿಲ್ಲ ಮಾರಾಯ್ರೇ. ಕೊರೊನಾಕ್ಕಿಂತ ಮೊದಲು ಪ್ರತಿವರ್ಷ ನಮ್ಮನ್ನು ಕಾಡುತ್ತಿದ್ದ ಡೆಂಘೀ ರೋಗ ಕೊವಿಡ್ ಅಬ್ಬರದ ನಡುವೆ ಮಂಕಾಗಿತ್ತಾದರೂ ಈ ವರ್ಷ ಅದರ ಭರಾಟೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಅದರ ಉಪಟಳ ಹೆಚ್ಚಿಲ್ಲವಾದರೂ ನಾವು ಯಾವ ಕಾರಣಕ್ಕೂ ಯಾಮಾರುವಂತಿಲ್ಲ. ಗಮನಿಸಬೇಕಾದ ಸಂಗತಿಯೇನೆಂದರೆ, ಉತ್ತರ ಭಾರತದ ರಾಜ್ಯಗಳಲ್ಲಿ ಡೆಂಘೀ ಹಾವಳಿ ಹೆಚ್ಚಿದೆ. ಜಮ್ಮು ಮತ್ತು ಕಾಶ್ಮೀರ, ದೆಹಲಿ, ಉತ್ತರ ಪ್ರದೇಶ, ಪಂಜಾಬ್ ಮತ್ತು ರಾಜಸ್ತಾನ್ ನಲ್ಲಿ ಡೆಂಘೀಯಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಿದೆ.
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ದೆಹಲಿಯಲ್ಲಿ ಇದುವರೆಗೆ 1,700 ಕ್ಕಿಂ ಹೆಚ್ಚು ಡೆಂಘೀ ಪ್ರಕರಣಗಳು ವರದಿಯಾಗಿವೆ. ಅಲ್ಲಿನ ಆಸ್ಪತ್ರೆಗಳಲ್ಲಿ ಕೇವಲ ಈ ರೋಗದಿಂದ ಬಳಲುತ್ತಿರುವ ರೋಗಿಗಳು ಮಾತ್ರ ಕಾಣಿಸುತ್ತಾರೆ. ಪಂಜಾಬ್ ನಲ್ಲಿ ಡೆಂಘೀಗೆ 60 ಜನ ಬಲಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ರೋಗದಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲೂ ಡೆಂಘೀ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಈ ವರ್ಷವೇ ರೋಗದ ಪ್ರಭಾವ ಜಾಸ್ತಿಯಾಗಿದೆ.
ಡೆಂಘೀ ಕಾಯಿಲೆ ಉಂಟು ಮಾಡುವ ಸೊಳ್ಳೆಯನ್ನ ನಿರ್ನಾಮ ಮಾಡುವ ನಿಟ್ಟಿನಲ್ಲಿ ಈ ವರ್ಷ ಸಂಶೋಧನೆಗಳು ನಡೆಯುತ್ತಿವೆ. ಹಾಗೆ ನೋಡಿದರೆ, ಇದು ಸಾಂಕ್ರಾಮಿಕ ರೋಗವಲ್ಲ. ಏಡೆಸ್ ಏಜೆಪ್ಟಿ ಹೆಸರಿನ ಸೊಳ್ಳೆಯ ಮೂಲಕ ಈ ರೋಗ ಹರಡುತ್ತದೆ.
ಆದರೆ ಗಮನಿಸಬೇಕಿರುವ ಸಂಗತಿ ಏನೆಂದರೆ, ಈ ಸೊಳ್ಳೆ ಡೆಂಘೀಯಿಂದ ಬಳಲುತ್ತಿರುವ ರೋಗಿಗೆ ಕಚ್ಚಿದ ನಂತರವೇ ಅದು ವೈರಸ್ ನಿಂದ ಸೋಂಕಿತಗೊಂಡು ಬೇರೆಯವರಿಗೆ ಕಚ್ಚಿ ಅವರನ್ನು ರೋಗಗ್ರಸ್ಥರನ್ನಾಗಿ ಮಾಡುತ್ತದೆ.
ಅದು ಹೇಗಾದರೂ ಬರಲಿ ನಮ್ಮ ಎಚ್ಚರದಲ್ಲಿ ನಾವಿರಬೇಕು.
ಇದನ್ನೂ ಓದಿ: Shocking Video: ಬೈಕ್ಗಳಿಗೆ ಡಿಕ್ಕಿ ಹೊಡೆದು, ರಸ್ತೆಯ ಪಕ್ಕದವರ ಮೇಲೆ ಹರಿದ ಐಷಾರಾಮಿ ಕಾರು; ಶಾಕಿಂಗ್ ವಿಡಿಯೋ ವೈರಲ್