ದಸರಾ ಹಬ್ಬ ಎಲ್ಲ ಭಾರತೀಯರಿಗೆ ಒಂದೇಯಾದರೂ ಆಚರಣೆಗಳಲ್ಲಿ ಮಾತ್ರ ನಾನಾ ವಿಧ!
ನಮ್ಮ ರಾಜ್ಯದಲ್ಲಿ ಇದು ನಾಡಹಬ್ಬ. ಮೈಸೂರು ದಸರಾ ಮಹೋತ್ಸವ ವಿಶ್ವಪ್ರಸಿದ್ಧ. ಸುಮಾರು 10 ದಿನಗಳವರೆಗೆ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ.
ದೇಶದಾದ್ಯಂತ ಹಿಂದೂಗಳು ಆಚರಿಸುವ ಪ್ರಮುಖ ಮತ್ತು ದೊಡ್ಡ ಹಬ್ಬಗಳಲ್ಲಿ ದಸರಾ ಸಹ ಒಂದಾಗಿದ್ದು ವಿಜಯದಶಮಿ ಅಂತಲೂ ಕರೆಯುವ ಈ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಕೋವಿಡ್-19 ಕಳೆದರೆಡು ವರ್ಷಗಳಿಂದ ಎಲ್ಲ ಹಬ್ಬಗಳ ಮೇಲೆ ತನ್ನ ಕರಾಳ ಛಾಯೆ ಬೀರಿದೆಯಾದರೂ ಜನರಲ್ಲಿ ಉತ್ಸಾಹ ಮಾತ್ರ ತಗ್ಗಿಲ್ಲ. ಹಿಂದೂ ಧರ್ಮಶಾಸ್ತ್ರದ ಪ್ರಕಾರ 9 ದಿನಗಳ ನವರಾತ್ರಿ ಉತ್ಸವ ದಸರಾದೊಂದಿಗೆ ಕೊನೆಗೊಳ್ಳುತ್ತದೆ. ಇದೇ ದಿನದಂದು ರಾಮ ರಾವಣನನ್ನು ಕೊಂದಿದ್ದು. ಹಾಗೆಯೇ ದಸರಾದಂದೇ, ದುರ್ಗಾ ಮಾತೆಯು ಅಸುರರ ಅರಸ ಮಹಿಷಾಸುರನ ವಧೆ ಮಾಡಿದಳೆಂದು ಧರ್ಮಶಾಸ್ತ್ರದಲ್ಲಿ ಉಲ್ಲೇಖಿಲಾಗಿದೆ. ಹಾಗಾಗೇ, ಈ ಹಬ್ಬ ಕೆಟ್ಟತನದ ವಿರುದ್ಧ ಒಳ್ಳೆಯತನ ಗೆಲುವು ಸಾಧಿಸಿದ ದಿನವೆಂದು ಪರಿಗಣಿಸಲಾಗುತ್ತದೆ.
ನಮ್ಮ ರಾಜ್ಯದಲ್ಲಿ ಇದು ನಾಡಹಬ್ಬ. ಮೈಸೂರು ದಸರಾ ಮಹೋತ್ಸವ ವಿಶ್ವಪ್ರಸಿದ್ಧ. ಸುಮಾರು 10 ದಿನಗಳವರೆಗೆ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ. ಜಂಬೂ ಸವಾರಿ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆ.
ಮಂಗಳೂರು ಮತ್ತು ಮಡಿಕೇರಿಯಲ್ಲಿ ದಾಸರಾ ಹಬ್ಬವನ್ನು ಭಿನ್ನವಾಗಿ ಆಚರಿಸಲಾಗುತ್ತದೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಉತ್ತರ ಭಾರತದ ರಾಜ್ಯಗಳಲ್ಲಿ ಜನ ದಸರೆಯಂದು ರಾಮಲೀಲಾ ಅಯೋಜಿಸಿ ರಾವಣನ ಪ್ರತಿಕೃತಿಗಳ ದಹನ ಮಾಡುತ್ತಾರೆ. ಪಶ್ಚಿಮ ಬಂಗಾಳದಲ್ಲಿ 9 ದಿನಗಳ ಕಾಲ ದುರ್ಗಾಮಾತೆ ಪೂಜೆ ಸಲ್ಲಿಸಿದ ನಂತರ ದೇವಿಯ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.
ಹಿಮಾಚಲ ಪ್ರದೇಶದಲ್ಲಿ ವಿಜಯದಶಮಿಯನ್ನು ಕುಲು ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ರಾಜ್ಯದ ಜನ ದಸರಾ ಮುನ್ನಿನ ಉತ್ಸವಗಳನ್ನು 9 ದಿನಗಳ ಬದಲು ಕೇವಲ 7 ದಿನ ಮಾತ್ರ ಆಚರಿಸುತ್ತಾರೆ.
ರಾಜಸ್ತಾನಿಗಳಿಗೆ ದಸರೆಯೆಂದರೆ ಕೋಟಾ ಹಬ್ಬ. ಹಬ್ಬದ ಸಂದರ್ಭದಲ್ಲಿ ಭಜನೆ ಮತ್ತು ಕೀರ್ತನೆಗಳನ್ನು ಹಾಡಲಾಗುತ್ತದೆ.
ಇದನ್ನೂ ಓದಿ: Video: ಏಣಿ ಮೇಲೆ ನಡೆದು ಬಂದು ಕಾರು ಹತ್ತಿದ ವ್ಯಕ್ತಿ; ಕಾರಲ್ಲೇ ಏಣಿ ಇಟ್ಟು ಪ್ರಯಾಣ! ವಿಡಿಯೋ ನೋಡಿ