Fire Accident : “ಬೇಕರಿ”ಗೆ ಹಾಕಿದ ಲಕ್ಷಾಂತರ ರೂಪಾಯಿ ಬಂಡವಾಳ ಬೆಂಕಿಯಲ್ಲಿ ಹೋಮ

ಚಿಕ್ಕಮಗಳೂರಲ್ಲಿ ಬೆಂಕಿ ಅನಾಹುತಕ್ಕೆ 4 ಅಂಗಡಿಗಳು ಜನರ ಕಣ್ಮುಂದೆ ಹೊತ್ತಿ ಉರಿದಿವೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್​ನಲ್ಲಿ ಘಟನೆ ನಡೆದಿದೆ. ಸಾಲ ಮಾಡಿ ಬೇಕರಿಗೆ ಬಂಡವಾಳ ಹಾಕಿದ್ದ ಲಕ್ಷಾಂತರ ರೂಪಾಯಿ ಈಗ ಬೆಂಕಿಯಲ್ಲಿ ಹೋಮವಾಗಿ ಹೋಗಿದೆ ಅಂತಾ ಅಂಗಡಿಯ ಮಾಲೀಕ ವೆಂಕಟೇಶ್ ಕಣ್ಣೀರು ಹಾಕಿದ್ರು. ಇತ್ತ ದಿಕ್ಕು ತೋಚದೇ ಒಂದೊತ್ತಿನ ಊಟಕ್ಕೆ ಸಲೂನ್ ಹಾಕಿದ್ದ ದಿನೇಶ್ ಅಂಗಡಿಯೂ ಭಸ್ಮವಾಗಿದ್ದರಿಂದ ಕಂಗಾಲಾಗಿದ್ದಾರೆ. ಅದೇ ಸಾಲಿನಲ್ಲಿದ್ದ 3ನೇಯ ಮೊಬೈಲ್​ ಅಂಗಡಿಯು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಹೀಗಾಗಿ ಅಂಗಡಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದ ಫೈಜಲ್ ಸ್ಥಿತಿಯೂ ಹೇಳತೀರದ್ದಾಗಿದೆ. ಇನ್ನು ಪಾದರಕ್ಷೆ ಮಾರಿ ಜನಸಾಮಾನ್ಯರ ಅಂಗಾಲಿಗೆ ಬೆಂಗಾವಲಾಗಿದ್ದ ಶಬೀರ್ ಅಹ್ಮದ್ ಸ್ಥಿತಿಯೂ ಅತಂತ್ರವಾಗಿದೆ.

(Fire Accident In a Bakery At Chikkamagaluru)

Click on your DTH Provider to Add TV9 Kannada